SA20 League: ಬೌಂಡರಿ ಲೈನ್‌ನಲ್ಲಿ ನಿರೂಪಕಿಗೆ ಡಿಕ್ಕಿ ಹೊಡೆದ ಫೀಲ್ಡರ್; ವಿಡಿಯೋ

ದಕ್ಷಿಣ ಆಫ್ರಿಕಾ ಟಿ20 ಲೀಗ್ (SA20) ಪಂದ್ಯಾವಳಿಯು ಅದ್ಧೂರಿಯಾಗಿ ಆರಂಭವಾಗಿದ್ದು, ಈ ಪ್ರೀಮಿಯರ್ ಫ್ರಾಂಚೈಸಿ ಪಂದ್ಯಾವಳಿಯಲ್ಲಿ ಕೆಲವು ರೋಚಕ ಪಂದ್ಯಗಳನ್ನು ಕಂಡಿದೆ.
ವಿಶ್ವದ ಹಲವು ಯುವ ಆಟಗಾರರು ತಮ್ಮ ಕ್ರಿಕೆಟ್ ಅನ್ನು ಪ್ರದರ್ಶಿಸಲು ಈ ಪಂದ್ಯಾವಳಿಯನ್ನು ವೇದಿಕೆಯನ್ನಾಗಿಸಿಕೊಂಡಿದ್ದು, ಈ ಮೂಲಕ ರಾಷ್ಟ್ರೀಯ ತಂಡದ ಬಾಗಿಲು ತಟ್ಟಲು ಸಿದ್ಧರಾಗಿದ್ದಾರೆ.
ಇನ್ನು ಜನವರಿ 18ರಂದು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ನಡೆದ ಮತ್ತೊಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಕರ ಗಮನ ಸೆಳೆದಿದೆ.
ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಎಂಐ ಕೇಪ್ ಟೌನ್ ನಡುವಿನ ರೋಚಕ ಪಂದ್ಯದಲ್ಲಿ ನಿರೂಪಕಿ ಝೈನಾಬ್ ಅಬ್ಬಾಸ್ ಅವರಿಗೆ ಮುಜುಗರ ತರಿಸುವ ಘಟನೆ ನಡೆಯಿತು.

ಪಂದ್ಯದ ವೇಳೆ ಝೈನಾಬ್ ಅಬ್ಬಾಸ್ ಬೌಂಡರಿ ಲೈನ್‌ನಲ್ಲಿ ಕಾಮೆಂಟರಿ ಮಾಡುತ್ತಿದ್ದಾಗ MI ಕೇಪ್ ಟೌನ್ ತಂಡದ ಇಬ್ಬರು ಫೀಲ್ಡರ್‌ಗಳು ಚೆಂಡನ್ನು ಬೆನ್ನತ್ತಿ ಬಂದರು. ಒಬ್ಬ ಫೀಲ್ಡರ್ ಡೈವ್ ಹೊಡೆದರೂ, ಬಾಲ್ ಬೌಂಡರಿ ಗೆರೆ ದಾಟಿತು.
ಇದೇ ವೇಳೆ ಬೌಂಡರಿ ಲೈನ್ ಬಳಿ ಇದ್ದ ಝೈನಾಬ್ ಅಬ್ಬಾಸ್ ಅವರಿಗೆ ಫೀಲ್ಡರ್ ಡಿಕ್ಕಿ ಹೊಡೆದಿದ್ದಾನೆ. ಆಗ ಝೈನಾಬ್ ಅಬ್ಬಾಸ್ ಕೆಳಗೆ ಬಿದ್ದರು. ಅಬ್ಬಾಸ್ ಅವರು ಕೆಳಗೆ ಬೀಳುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿದೆ.
ಇದು ಎರಡನೇ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಸ್ಯಾಮ್ ಕರ್ರಾನ್ ಅವರ ಅಂತಿಮ ಎಸೆತದಲ್ಲಿ ಮಾರ್ಕೊ ಜಾನ್ಸನ್ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಝೈನಾಬ್ ಅಬ್ಬಾಸ್ ಅವರು ತಕ್ಷಣ ಎದ್ದುನಿಂತು ಸ್ಟುಡಿಯೊದಲ್ಲಿನ ಕಾಮೆಂಟರಿ ತಂಡಕ್ಕೆ, ನಾನು ಚೆನ್ನಾಗಿದ್ದೇನೆ ಮತ್ತು ಕರುಳಿಗೆ ದೊಡ್ಡ ಹೊಡೆತ ಬಿದ್ದಿಲ್ಲ ಎಂದು ಖಚಿತಪಡಿಸಿದರು. ಆದರೂ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.
ಇದೇ ವೇಳೆ ಈ ಪಂದ್ಯದಲ್ಲಿ 27 ಎಸೆತಗಳಲ್ಲಿ 66 ರನ್ ಗಳಿಸಿದ ಮಾರ್ಕೊ ಜಾನ್ಸೆನ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಪಂದ್ಯವನ್ನು ಗೆದ್ದಿತು. 172 ರನ್‌ಗಳ ಗುರಿಯನ್ನು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಮೂರು ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications