ಅಸ್ಸಾಂ ಆಸ್ಪತ್ರೆಗೆ ತೆಂಡೂಲ್ಕರ್‌ರಿಂದ ವೈದ್ಯಕೀಯ ಸಲಕರಣೆ ಕೊಡುಗೆ

ಗುವಾಹಟಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಅಸ್ಸಾಂನ ಚಾರಿಟಿ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕೊಡುಗೆ ನೀಡಿದ್ದಾರೆ. ಸಚಿನ್ ಈ ಕೊಡುಗೆಯಿಂದ ಬಡ ಕುಟುಂಬಗಳಿಂದ ಬರುವ ಸುಮಾರು 2,000 ಮಕ್ಕಳಿಗೆ ಅನುಕೂಲವಾಗಲಿದೆ.
ಯುನಿಸೆಫ್ (UNICEF)ನ ಪ್ರಚಾರ ರಾಯಭಾರಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (PICU) ವೈದ್ಯಕೀಯ ಸಲಕರಣೆಗಳನ್ನು ಕೊಡುಗೆ ನೀಡಿದ್ದಾರೆ. ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿರುವ ಮುಕುಂದ ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕಕ್ಕೂ (NICU) ಸಲಕರಣೆಗಳನ್ನು ನೀಡಿದ್ದಾರೆ.
ತೆಂಡೂಲ್ಕರ್ ಫೌಂಡೇಶನ್ ಈಗಾಗಲೇ ಮಧ್ಯಪ್ರದೇಶದ ಬುಡಕಟ್ಟು ಜನಾಂಗಕ್ಕೆ ಪೌಷ್ಟಿಕ ಆಹಾರ ಮತ್ತು ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದೆ. ಈಶಾನ್ಯ ಭಾಗದಲ್ಲಿರುವ ಅನೇಕ ಬಡಕುಟುಂಬಗಳಿಗೂ ಸಚಿನ್ ಸಂಸ್ಥೆ ನೆರವಿನ ಹಸ್ತ ಚಾಚುತ್ತಿದೆ.
ಮುಕುಂದ ಆಸ್ಪತ್ರೆಯ ಪೀಡಿಯಾಟ್ರಿಕ್ ಸರ್ಜನ್ ಡಾ. ವಿಜಯ್ ಆನಂದ್ ಇಸ್ಮಾಯಿಲ್ ಸಚಿನ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 'ಏಕಂ ಫೌಂಡೇಶನ್ ಜೊತೆ ಸೇರಿ ಸಚಿನ್ ತೆಂಡೂಲ್ಕರ್ ಫೌಂಡೇಶನ್ ಮಾಡಿದ ನೆರವಿನಿಂದ ಅನೇಕ ಬಡ ಕುಟುಂಬಗಳಿಗೆ ಕಡಿಮೆ ಖರ್ಚಿನಲ್ಲಿ ಸೇವೆ ನೀಡಲು ಸಹಾಯವಾಗಿದೆ,' ಎಂದು ವಿಜಯ್ ಆನಂದ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications