ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಭಾವನಾತ್ಮಕ ಸಂದೇಶ
Sachin Tendulkar: ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಂತಾರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕ್ರಿಕೆಟ್ ಲೋಕಕ್ಕೆ ಬಿಗ್ ಶಾಕ್ ನೀಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಅವರು ಈ ನಿರ್ಧಾರವನ್ನು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಅವರ ಬಗ್ಗೆ ಇದೀಗ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರು ಭಾವನಾತ್ಮಕ ಸಂದೇಶವನ್ನು ಸಾಮಾಜಿಕ ತಾಲತಾಣ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆನ್ ಸ್ಟೋಕ್ಸ್ ನಿವೃತ್ತಿಯ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರು ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್‌ನಲ್ಲಿ ಖಾತೆಯಲ್ಲಿ ಸ್ಟೋಕ್ಸ್ ಅವರ ಆಟದ ಶೈಲಿ ಮತ್ತು ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಮೈದಾನದಲ್ಲಿ ನೀವು ನೀಡುತ್ತಿದ್ದ ಅದ್ಭುತ ಪ್ರದರ್ಶನ ಮತ್ತು ಸಕಾರಾತ್ಮಕತೆಯನ್ನು ನಾನು ಯಾವಾಗಲೂ ಗೌರವಿಸುತ್ತಿದ್ದೆ. ನಿಮ್ಮಲ್ಲಿರುವ ಭಯವಿಲ್ಲದ ಆಟದ ಶೈಲಿ ಮತ್ತು ಒತ್ತಡದ ಸಂದರ್ಭಗಳಲ್ಲಿ ಪಂದ್ಯದ ದಿಕ್ಕನ್ನು ಬದಲಾಯಿಸುತ್ತಿದ್ದ ರೀತಿ ಮರೆಯಲು ಸಾಧ್ಯವಿಲ್ಲ,' ಎಂದು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಆಲ್‌ರೌಂಡರ್ ಹಾಗೂ ನಾಯಕ
ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ ಇತಿಹಾಸದ ಅತ್ಯಂತ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎಂದು ಕರೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು, 'ಒಬ್ಬ ನಾಯಕನಾಗಿ ತೋರುತ್ತಿದ್ದ ಅದ್ಭುತ ಕೌಶಲ್ಯಗಳು ಮತ್ತು ಆಟವನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಯು ಇಂಗ್ಲೆಂಡ್ ತಂಡಕ್ಕೆ ಹೊಸ ಆಯಾಮ ಮತ್ತು ಬಲವನ್ನು ತಂದುಕೊಟ್ಟಿತು,' ಎಂದು ಹೊಗಳಿದ್ದಾರೆ.
'ನಿಮ್ಮ ಮುಂದಿನ ಇನ್ನಿಂಗ್ಸ್‌ಗೆ ಒಳ್ಳೆಯದಾಗಲಿ. ನಿಮ್ಮ ಸ್ವಭಾವವನ್ನು ಬಲ್ಲ ನನಗೆ, ಕ್ರಿಕೆಟ್ ಮೈದಾನದಿಂದ ದೂರವಿರುವುದು ನಿಮಗೆ ಎಲ್ಲದಕ್ಕಿಂತ ಕಷ್ಟದ ಕೆಲಸ ಎಂಬುದು ಗೊತ್ತು,' ಎಂದು ಸಚಿನ್ ತಮಾಷೆ ಮಾಡುತ್ತಾ ಶುಭಹಾರೈಸಿದ್ದಾರೆ. 35 ವರ್ಷದ ಬೆನ್ ಸ್ಟೋಕ್ಸ್ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಈ ದಿಢೀರ್ ನಿರ್ಧಾರ ಕೈಗೊಂಡರು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 160 ರನ್‌ಗಳಿಂದ ಸೋಲನುಭವಿಸಿ, ಸರಣಿಯನ್ನು 2-1 ರಿಂದ ಕಳೆದುಕೊಂಡಿತು. ಇದು ಸ್ಟೋಕ್ಸ್ ನಾಯಕತ್ವದಲ್ಲಿ ತಂಡಕ್ಕೆ ಎದುರಾದ ಮೊದಲ ತವರೂರು ಸರಣಿ ಸೋಲಾಗಿದೆ.
ಬೆನ್ ಸ್ಟೋಕ್ಸ್ ಹೇಳಿದ್ದೇನು?
'ಇತ್ತೀಚಿನ ದಿನಗಳಲ್ಲಿ ಸರಣಿ ಕ್ರಿಕೆಟ್ ಆಡುತ್ತಿರುವುದು ಮತ್ತು ನಾಯಕತ್ವದ ಜವಾಬ್ದಾರಿ ತಮ್ಮ ದೇಹ ಹಾಗೂ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ತಮಗೆ ಸಾಕಷ್ಟು ಆಯಾಸವಾಗಿತ್ತು. ಈ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಂಡಿಲ್ಲ,' ಎಂದು ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ.
ಕೊನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ
ಸ್ಟೋಕ್ಸ್ ಅವರ ವೃತ್ತಿಜೀವನದ ಕೊನೆಯ ದಿನಗಳು ಕೇವಲ ಆಟಕ್ಕಷ್ಟೇ ಅಲ್ಲದೆ ಸಣ್ಣ ವಿವಾದಕ್ಕೂ ಸಾಕ್ಷಿಯಾಗಿದ್ದವು. ಲಂಡನ್‌ನ ನೈಟ್‌ಕ್ಲಬ್ ಘಟನೆಯೊಂದರ ನಂತರ ತಂಡದ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ಅವರನ್ನು ಕೈಬಿಡಲಾಗಿತ್ತು. ಆದರೂ ಮೂರನೇ ಟೆಸ್ಟ್‌ನಲ್ಲಿ ಅವರು ತಂಡಕ್ಕೆ ಮರಳಿ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆಯುವ ಮೂಲಕ ತಮ್ಮ ಕೊನೆಯ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದರು.
2022ರಿಂದ 2026 ರವರೆಗೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಿದ ಸ್ಟೋಕ್ಸ್, ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ಸೇರಿ ಬ್ಯಾಜ್‌ಬಾಲ್ ಎಂಬ ಆಕ್ರಮಣಕಾರಿ ಆಟದ ಶೈಲಿಯನ್ನು ಕ್ರಿಕೆಟ್‌ಗೆ ಪರಿಚಯಿಸಿ ಯಶಸ್ವಿಯಾಗಿದ್ದರು. 2019ರ ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟೋಕ್ಸ್ ಇಂಗ್ಲೆಂಡ್ ಕ್ರಿಕೆಟ್‌ನ ಆಧುನಿಕ ಯುಗದ ಅಪ್ರತಿಮ ನಾಯಕರಾಗಿ ಮೈದಾನದಿಂದ ನಿರ್ಗಮಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications