ಸೌತ್ ಆಫ್ರಿಕಾ ಟಿ20 ಲೀಗ್: ಟೂರ್ನಿಯ ದಿನಾಂಕ ಘೋಷಣೆ, 6 ತಂಡಗಳು ಭಾಗಿ

ಕ್ರಿಕೆಟ್ ಸೌತ್ ಆಫ್ರಿಕಾ ಆಯೋಜಿಸಲಿರುವ SA20 ಲೀಗ್‌ನ ಮೊದಲ ಆವೃತ್ತಿಯ ಆರಂಭಿಕ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಲೀಗ್ 10ನೇ ಜನವರಿ 2023 ರಂದು ಪ್ರಾರಂಭವಾಗುತ್ತದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಎಂಐ ಕೇಪ್ ಟೌನ್, ಡರ್ಬನ್ ಸೂಪರ್ ಜೈಂಟ್ಸ್, ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್, ಪಾರ್ಲ್ ರಾಯಲ್ಸ್, ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.
ಇವುಗಳಲ್ಲಿ ಆರು ಫ್ರಾಂಚೈಸಿಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಫ್ರಾಂಚೈಸಿಗಳು ಸ್ವಾಧೀನಪಡಿಸಿಕೊಂಡಿವೆ. ಒಟ್ಟು ಆರು ತಂಡಗಳಲ್ಲಿ ಪ್ರತಿ ತಂಡದಲ್ಲಿ 17 ಆಟಗಾರರಿದ್ದಾರೆ. ಪ್ರತಿ ತಂಡವು ಗರಿಷ್ಠ ಏಳು ಅಂತರಾಷ್ಟ್ರೀಯ ಆಟಗಾರರನ್ನು ಹೊಂದಿದೆ. ಇಲ್ಲವಾದರೆ, ಸನ್ ರೈಸರ್ಸ್ ಫ್ರಾಂಚೈಸಿ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು 5.20 ಲಕ್ಷ ಡಾಲರ್ ಗೆ ಖರೀದಿಸಿತು. ಈ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಆಗಿದ್ದು, ಹರಾಜು ಮುಗಿದ ಬಳಿಕ ತಂಡಗಳ ಆಟಗಾರರನ್ನೂ ಅಂತಿಮಗೊಳಿಸಲಾಗಿದೆ.

JSKಗೆ ಫಾಫ್ ಡುಪ್ಲೆಸಿಸ್ ನಾಯಕ
ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಫಾಫ್ ಡುಪ್ಲೆಸಿಸ್ ವಹಿಸಲಿದ್ದಾರೆ. ಮತ್ತೊಬ್ಬ ಮಾಜಿ ಸಿಎಸ್‌ಕೆ ಆಲ್‌ರೌಂಡರ್ ಆಲ್ಬಿ ಮೊರ್ಕೆಲ್ ತಂಡದ ಸಹಾಯಕ ಕೋಚ್ ಆಗಿದ್ದಾರೆ. ಜೋಬರ್ಗ್ ಸೂಪರ್ ಕಿಂಗ್ಸ್ ಆಟಗಾರರ ಹರಾಜನ್ನು ಗೆದ್ದುಕೊಂಡಿತು, ಅನೇಕ ಗುಣಮಟ್ಟದ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಅವರ ತಂಡಕ್ಕೆ ಆಯ್ಕೆ ಮಾಡಲಾಗಿದೆ ಮತ್ತು ಈ ಬಾರಿಯ ಋತುವಿನ ಗೆಲುವು ಅವರದ್ದಾಗಿದೆ ಎಂದು ಮಾರ್ಕೆಲ್ ಹೇಳಿದ್ದಾರೆ.
T20 World Cup 2022: ಬುಮ್ರಾ ಇಲ್ಲ ಅಂದ್ರೆ ಟ್ರೋಫಿ ಇಲ್ಲ : ಬಿಸಿಸಿಐ ವಿರುದ್ಧ ಅಭಿಮಾನಿಗಳ ಕೋಪ

ಹೊಸ ಲೀಗ್‌ನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೆಳವಣಿಗೆ!
ಈ ಲೀಗ್ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್, ಎಂಐ ಕೇಪ್ ಟೌನ್ ಜನರಲ್ ಮ್ಯಾನೇಜರ್ ರಾಬಿನ್ ಪೀಟರ್ಸನ್ ಹೇಳಿದ್ದು, ಮುಂಬರುವ ಲೀಗ್ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಬೆಳವಣಿಗೆಗೆ ನೆರವಾಗಲಿದೆ ಎಂದಿದ್ದಾರೆ.
'ಎಸ್‌ಎ20 ಲೀಗ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದು ದೇಶದ ಕ್ರಿಕೆಟ್‌ನಲ್ಲಿ ಕ್ರಾಂತಿ ಮಾಡಲಿದೆ. ಈ ಲೀಗ್ ಅನ್ನು ಸರಿಯಾದ ರೀತಿಯಲ್ಲಿ ಆಯೋಜಿಸಿದ್ರೆ, ಅದೊಂದು ದೊಡ್ಡ ಕಾರ್ಯಕ್ರಮವಾಗಲಿದೆ. ಕ್ರಿಕೆಟಿಗರಿಂದಲೂ ಭಾರೀ ಉತ್ಸಾಹ ಮೂಡಿತ್ತು. ಈಗ ಅದು ಆಗಲಿದೆ ಎಂದು ದಕ್ಷಿಣ ಆಫ್ರಿಕಾ ಹಲವು ವರ್ಷಗಳಿಂದ ಯೋಚಿಸುತ್ತಿದೆ. ಈ ಲೀಗ್ ನಲ್ಲಿ ಕ್ರಿಕೆಟಿಗರು ತಮ್ಮ ಕೈಚಳಕ ತೋರಿದ್ರೆ, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ತಂಡಕ್ಕೂ ವಿಶ್ವದ ವಿವಿಧ ದೇಶಗಳಲ್ಲಿ ಅವಕಾಶಗಳು ಸಿಗಲಿವೆ.' ರಾಬಿನ್ ಪೀಟರ್ಸನ್ ಹೇಳಿದರು.

ಜನವರಿ 10ರಿಂದ ಟೂರ್ನಿ ಆರಂಭ
ಜನವರಿ 10ರಂದು ನಡೆಯಲಿರುವ ಮೊದಲ ಪಂದ್ಯ ಸೇರಿದಂತೆ ಒಟ್ಟು 33 ಪಂದ್ಯಗಳು ಈ ಟೂರ್ನಿಯಲ್ಲಿ ನಡೆಯಲಿವೆ. ಎಲ್ಲಾ ತಂಡಗಳು ಲೀಗ್ ಹಂತಗಳಲ್ಲಿ ಎರಡು ಬಾರಿ ಮುಖಾಮುಖಿಯಾಗಲಿವೆ. ಆ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಸೆಮಿಸ್ ವಿಜೇತರು ಫೈನಲ್‌ನಲ್ಲಿ ಎದುರಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications