Champions Trophy 2025: ಪಾಕ್ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಆಟಗಾರರ ಪಟ್ಟಿ
ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ಆರಂಭವಾಗಿವೆ. ಇದರ ಕಾವು ವಿಶ್ವವ್ಯಾಪಿ ಆವರಿಸಿಕೊಳ್ಳುತ್ತಿದೆ. ಅದಗಾಲೇ ಎಲ್ಲರ ಕಣ್ಣುಗಳು ಬಿಗ್ ಮ್ಯಾಚ್ ಮೇಲೆ ನೆಟ್ಟಿವೆ. ಭಾನುವಾರ ಪ್ರಸಕ್ತ ಟೂರ್ನಿಯ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ಜಿದ್ದಾಜಿದ್ದಿನ ಕಾಳಗಗಕ್ಕೆ ದುಬೈನ ಮೈದಾನ ಸಿದ್ಧವಾಗಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಟೀಮ್ ಇಂಡಿಯಾ ಎರಡನೇ ಗೆಲುವಿನ ಕನಸು ಕಾಣುತ್ತಿದೆ.
ದುಬೈನಲ್ಲಿ ನಡೆಯುವ ಪಂದ್ಯ ಎಲ್ಲರ ಪ್ರಮುಖ ಆಕರ್ಷಣೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಟೀಮ್ ಇಂಡಿಯಾದ ಆಟಗಾರರು ಮೊದಲಿನಿಂದಲೂ ಪಾಕಿಸ್ತಾನ ವಿರುದ್ಧ ವೀರಾವೇಶದ ಆಟವನ್ನು ಆಡಿದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಸಚಿನ್ ತೆಂಡೂಲ್ಕರ್. ಇವರು ಪಾಕ್ ವಿರುದ್ಧ ರನ್ ಮಹಲ್ ಕಟ್ಟಿದ್ದಾರೆ. ಇವರು ಪಾಕ್ ವಿರುದ್ಧ ಆಡಿದ 69 ಪಂದ್ಯಗಳಲ್ಲಿ 5 ಶತಕ ಹಾಗೂ 16 ಅರ್ಧಶತಕಗಳ ನೆರವಿನಿಂದ 2526 ರನ್ ಸಿಡಿಸಿದ್ದಾರೆ. ಉಭಯ ದೇಶಗಳ ಪರ ಗರಿಷ್ಠ ರನ್ ಸಾಧನೆ ಸಚಿನ್ ಹೆಸರಿನಲ್ಲೇ ಇದೆ.

ಭಾರತದ ಪರ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಎರಡನೇ ಸ್ಥಾನ. ಇದೇ ಪಟ್ಟಿಯಲ್ಲಿ ಮೊಹಮ್ಮದ್ ಅಜರುದ್ಧಿನ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಅವರು ಸ್ಥಾನ ಪಡೆದಿದ್ದಾರೆ.
ಭಾರತದ ಪರ ಗರಿಷ್ಠ ರನ್
- ಸಚಿನ್ ತೆಂಡೂಲ್ಕರ್, 69 ಪಂದ್ಯ, 2526 ರನ್, 5 ಶತಕ, 16 ಅರ್ಧಶತಕ
- ರಾಹುಲ್ ದ್ರಾವಿಡ್, 58 ಪಂದ್ಯ, 1899 ರನ್, 2 ಶತಕ, 14 ಅರ್ಧಶತಕ
- ಮೊಹಮ್ಮದ್ ಅಜರುದ್ಧಿನ್, 64 ಪಂದ್ಯ, 1657 ರನ್, 2 ಶತಕ, 9 ಅರ್ಧಶತಕ
- ಸೌರವ್ ಗಂಗೂಲಿ, 53 ಪಂದ್ಯ, 1652 ರನ್, 2 ಶತಕ, 9 ಅರ್ಧಶತಕ
- ಯುವರಾಜ್ ಸಿಂಗ್, 38 ಪಂದ್ಯ, 1360 ರನ್, 1 ಶತಕ, 12 ಅರ್ಧಶತಕ

ಭಾರತದ ಹಾಲಿ ತಂಡದಲ್ಲಿ ಪಾಕಿಸ್ತಾನದ ಪರ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಅವರಿಗೆ ಸಲ್ಲುತ್ತದೆ. ಇವರು 19 ಪಂದ್ಯಗಳಲ್ಲಿ 873 ರನ್ ಸಿಡಿಸಿದ್ದಾರೆ. ಇದ್ರಲ್ಲಿ 2 ಶತಕ ಹಾಗೂ 8 ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ ಸಹ ಪಾಕಿಸ್ತಾನ ಬೌಲರ್‌ಗಳನ್ನು ಕಾಡಬಲ್ಲರು. ಇವರ ಖಾತೆಯಲ್ಲಿ 3 ಶತಕಗಳು ಇವೆ. ಕನ್ನಡಿಗ ಕೆಎಲ್ ರಾಹುಲ್ ಪಾಕ್ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿ ಬ್ಯಾಟಿಂಗ್ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಇವರ ಬುಟ್ಟಿಯಲ್ಲಿ 1 ಶತಕ ಇದೆ.
ಭಾರತದ ಪರ ಹೆಚ್ಚು ರನ್ (ಹಾಲಿ ಆಟಗಾರರಲ್ಲಿ)
- ರೋಹಿತ್ ಶರ್ಮಾ, 19 ಪಂದ್ಯ, 873 ರನ್, 2 ಶತಕ, 8 ಅರ್ಧಶತಕ
- ವಿರಾಟ್ ಕೊಹ್ಲಿ, 16 ಪಂದ್ಯ, 678 ರನ್, 3 ಶತಕ, 2 ಅರ್ಧಶತಕ
- ಹಾರ್ದಿಕ್ ಪಾಂಡ್ಯ, 7 ಪಂದ್ಯ, 209 ರನ್, 2 ಅರ್ಧಶತಕ
- ಕೆಎಲ್ ರಾಹುಲ್, 3 ಪಂದ್ಯ, 187 ರನ್, 1 ಶತಕ, 1 ಅರ್ಧಶತಕ
- ರವೀಂದ್ರ ಜಡೇಜಾ, 12 ಪಂದ್ಯ, 130 ರನ್, 1 ಅರ್ಧಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications