Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA20 League 2023 Auction: ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅನ್‌ಸೋಲ್ಡ್‌

Temba bavuma

ಮುಂಬರುವ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿರುವ ಕೇಪ್ ಟೌನ್ ಇಂಟರ್‌ನ್ಯಾಷನಲ್‌ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದೆ. 2023ರ ಜನವರಿ - ಫೆಬ್ರವರಿಯಲ್ಲಿ ನಡೆಯಲಿದೆ ಎನ್ನಲಾಗಿರುವ ಟಿ20 ಲೀಗ್‌ ಕುರಿತಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಒಟ್ಟು ಆರು ಫ್ರಾಂಚೈಸಿಗಳು ಆಟಗಾರರ ಬಿಡ್ಡಿಂಗ್‌ನಲ್ಲಿ ಭಾಗಿಯಾಗಿದ್ದು, ಆಶ್ಚರ್ಯವೇನಂದ್ರೆ ಯಾವೊಂದು ಫ್ರಾಂಚೈಸಿಯು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾರನ್ನ ಖರೀದಿಸಲು ಮುಂದಾಗಲಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ನಾಯಕ ಟೆಂಬಾ ಬವುಮಾ ಅನ್‌ಸೋಲ್ಡ್ ಆಗಿದ್ದಾರೆ.

2023ರ ಟಿ20 ಲೀಗ್‌ನಲ್ಲಿ ಡರ್ಬನ್ ಸೂಪರ್ ಜೈಂಟ್ಸ್‌, ಜೋಬರ್ಗ್‌ ಸೂಪರ್ ಕಿಂಗ್ಸ್‌, ಎಂಐ ಕೇಪ್‌ ಟೌನ್, ಪರ್ಲ್ ರಾಯಲ್ಸ್‌, ಪ್ರಿಟೋರಿಯಾ ಕ್ಯಾಪಿಟಲ್ಸ್‌, ಸನ್‌ರೈಸರ್ಸ್ ಈಸ್ಟ್ರನ್ ಕೇಪ್‌ಟೌನ್‌ ಟಿ20 ಲೀಗ್‌ನಲ್ಲಿ ಭಾಗಿಯಾಗಲಿವೆ.

ಪೀಟರ್ ಹ್ಯಾಂಡ್ಸ್ಕಾಂಬ್ ಅನ್ನು ಹಿಂತೆಗೆದುಕೊಳ್ಳಲಾಗಿದ್ದು, ಮೊದಲು ಬಿಡ್ಡಿಂಗ್‌ಗೆ ಒಳಗಾಗಿದ್ದ ಶ್ರೀಲಂಕಾದ ದಿನೇಶ್ ಚಾಂಡಿಮಾಲ್ ಅನ್‌ಸೋಲ್ಡ್‌ ಆಗಿ ಉಳಿದಿದ್ದಾರೆ. ರೀಜಾ ಹೆಂಡ್ರಿಕ್ಸ್ R4.5M ಗೆ ಜೋಬರ್ಗ್ ಸೂಪರ್ ಕಿಂಗ್ಸ್‌ಗೆ ಸೇರಿದ್ದಾರೆ.

ಇನ್ನು ವೆಸ್ಟ್ ಇಂಡೀಸ್‌ನ ಶೈ ಹೋಪ್, ಕಾರ್ಲೋಸ್ ಬ್ರಾಥ್‌ವೈಟ್‌, ಲೆವಿಸ್ ಗ್ರೇಜೊಯ್, ದಕ್ಷಿಣ ಆಫ್ರಿಕಾ ಕೀಗನ್ ಪೀಟರ್ಸನ್, ಡೀನ್ ಎಲ್ಗರ್ ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ. ರಾಸ್ ಟೇಲರ್, ಸರೆಲ್ ಎರ್ವೀ, ಇಬ್ರಾಹಿಂ ಜದ್ರಾನ್ ಮತ್ತು ಅವಿಷ್ಕಾ ಫೆರ್ನಾಂಡೋ ಹೊಸ ಬ್ಯಾಟ್ಸ್‌ಮನ್‌ಗಳಾಗಿ ಮಾರಾಟವಾಗದಿದ್ದಾರೆ.

ರಾಯಲ್ಸ್ ಮತ್ತು ಕ್ಯಾಪಿಟಲ್ಸ್ ನಡುವಿನ ಗಂಭೀರ ಬಿಡ್ಡಿಂಗ್ ನಂತರ ಇಂಗ್ಲೆಂಡ್ ಅಂತರಾಷ್ಟ್ರೀಯ ಕ್ರಿಕೆಟಿಗ ಆದಿಲ್ ರಶೀದ್ R2.4 ಮಿಲಿಯನ್‌ಗೆ ಪ್ರಿಟೋರಿಯಾವನ್ನು ಸೇರಿದ್ದಾರೆ.

Story first published: Monday, September 19, 2022, 22:12 [IST]
Other articles published on Sep 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+