For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಸಚಿನ್ ಹೊಸ ಇನ್ನಿಂಗ್ಸ್!

Sachin Opens Again: Sachin Tendulkar Set For Another Debut In World Cup Opener

ಲಂಡನ್, ಮೇ 30: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಈ ಬಾರಿಯ ವಿಶ್ವಕಪ್ ಉದ್ಘಾಟನಾ ಪಂದ್ಯದ ಮೂಲಕ ಮತ್ತೆ ಕ್ರಿಕೆಟ್ ರಂಗಕ್ಕೆ ಜಿಗಿಯಲಿದ್ದಾರೆ. ಆದರೆ ಅದು ಕ್ರಿಕೆಟ್ ಆಗಿ ಅಲ್ಲ, ಬದಲಿಗೆ ಕಾಮೆಂಟೇಟರ್ ಆಗಿ ಸಚಿನ್ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮೇ 30ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ನಡುವಣ ಉದ್ಘಾಟನಾ ಪಂದ್ಯದಲ್ಲಿ ತೆಂಡೂಲ್ಕರ್ ಕಾಮೆಂಟರಿ ಬಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ 1.30ಕ್ಕೆ ನಡೆಯಲಿರುವ 'ಸಚಿನ್ ಓಪನ್ಸ್ ಅಗೇನ್' ಎನ್ನುವ ಹಿಂದಿ-ಇಂಗ್ಲಿಷ್ ವಿಶೇಷ ಕಾರ್ಯಕ್ರಮದಲ್ಲೂ ಸಚಿನ್ ಪಾಲ್ಗೊಳ್ಳಲಿದ್ದಾರೆ.

ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಮೇ 30, ಕ್ರಿಕೆಟ್ ವಿಶ್ವಕಪ್ Live ಸ್ಕೋರ್‌ಕಾರ್ಡ್

1
43644

ಒಟ್ಟು 6 ವಿಶ್ವಕಪ್ ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್ 2,278 ರನ್ ಕಲೆ ಹಾಕಿದ್ದರು. ಅಲ್ಲದೆ ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ರನ್ ದಾಖಲೆಗಾಗಿ ಸಚಿನ್ ಗುರುತಿಸಿಕೊಂಡಿದ್ದರು. 2003ರಲ್ಲಿ ಒಟ್ಟು 11 ಇನ್ನಿಂಗ್ಸ್‌ಗಳಲ್ಲಿ ತೆಂಡೂಲ್ಕರ್ 673 ರನ್ ಬಾರಿಸಿದ್ದರು.

16ರ ಹರೆಯದಲ್ಲಿ 1989ರಲ್ಲಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಮಾಸ್ಟರ್ ಬ್ಲಾಸ್ಟರ್, ಸುಮರು 24 ವರ್ಷಗಳನ್ನು ವೃತ್ತಿ ಜೀವನಾಗಿ ಕ್ರಿಕೆಟ್ ಅಂಕಣದಲ್ಲಿ ಕಳೆದಿದ್ದಾರೆ. ಒಟ್ಟಾರೆ ಸಚಿನ್ 34,357 ರನ್ ಕಲೆ ಹಾಕಿದ್ದಾರೆ. 2013ರಲ್ಲಿ ಲಿಟ್ಲ್ ಮಾಸ್ಟರ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

ಟೆಸ್ಟ್ ನಲ್ಲಿ 15,921 ರನ್, ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 18,426 ರನ್ ಹೀಗೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30,000ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಏಕಮಾತ್ರ ಕ್ರಿಕೆಟರ್ ಸಚಿನ್. ಟೆಸ್ಟ್ ನಲ್ಲಿ 51 ಶತಕಗಳು ಮತ್ತು ಏಕದಿನದಲ್ಲಿ 49 ಶತಕಗಳು ಹೀಗೆ ಒಟ್ಟು 100 ಶತಕಗಳ ವಿಶ್ವ ದಾಖಲೆಯೂ ಸಚಿನ್ ಹೆಸರಲ್ಲಿದೆ.

Story first published: Thursday, May 30, 2019, 11:49 [IST]
Other articles published on May 30, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+