ಸಚಿನ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಅಂದಿದ್ದು ಯಾಕೆ?
ಮುಂಬೈ,ನ.3: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಕಥನ 'ಪ್ಲೇಯಿಂಗ್ ಇಟ್ ಮೈ ವೇ' ಪುಸ್ತಕದಲ್ಲಿರುವ ಟೀಂ ಇಂಡಿಯಾದ ಮಾಜಿ ಕೋಚ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದು ಕರೆದಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗರು ಸಮರ್ಥನೆ ನೀಡಿದ್ದಾರೆ.
ಸಚಿನ್ ಹೇಳಿಕೆಗೆ ಗ್ರೆಗ್ ಚಾಪೆಲ್ ಮಂಗಳವಾರ ತಿರುಗೇಟು ನೀಡಿ, ನಾನು ಸಚಿನ್ ಗೆ ನಾಯಕನಾಗು ಎಂದು ಯಾವಾಗಲೂ ಒತ್ತಾಯಿಸಿರಲಿಲ್ಲ ಎಂದಿದ್ದರು. ಆದರೆ ಈಗ ಸೌರವ್ ಗಂಗೂಲಿ, ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಸಹ ತೆಂಡುಲ್ಕರ್ ಮಾತಿಗೆ ಧ್ವನಿಗೂಡಿಸಿದ್ದಾರೆ. [ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದ ಸಚಿನ್]
ಚಾಪೆಲ್ ಕೋಚ್ ಆಗಿದ್ದ ವೇಳೆ ತಂಡದಲ್ಲಿದ್ದ ಪ್ರಮುಖ ಆಟಗಾರರು ನೀಡಿರುವ ಹೇಳಿಕೆ ಆಸ್ಟ್ರೇಲಿಯಾದ ಮಾಜಿ ಆಟಗಾರನ ವ್ಯಕ್ತಿತ್ವ ಹರಾಜು ಹಾಕಿದೆ.

ಮಾಜಿ ನಾಯಕ ಏನು ಹೇಳಿದರು?
ನಾಯಕರಾಗಿದ್ದ ರಾಹುಲ್ ದ್ರಾವಿಡ್ ಬಳಿ ಚಾಪೆಲ್ ಅವರನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ತಾವು ಹೇಳಿದಂತೆ ಇತರ ಆಟಗಾರರು ಸಹ ಕೇಳಬೇಕೆಂದು ಚಾಪೆಲ್ ಬಯಸುತ್ತಿದ್ದರು, ಅದು ಒಳ್ಳೆಯದಿರಲಿ ಕೆಟ್ಟದಿರಲಿ ಅವರಿಗೆ ಸಂಬಂಧ ಇರಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

2007 ವಿಶ್ವಕಪ್ ಕರಾಳ ನೆನಪು
2007 ವಿಶ್ವಕಪ್ ನಲ್ಲಿ ಭಾರತ ಪ್ರಥಮ ಸುತ್ತಿನಲ್ಲಿಯೇ ಹೊರಬಿದ್ದಿತು. ತಂಡದ ಒಳಗೆ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ ಸಂಘಟಿತ ಹೋರಾಟ ಹೇಗೆ ಸಾಧ್ಯವಾಗುತ್ತದೆ ಎಂದು ಬಂಗಾಳದ ಮಹಾರಾಜ ಪ್ರಶ್ನಿಸಿದ್ದಾರೆ.

ಹಿಂದಕ್ಕೆ ಒಯ್ದ ಚಾಪೆಲ್
ಭಾರತದ ಕ್ರಿಕೆಟ್ ನ್ನು ಮತ್ತಷ್ಟು ಹಿಂದಕ್ಕೆ ಒಯ್ದ ಖ್ಯಾತಿ ಚಾಪೆಲ್ ಗೆ ಸಲ್ಲುತ್ತದೆ ಎಂದು ಕಲಾತ್ಮಕ ಆಟಗಾರ ವಿವಿಎಸ್ ಲಕ್ಷಣ್ ವ್ಯಂಗವಾಡಿದ್ದಾರೆ.

ಆಫ್ ಸ್ಪಿನರ್ ಏನಂದ್ರು?
ಸದಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದ ಚಾಪೆಲ್ ಸತ್ಯವನ್ನು ಮಾಸ್ಟರ್ ಹೊರಕ್ಕೆ ಹಾಕಿದ್ದಾರೆ. ಇಷ್ಟು ದಿನದ ನಂತರವಾದರೂ ಸತ್ಯ ಹೊರಬಂದಿದ್ದಕ್ಕೆ ಸಂತಸವಾಗುತ್ತಿದೆ. ಭಾರತೀಯ ಕ್ರಿಕೆಟ್ ಗೆ ತಾತ್ಕಾಲಿಕ ಅಂತ್ಯ ಹಾಡಿದಂತೆ ಮಾಡಿದ್ದು ಚಾಪೆಲ್ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಜಹೀರ್ ಖಾನ್ ಮಾತೇನು?
ಬಹಳ ಸರಳವಾಗಿ ಚಾಪೆಲ್ ಕೆಟ್ಟ ಮುಖ ಹೊರಕ್ಕೆ ಬಂದಿದೆ. ಭಾರತ ತಂಡವನ್ನು ಸದಾ ಒಡೆಯಲು ಬಯಸುತ್ತಿದ್ದ ಚಾಪೆಲ್ ಆಟಗಾರರಲ್ಲಿ ವಿಷ ಬೀಜ ಬಿತ್ತುತ್ತಿದ್ದರು. ಅಲ್ಲದೇ ಕೆಲವೊಮ್ಮೆ ಕ್ಷುಲ್ಲಕವಾಗಿ ವರ್ತಿಸುತ್ತಿದ್ದರು. ಅಲ್ಲದೇ ನನ್ನ ಬೌಲಿಂಗ್ ವೃತ್ತಿ ಜೀವನವನ್ನೇ ಮುಗಿಸಲು ಪ್ರಯತ್ನಿಸಿದ್ದರು ಎಂದು ವೇಗಿ ಜಹೀರ್ ಖಾನ್ ಹೇಳಿದ್ದಾರೆ.

ರಿಂಗ್ ಮಾಸ್ಟರ್
ಒಂದು ಕಾಲದ ಭಾರತದ ಕ್ರಿಕೆಟ್ ಆಧಾರ ಸ್ತಂಭದಂದಿದ್ದ ಆಟಗಾರರು ಚಾಪೆಲ್ ಕುರಿಯತಾಗಿ ನೀಡುತ್ತಿರುವ ಹೇಳಿಕೆ ಗಮನಿಸಿದರೆ ಸಚಿನ್ ರಿಂಗ್ ಮಾಸ್ಟರ್ ಎಂದು ಕರೆದಿದ್ದಕ್ಕೆ ಅರ್ಥ ತಿಳಿಯುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications