ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ಟೆಸ್ಟ್: ಕೊಹ್ಲಿ ಬಳಗಕ್ಕೆ 'ಚೆಂಡಿನ ಒರಟುತನದ ಗುಟ್ಟು' ಬಿಚ್ಚಿಟ್ಟ ಸಚಿನ್!

ವಿರಾಟ್ ಮತ್ತು ತಂಡಕ್ಕೆ ವಿಶೇಷ ಟಿಪ್ ನೀಡಿದ 'ಪಾಜೀ' | Oneindia Kannada
Sachin Tendulkar has a special tip for Virat Kohli and boys

ನವದೆಹಲಿ, ಡಿಸೆಂಬರ್ 3: ಮುಂಬರಲಿರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಗಾಗಿ ಪ್ರವಾಸಿ ಭಾರತ ಸಾಕಷ್ಟು ತಯಾರಿ ನಡೆಸಿದೆ, ನಡೆಸುತ್ತಿದೆ. ಈ ನಡುವೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿ ಮತ್ತು ಬಳಗಕ್ಕೆ ಮೌಲ್ಯಯುತ ಟಿಪ್ಸ್‌ ನೀಡಿದ್ದಾರೆ. ಟೆಸ್ಟ್ ಸರಣಿ ಡಿಸೆಂಬರ್ 6ರಿಂದ ಆರಂಭಗೊಳ್ಳಲಿದೆ.

ಟೆನಿಸ್ ಟೂರ್ನಮೆಂಟ್ ಗೆದ್ದ ಮಾಜಿ ನಾಯಕ ಎಂಎಸ್ ಧೋನಿಟೆನಿಸ್ ಟೂರ್ನಮೆಂಟ್ ಗೆದ್ದ ಮಾಜಿ ನಾಯಕ ಎಂಎಸ್ ಧೋನಿ

ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಬೆಂಬಲವಿಲ್ಲ. ಹಾಗಂತ ಆತಿಥೇಯರನ್ನು ಸಂಪೂರ್ಣ ನಿರ್ಲಕ್ಷಿಸುವಂತಿಲ್ಲ. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಭಾರತದ ಬ್ಯಾಟ್ಸ್ಮನ್‌ಗಳಿಗೆ ಸವಾಲಾಗಿ ಪರಿಣಮಿಸಲಬಲ್ಲರು. ಹೀಗಾಗಿಯೇ ಸಚಿನ್ ತೆಂಡೂಲ್ಕರ್ ನೀಡಿರುವ ಸಲಹೆಗಳು ಮೌಲ್ಯಯುತ ಎನಿಸಿವೆ.

ಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡಮಸಾಜರ್ ಗೆ ಗೇಲ್ 'ಗುಪ್ತಾಂಗ ಪ್ರದರ್ಶಿಸಿದ್ರು' ಎಂದ ಮಾಧ್ಯಮಕ್ಕೆ ದಂಡ

ಹೊರ ದೇಶಗಳಿಗೆ ಪ್ರವಾಸ ಸರಣಿಗಾಗಿ ತೆರಳುವಾಗ ಆರಂಭಿಕ ಆಟಗಾರರ ಪಾತ್ರ ತುಂಬಾ ನಿರ್ಣಾಯಕವೆನಿಸುತ್ತದೆ. 1, 2 ಮತ್ತು 3 ಕೆಲವೊಮ್ಮೆ 4ನೇ ಬ್ಯಾಟ್ಸ್ಮನ್‌ ಕೂಡ ಬೇಗನೆ ವಿಕೆಟ್ ಒಪ್ಪಿಸೋದಿದೆ. ಹೀಗಾಗಿ ಆರಂಭಿಕ ಮೂರು ಬ್ಯಾಟ್ಸ್ಮನ್ ಗಳು ಜಾಣತಣದ ಆಟ ಆಡಬೇಕಿರುತ್ತದೆ' ಎಂದು ಸಚಿನ್ ಸ್ಪೋರ್ಟ್ಸ್ ಸ್ಟಾರ್‌ನೊಂದಿಗೆ ಹೇಳಿಕೊಂಡಿದ್ದಾರೆ.

ಆರಂಭಿಕ ವಿಕೆಟ್ ಕಾವಲು ಕಾಯಬೇಕು

ಆರಂಭಿಕ ವಿಕೆಟ್ ಕಾವಲು ಕಾಯಬೇಕು

ಆರಂಭಿಕ 1, 2 ಮತ್ತು 3ನೇ ಬ್ಯಾಟ್ಸ್ಮನ್‌ಗಳು ಕನಿಷ್ಠ 30ನೇ ಓವರ್ ಮುಗಿಯುವವರೆಗಾದರೂ ವಿಕೆಟ್ ಕಾವಲು ಕಾಯಬೇಕು. 30 ಓವರ್ ಒಳಗಾಗಿ ವಿಕೆಟ್ ಒಪ್ಪಿಸಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮೇಲೆ ಹೊರೆ ಬೀಳಲು ಅವಕಾಶ ಮಾಡಿಕೊಡಬಾರದು. ಆಗ ತಂಡಕ್ಕೆ ಗೆಲುವಿನ ದಾರಿ ಸುಲಭವಾಗುತ್ತದೆ' ಎಂದು ಸಚಿನ್ ಹೇಳಿದ್ದಾರೆ.

ಚೆಂಡಿನ ಒರಟುತನದ ಗುಟ್ಟು

ಚೆಂಡಿನ ಒರಟುತನದ ಗುಟ್ಟು

'ನಾನಿದನ್ನು ಇಂಗ್ಲೆಂಡ್ ಪ್ರವಾಸ ವೇಳೆಯೂ ಹೇಳಿಕೊಂಡಿದ್ದೆ. ಮೊದಲ ಮೂರು ಬ್ಯಾಟ್ಸ್ಮನ್‌ಗಳು 40 ಓವರ್ ವರೆಗೂ ವಿಕೆಟ್ ಉಳಿಸಿಟ್ಟುಕೊಳ್ಳಬೇಕು. ಅನಂತರ ಕ್ರಮೇಣ ಚೆಂಡಿನ ಒರಟುತನ ಕಳೆದುಹೋಗುತ್ತದೆ. ಆಗ ರನ್ ಕದಿಯಲು ತಂಡಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದೆ' ಎಂದು ತೆಂಡೂಲ್ಕರ್ ವಿವರಿಸಿದರು.

ಹೊರೆ ಬೀಳದಂತೆ ನೋಡಿಕೊಳ್ಳಿ

ಹೊರೆ ಬೀಳದಂತೆ ನೋಡಿಕೊಳ್ಳಿ

ಮಾತು ಮುಂದುವರೆಸಿದ ಸಚಿನ್, 'ಇಂಗ್ಲೆಂಡ್ ವಾತಾವರಣಕ್ಕೆ ತಕ್ಕಂತೆ 40 ಓವರ್ ವರೆಗೆ ಮೊದಲ ಮೂರು ವಿಕೆಟ್ ಕಾವಲು ಮುಖ್ಯವೆನಿಸಿದರೆ, ಆಸ್ಟ್ರೇಲಿಯಾ ನೆಲಕ್ಕೆ ತಕ್ಕಂತೆ ಆರಂಭಿಕ 35 ಓವರ್ ಗಳ ವರೆಗೂ ನಮ್ಮ ತಂಡದ ಬ್ಯಾಟ್ಸ್ಮನ್‌ಗಳು 4ನೇ ಕ್ರಮಾಂಕದ ಬ್ಯಾಟ್ಸ್ಮನ್‌ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳಬೇಕು' ಎಂದರು.

ಬೌಲರ್‌ಗಳಿಗೂ ಅನುಕೂಲ!

ಬೌಲರ್‌ಗಳಿಗೂ ಅನುಕೂಲ!

'30-35 ಓವರ್ ವರೆಗೆ ವಿಕೆಟ್ ಉರುಳದಂತೆ ನೋಡಿಕೊಂಡರೆ ಚೆಂಡು ಸವೆದು ತಂಡದ ಉಳಿದ ಬ್ಯಾಟ್ಸ್ಮನ್‌ಗಳಿಗೆ ನೆರವಾದಂತೆ ಎದುರಾಳಿ ಬೌಲರ್‌ಗಳಿಗೂ ಅನುಕೂಲ ಒದಗಿಸುತ್ತೆ. ಯಾಕೆಂದರೆ 30-35 ಓವರ್ ಗಳ ಬಳಿಕ ಚೆಂಡು ಕೊಂಚ ಸ್ವಿಂಗ್‌ಗೆ ಅನುಕೂಲ ಮಾಡುತ್ತದೆ. ಆದರೆ ಭಾರತದ ಬ್ಯಾಟ್ಸ್ಮನ್‌ಗಳು ಆ ವೇಳೆ ಅಂಥ ಎಸೆತಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ' ಎಂದು ಸಚಿನ್ ತಿಳಿಸಿದ್ದಾರೆ.

Story first published: Monday, December 3, 2018, 16:41 [IST]
Other articles published on Dec 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X