Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತೆಂಡೂಲ್ಕರ್, ಅಲನ್ ಡೊನಾಲ್ಡ್‌ಗೆ 'ಐಸಿಸಿ ಹಾಲ್ ಆಫ್ ಫೇಮ್' ಗೌರವ

Sachin Tendulkar, Allan Donald inducted in ICC Hall of Fame

ನವದೆಹಲಿ, ಜುಲೈ 19: ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್, ದಕ್ಷಿಣ ಆಫ್ರಿಕಾ ಮಾಜಿ ವೇಗಿ ಅಲನ್ ಡೊನಾಲ್ಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕಿ ಕ್ಯಾಥರಿನ್ ಫಿಟ್ಜ್‌ಪ್ಯಾಟ್ರಿಕ್ ಅವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಹಾಲ್ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ಶುಕ್ರವಾರ (ಜುಲೈ 19) ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿನ್, 'ನನಗಿದು ದೊಡ್ಡ ಗೌರವವಾಗಿದೆ,' ಎಂದು ಪ್ರತಿಕ್ರಿಯಿಸಿದರು. 46ರ ಹರೆಯದ ಸಚಿನ್ ಮತ್ತು ಸರ್ ಡೊನಾಲ್ಡ್ ಬ್ರಾಡ್‌ಮನ್‌ ಇಬ್ಬರೂ ಏಕದಿನ ಮತ್ತು ಟೆಸ್ಟ್ ನಲ್ಲಿ ಶ್ರೇಷ್ಠ ಆಟಗಾರರಾಗಿ ಗುರುತಿಸಿಕೊಂಡಿದ್ದವರು.

ಎಲ್ಲಾ ಮಾದರಿಯ ಕ್ರಿಕೆಟ್‌ ಸೇರಿ ಒಟ್ಟು 34,357 ದಾಖಲೆ ಹೊಂದಿರುವ ತೆಂಡೂಲ್ಕರ್, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 100 ಶತಕಗಳ ವಿಶ್ವದಾಖಲೆ ಹೊಂದಿದ್ದಾರೆ. ಅತ್ಯುತ್ತಮ ಬೌಲರ್‌ಗಳ ಸಾಲಿನಲ್ಲಿ ಗಮನ ಸೆಳೆದಿದ್ದ, 52ರ ಹರೆಯದ ಡೊನಾಲ್ಡ್, 330 ಟೆಸ್ಟ್ ಮತ್ತು 272 ಏಕದಿನ ವಿಕೆಟ್ ಪಡೆದಿದ್ದಾರೆ.

ಫಿಟ್ಜ್‌ಪ್ಯಾಟ್ರಿಕ್ ಅವರು ಮಹಿಳಾ ಕ್ರಿಕೆಟ್‌ನಲ್ಲೇ ಸರ್ವಕಾಲಿಕ ಎರಡನೇ ಶ್ರೇಷ್ಠ ವಿಕೆಟ್ ಸಾಧಕಿಯಾಗಿ ಗುರುತಿಸಿಕೊಂಡಿದ್ದವರು. 180 ಏಕದಿನ ಮತ್ತು 60 ಟೆಸ್ಟ್ ವಿಕೆಟ್‌ ದಾಖಲೆ ಕ್ಯಾಥರಿನ್ ಹೆಸರಿನಲ್ಲಿದೆ. ಕೋಚ್ ಆಗಿ ಫಿಟ್ಜ್‌ಪ್ಯಾಟ್ರಿಕ್, ಮೂರುಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

Story first published: Friday, July 19, 2019, 15:49 [IST]
Other articles published on Jul 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+