ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಆಟ ನಿಲ್ಲಿಸಿದ ದಿನವಿದು

Sachin Tendulkar hails Yuvraj Singhs six-hitting ability on his retirement anniversary

ನವದೆಹಲಿ, ಜೂನ್ 10: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಜೂನ್ 10ಕ್ಕೆ ಸರಿಯಾಗಿ ಒಂದು ವರ್ಷ ತುಂಬುತ್ತದೆ. 2019ರ ಜೂನ್ 10ರಂದು ಕೆಚ್ಚೆದೆಯ ಮಹಾರಾಜ ಯುವಿ ಅಂತಾರಾಷ್ಟ್ರೀಯ ಆಟ ನಿಲ್ಲಿಸಿದ್ದರು.

24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!24 ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿಶಿಷ್ಠ ಗೆಲುವು ದಾಖಲಿಸಿದ್ದು ಇದೇ ದಿನ!

ಜೂನ್ 10ರ ಬುಧವಾರ #MissYouYuvi ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗತೊಡಗಿದೆ. ಕ್ರಿಕೆಟ್ ರಸದೌತಣ ಉಣಬಡಿಸುತ್ತಿದ್ದ ಯುವರಾಜ್ ಸಿಂಗ್ ಅವರನ್ನು ಈ ದಿನ ಕ್ರಿಕೆಟ್ ಅಭಿಮಾನಿಗಳು ಸ್ಮರಿಸಿಕೊಂಡಿದ್ದಾರೆ. ಯುವಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಪಂದ್ಯದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

ಜಾಫರ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಟೀಮ್ ಇಂಡಿಯಾ ಏಕದಿನ ತಂಡ ಹೇಗಿದೆ ನೋಡಿ!ಜಾಫರ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಟೀಮ್ ಇಂಡಿಯಾ ಏಕದಿನ ತಂಡ ಹೇಗಿದೆ ನೋಡಿ!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಯುವಿಯ ಸಿಕ್ಸ್ ಚಚ್ಚುವ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಚೆನ್ನೈ ಕ್ಯಾಂಪ್‌ನಲ್ಲಿದ್ದಾಗ ಯುವಿಯ ಚುರುಕುತನವನ್ನು ಗಮನಿಸಿದ್ದಾಗಿ ಹೇಳಿಕೊಂಡಿದ್ದಾರೆ. 'ನಿನ್ನ (ಯುವಿ) ಸಿಕ್ಸ್ ಬಾರಿಸುವ ಸಾಮರ್ಥ್ಯದ ಬಗ್ಗೆ ನಾನು ಮಾತನಾಡುವ ಅವಶ್ಯಕತೆಯಿಲ್ಲ. ಜಗತ್ತಿನ ಯಾವ ಗ್ರೌಂಡ್‌ನ ಮೂಲೆಗೂ ಚೆಂಡು ಅಟ್ಟಬಲ್ಲೆ ಅನ್ನೋದಕ್ಕೆ ನಿನ್ನ ಸಿಕ್ಸ್ ಸಿಕ್ಸ್ ಸಾಕ್ಷಿ,' ಎಂದು ಸಚಿನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸೇಡು ಬೇಕಿಲ್ಲ, ನಮಗೆ ಸಮಾನತೆ ಮತ್ತು ಗೌರವ ಬೇಕು: ಡ್ವೇನ್ ಬ್ರಾವೋಸೇಡು ಬೇಕಿಲ್ಲ, ನಮಗೆ ಸಮಾನತೆ ಮತ್ತು ಗೌರವ ಬೇಕು: ಡ್ವೇನ್ ಬ್ರಾವೋ

ಬ್ಯಾಟಿಂಗ್ ಆಲ್ ರೌಂಡರ್ ಯುವಿ 40 ಟೆಸ್ಟ್ ಪಂದ್ಯಗಳಲ್ಲಿ 1900 ರನ್, 9 ವಿಕೆಟ್, 304 ಏಕದಿನ ಪಂದ್ಯಗಳಲ್ಲಿ 8701 ರನ್, 111 ವಿಕೆಟ್, 58 ಟಿ20ಐ ಪಂದ್ಯಗಳಲ್ಲಿ 1177 ರನ್, 28 ವಿಕೆಟ್ ದಾಖಲೆ ಹೊಂದಿದ್ದಾರೆ. ಏಕದಿನದಲ್ಲಿ 155 ಸಿಕ್ಸ್‌, ಟಿ20ಯಲ್ಲಿ 74 ಸಿಕ್ಸ್‌, ಐಪಿಎಲ್‌ನಲ್ಲಿ 149 ಸಿಕ್ಸ್‌ಗಳನ್ನು ಬಾರಿಸಿದ್ದಾರೆ.

Story first published: Thursday, June 11, 2020, 9:58 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X