BCCI Awards 2024: ಜೀವಮಾನ ಸಾಧನೆಗೆ ಸಚಿನ್‌ಗೆ ಗೌರವ: ಕನ್ನಡಿಗನ ಮುಕುಟಕ್ಕೂ ಕಿರೀಟ: ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಇಲ್ಲಿದೆ
ಎಲ್ಲರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಬಿಸಿಸಿಐ ಪ್ರಶಸ್ತಿಗಳು ಶನಿವಾರ ಮುಂಬೈನಲ್ಲಿ ಪ್ರಧಾನ ಮಾಡಲಾಯಿತು. ಈ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ, ಜೀವಮಾನದ ಸಾಧನೆಗೆ ಸಚಿನ್ ತೆಂಡೂಲ್ಕರ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದೇ ವೇಳೆ ಹಲವು ಯುವ ಆಟಗಾರರಿಗೂ ಬಿಸಿಸಿಐ ಗೌರವ ಸಂದಿದೆ. ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಬಳಿಕ ಹಠಾತ್ ನಿವೃತ್ತಿ ಪಡೆದ ಅನುಭವಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಈ ಬಾರಿ ಕ್ರಿಕೆಟಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ನೀಡಿ ಗೌರವಿಸಲಾಗಿತು. ಇವರು ಭಾರತದ ಪರ ದಾಖಲೆಯ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 463 ಏಕದಿನ ಹಾಗೂ 1 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಇವರು ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಟೆಸ್ಟ್‌ನಲ್ಲಿ 15921 ರನ್, ಏಕದಿನದಲ್ಲಿ 18426 ರನ್ ಸಿಡಿಸಿ ಅಮೋಘ ದಾಖಲೆ ಬರೆದಿದ್ದಾರೆ. ಟೆಸ್ಟ್‌ನಲ್ಲಿ 46 ಹಾಗೂ ಏಕದಿನ ಪಂದ್ಯಗಳಲ್ಲಿ 154 ವಿಕೆಟ್ ಪಡೆದು ಬೀಗಿದ ಮಹಾನ್ ಸಾಧಕನಿಗೆ ಪ್ರಶಸ್ತಿ ಸಂದಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ನಿವೃತ್ತಿ ಪಡೆದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರಿಗೂ ಬಿಸಿಸಿಐ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕರ್ನಾಟಕದ ಪ್ರತಿಭೆಗೂ ಪ್ರಶಸ್ತಿ
ಸದ್ಯ ಕರ್ನಾಟಕ ರಣಜಿ ತಂಡದ ಪರ ಆಡುತ್ತಿರುವ ಕೆವಿ ಅನೀಶ್ ಅವರಿಗೂ ಪ್ರಶಸ್ತಿ ಸಂದಿದೆ. ಇವರು ಸಿಕೆ ನಾಯ್ಡು ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ್ದಾಕ್ಕಾಗಿ ಈ ಪ್ರಶಸ್ತಿ ಸಂದಿದೆ. ಇವರು 2023-24ರಲ್ಲಿ ಆಡಿದ 6 ಪಂದ್ಯಗಳ 11 ಇನಿಂಗ್ಸ್‌ಗಳಲ್ಲಿ 92ರ ಸರಾಸರಿಯಲ್ಲಿ 922 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಶತಕಗಳು ಸಹ ಸೇರಿವೆ.
ಬಿಸಿಸಿಐ ಪ್ರಶಸ್ತಿಗಳ ಸಂಪೂರ್ಣ ವಿವರ
- ಅತ್ಯುತ್ತಮ ಅಂತಾರಾಷ್ಟ್ರೀಯ ಪುರುಷ ಕ್ರಿಕೆಟಿಗ - ಜಸ್ಪ್ರೀತ್ ಬುಮ್ರಾ
- ಅತ್ಯುತ್ತಮ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗ - ಸ್ಮೃತಿ ಮಂಧಾನ
- ಅತ್ಯುತ್ತಮ ಅಂತಾರಾಷ್ಟ್ರೀಯ ಪದಾರ್ಪಣೆ (ಪುರುಷ) - ಸರ್ಫರಾಜ್ ಖಾನ್
- ಅತ್ಯುತ್ತಮ ಅಂತಾರಾಷ್ಟ್ರೀಯ ಪದಾರ್ಪಣೆ (ಮಹಿಳೆ) - ಆಶಾ ಶೋಭನಾ
- ಮಹಿಳಾ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ - ಸ್ಮೃತಿ ಮಂಧಾನ
- ಮಹಿಳಾ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್‌ಗಳು - ದೀಪ್ತಿ ಶರ್ಮಾ
- ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಪೈರ್ - ಅಕ್ಷಯ್ ಟೋಟ್ರೆ
- ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ - ಕಾವ್ಯ ಟೋಟಿಯಾ
- ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು - ವಿಷ್ಣು ಭಾರದ್ವಾಜ್
- ಮಹಿಳಾ ಹಿರಿಯ ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಆಟಗಾರ್ತಿ - ಪ್ರಿಯಾ ಮಿಶ್ರಾ
- ಮಹಿಳಾ ಜೂನಿಯರ್ ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಆಟಗಾರ್ತಿ - ಈಶ್ವರಿ ಅವಸಾರೆ
- ಅಂಡರ್-16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ - ಹೆಚ್. ಜೆಗನಾಥನ್
- ಅಂಡರ್-16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್- ಲಕ್ಷ್ಯ ರಾಯ್‌ಚಂದಾನಿ
- 23 ವರ್ಷದೊಳಗಿನವರ ಸಿಕೆ ನಾಯುಡು ಟ್ರೋಫಿ (ಪ್ಲೇಟ್ ಗ್ರೂಪ್) ಅತಿ ಹೆಚ್ಚು ವಿಕೆಟ್- ಜೆಖೋ ರೂಪೇರೊ
- 23 ವರ್ಷದೊಳಗಿನವರ ಸಿಕೆ ನಾಯುಡು ಟ್ರೋಫಿ (ಪ್ಲೇಟ್ ಗುಂಪು) ಅತಿ ಹೆಚ್ಚು ರನ್ - ಹೇಮ್ ಛೆಟ್ರಿ
- 23 ವರ್ಷದೊಳಗಿನವರ ಸಿಕೆ ನಾಯುಡು ಟ್ರೋಫಿ (ಎಲೈಟ್ ಗ್ರೂಪ್) ಅತಿ ಹೆಚ್ಚು ವಿಕೆಟ್- ಪಿ. ವಿದ್ಯುತ್
- ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ (ಪ್ಲೇಟ್ ಗ್ರೂಪ್) - ತನಯ್ ತ್ಯಾಗರಾಜನ್
- ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ (ಎಲೈಟ್ ಗ್ರೂಪ್) - ಆರ್ ಸಾಯಿ ಕಿಶೋರ್
- ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ (ಪ್ಲೇಟ್ ಗುಂಪು) - ಅಗ್ನಿ ಚೋಪ್ರಾ
- ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ (ಎಲೈಟ್ ಗ್ರೂಪ್) - ರಿಕಿ ಭೂಯಿ
- ದೇಶೀಯ ಸೀಮಿತ ಓವರ್‌ಗಳ ಪಂದ್ಯಾವಳಿಯ ಅತ್ಯುತ್ತಮ ಆಲ್‌ರೌಂಡರ್ - ಶಶಾಂಕ್ ಸಿಂಗ್
- ರಣಜಿ ಟ್ರೋಫಿಯ ಎಂಟು ಅತ್ಯುತ್ತಮ ಆಲ್-ರೌಂಡರ್‌ಗಳು - ತನುಷ್ ಕೋಟ್ಯಾನ್
- ಬಿಸಿಸಿಐ ದೇಶೀಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ - ಮುಂಬೈ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications