Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವಿರುದ್ಧದ ಹೋರಾಟಕ್ಕೆ ಸಚಿನ್ ತೆಂಡೂಲ್ಕರ್ ಆರ್ಥಿಕ ಸಹಾಯ

Sachin Tendulkar donates Rs 50 lakh to fight COVID-19

ಮುಂಬೈ, ಮಾರ್ಚ್ 27: ಭಾರತದ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯ ನೀಡಿದ್ದಾರೆ. ಕೊರೊನಾವೈರಸ್ ತಡೆಗೆ ಸಚಿನ್ 50 ಲಕ್ಷ ರೂ. ನೆರವು ನೀಡಿದ್ದಾರೆ. ಕೋವಿಡ್-19 ಸೋಂಕಿನಿಂದಾಗಿ ಭಾರತದಲ್ಲಿ ಈಗಾಗಲೇ ಸುಮಾರು 17 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಭಾರತದ ಅನೇಕ ಕ್ರೀಡಾತಾರೆಯರು ನೆರವಿತ್ತಿದ್ದಾರೆ. ಇರಲ್ಲಿ ಸಚಿನ್ ನೀಡಿರುವ ಆರ್ಥಿಕ ಸಹಾಯ ಕೊಂಚ ದೊಡ್ಡ ಮಟ್ಟದ್ದು. ನೆರವಿತ್ತ ಕ್ರೀಡಾಪಟುಗಳಲ್ಲಿ ಕೆಲವರು ವೈದ್ಯಕೀಯ ವಸ್ತುಗಳನ್ನು ಅಗತ್ಯವಿದ್ದವರಿಗೆ ದಾನ ಮಾಡಿದ್ದಾರೆ.

'ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಚಿನ್ ತೆಂಡೂಲ್ಕರ್ ಅವರು ತಲಾ 25 ಲಕ್ಷವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಎರಡೂ ಪರಿಹಾರ ನಿಧಿಗೆ ದೇಣಿಗೆ ನೀಡಲು ಸಚಿನ್ ಬಯಸಿದ್ದರು,' ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ಚಾರಿಟಿಗಳನ್ನು ನಡೆಸುತ್ತ, ಸಹಾಯ ಬೇಕಿದ್ದವರಿಗೆ ನೆರವೂ ನೀಡುವ ಸಚಿನ್ ತೆಂಡೂಲ್ಕರ್ ಇದಕ್ಕಾಗಿ ಹೆಚ್ಚಾಗಿ ಪ್ರಚಾರ ಗಿಟ್ಟಿಸಿಕೊಂಡವರಲ್ಲ. ಇತ್ತೀಚೆಗೆ ಯೂಸುಫ್ ಪಠಾಣ್-ಇರ್ಫಾನ್ ಪಠಾಣ್ ಕೂಡ ಸುಮಾರು 4000 ಮಾಸ್ಕ್‌ಗಳನ್ನು ಕೊಡುಗೆ ನೀಡಿದ್ದರು. ಇನ್ನು ಗಂಗೂಲಿ 5 ಲಕ್ಷ ರೂ ಮೌಲ್ಯದ ಅಕ್ಕಿ ದಾನ, ಎಂಎಸ್ ಧೋನಿ 1 ಲಕ್ಷ ರೂ., ಪಿವಿ ಸಿಂಧು 10 ಲಕ್ಷ ರೂ. ಸಹಾಯ ನೀಡಿದ್ದಾರೆ.

Story first published: Friday, March 27, 2020, 12:49 [IST]
Other articles published on Mar 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+