Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ ಒಲಿದ 7ನೇ ಏಷ್ಯಾ ಫೆಲೋಶಿಪ್ ಪ್ರಶಸ್ತಿ

ಲಂಡನ್‌, ಮೇ 07 : ವಿಶ್ವ ಕಂಡ ಶ್ರೇಷ್ಠ ಮಹಾನ್ ಕ್ರಿಕೆಟ್ ದಿಗ್ಗಜ ಭಾರತದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ 7ನೇ ವಾರ್ಷಿಕ ಏಷ್ಯಾ ಪ್ರಶಸ್ತಿ ಒಲಿದಿದೆ.

7ನೇ ವಾರ್ಷಿಕ ಏಷ್ಯಾ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಗೆ ಶನಿವಾರ ರಾತ್ರಿ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Sachin Tendulkar conferred with Fellowship Award in UK

ತೆಂಡೂಲ್ಕರ್ ಅವರ 24 ವರ್ಷಗಳ ಕ್ರಿಕೆಟ್‌ ಬದುಕು ಹಾಗೂ ಕ್ರಿಕೆಟ್‌ ನಿಂದಾಚೆ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಈ ಪ್ರಶಸ್ತಿ ಸಂದಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿನ್‌ ''ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿ​ರುವುದು ಖುಷಿ ನೀಡುತ್ತಿದೆ.

ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವವರಿಗೆ ಸಂಘ ಸಂಸ್ಥೆಗಳ ಜತೆಗೂಡಿ ನೆರವು ನೀಡಲು ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಸೌರಶಕ್ತಿ ಬಳಸಿ ಬಡಜನರಿಗೆ ವಿದ್ಯುತ್‌ ನೀಡುವುದು ನನ್ನ ಮುಖ್ಯ ಉದ್ದೇಶವಾಗಿದೆ'' ಎಂದರು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+