Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟ್ ಬೀಸಲಿರುವ ಸಚಿನ್, ಸೆಹ್ವಾಗ್, ಲಾರಾ

Sachin, Sehwag, Brian Lara back to the field | Oneindia Kannada
Sachin, Sehwag, Lara to play in T20 tournament for a cause

ಲಂಡನ್, ಅಕ್ಟೋಬರ್ 15: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರು ಮುಂದಿನ ವರ್ಷದಲ್ಲಿ ಟಿ20 ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ.

ರಸ್ತೆ ಸುರಕ್ಷತೆಗಾಗಿ ನಡೆಯಲಿರುವ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಈ ದಿಗ್ಗಜ ಆಟಗಾರರು ಆಡಲಿದ್ದಾರೆ. ಇವರ ಜೊತೆಗೆ ಮುತ್ತಯ್ಯ ಮುರಳೀಧರನ್, ಜಾಕ್ ಕಾಲೀಸ್, ಶಿವನಾರಾಯಣ್ ಚಂದ್ರಪಾಲ್ ಹಾಗೂ ಬ್ರೆಟ್ ಲೀ ಅವರು ಕೂಡಾ ಈ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.

2013ರಲ್ಲಿ ನಿವೃತ್ತಿ ಹೊಂದಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ 2014ರಲ್ಲಿಎಂಸಿಸಿ ವಿರುದ್ಧ ಶೇಷ ವಿಶ್ವ ತಂಡದಲ್ಲಿ ಆಡಿದ್ದರು, ನಂತರ 2015ರಲ್ಲಿ ಯುಎಸ್ಎನಲ್ಲಿ ಟಿ20 ಟೂರ್ನಮೆಂಟ್ ನಲ್ಲಿ ಕಾಣಿಸಿಕೊಂಡಿದ್ದರು.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಭಾರತದ ಮಾಜಿ ಕ್ರಿಕೆಟರ್ ಗಳನ್ನೊಳಗೊಂಡ ವಿಶ್ವಟಿ20 ಸರಣಿ ವಾರ್ಷಿಕವಾಗಿ ಆಯೋಜಿಸಲಾಗುತ್ತದೆ. ಈ ಬಾರಿ ಭಾರತದಲ್ಲಿ ಫೆಬ್ರವರಿ 2 ರಿಂದ 16ರ ತನಕ ಪಂದ್ಯಾವಳಿ ನಡೆಯುವ ನಿರೀಕ್ಷೆಯಿದೆ.

Story first published: Tuesday, October 15, 2019, 22:25 [IST]
Other articles published on Oct 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+