Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಝ್ಝಿ ಟ್ರೋಫಿಗಾಗಿ ಮುಂಬೈ ತಂಡದಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್

Sachin’s son Arjun Tendulkar in Mumbai’s Vizzy Trophy squad

ಮುಂಬೈ, ಆಗಸ್ಟ್ 7: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮುಂಬರಲಿರುವ ವಿಝ್ಝಿ ಟ್ರೋಫಿ ಟೂರ್ನಿಗಾಗಿ ಮುಂಬೈಯ 15 ಜನರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟೂರ್ನಿ ಆಂಧ್ರ ಪ್ರದೇಶದಲ್ಲಿ ಆಗಸ್ಟ್ 22ರಿಂದ ಆರಂಭಗೊಳ್ಳಲಿದೆ.

50 ಓವರ್‌ಗಳ ಓಪನ್ ಟೂರ್ನಿಗಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ (ಆಗಸ್ಟ್ 6) ಪ್ರಕಟಿಸಿರುವ ತಂಡದಲ್ಲಿ ಎಡಗೈ ವೇಗಿ ಅರ್ಜುನ್ ಹೆಸರಿದೆ. ಟಿ20 ಮುಂಬೈ ಲೀಗ್‌ನಲ್ಲಿ 19ರ ಹರೆಯದ ಅರ್ಜುನ್ 5 ಲಕ್ಷ ರೂ.ಗಾಗಿ ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್‌ ಪಾಲಾಗಿದ್ದರು.

ಮುಂಬೈ ಯುವ ಕ್ರಿಕೆಟರ್ ಅರ್ಜುನ್, ಟೀಮ್ ಇಂಡಿಯಾಕ್ಕೆ ನೆಟ್‌ ಬೌಲರ್ ಆಗಿಯೂ ದುಡಿದ ಅನುಭವ ಹೊಂದಿದ್ದಾರೆ. ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಅಂಡರ್ 19 ತಂಡದಲ್ಲಿ ಆಡಿದ್ದ ಅರ್ಜುನ್ ತೆಂಡೂಲ್ಕರ್, ಸ್ವಿಂಗ್‌ ಎಸೆತಕ್ಕಾಗಿ ಪ್ರಭಾವ ಬೀರಿದ್ದರು.

ಮುಂಬೈ ತಂಡ: ಹಾರ್ದಿಕ್ ತಾಮೋರ್ (ನಾಯಕ), ಸೃಜನ್ ಅಥಾವಳೆ, ರುದ್ರ ಧಂಡೆ, ಚಿನ್ಮಯ್ ಸುತಾರ್, ಆಶಯ್ ಸರ್ದೇಸಾಯಿ, ಸಾಯಿರಾಜ್ ಪಾಟೀಲ್, ಓಂಕಾರ್ ಜಾಧವ್, ಸತ್ಯಲಕ್ಷ ಜೈನ್, ಮಿನಾದ್ ಮಂಜ್ರೇಕರ್, ಅರ್ಜುನ್ ತೆಂಡೂಲ್ಕರ್, ಅಮನ್ ಶೆರಾನ್, ಅಥರ್ವ ಪೂಜಾರಿ, ಮ್ಯಾಕ್ಸ್‌ವೆಲ್ ಸ್ವಾಮಿನಾಥನ್, ಪ್ರಶಾಂತ್ ಸೋಲಂಕಿ, ವಿಘ್ನೇಶ್ ಸೋಲಂಕಿ.

Story first published: Wednesday, August 7, 2019, 11:32 [IST]
Other articles published on Aug 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+