ಸಚಿನ್‌ಗೆ ಬೇಕಂತೆ ಆ ಕಾರು: ಅಭಿಮಾನಿಗಳ ಮೊರೆ ಹೋದ ಕ್ರಿಕೆಟ್ ದೇವರು

ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡಿರುವ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಭಿಮಾನಿಗಳ ಪಾಲಿಗೆ ಕ್ರಿಕೆಟ್‌ನ ದೇವರು. ಕ್ರಿಕೆಟ್ ಅಂಗಳದಲ್ಲಿ ಅಸಾಧಾರಣ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್ ಅತ್ಯುನ್ನತ ಎತ್ತರಕ್ಕೆ ಏರಿದ್ದಾರೆ. ಹೀಗಾಗಿಯೆ ಸಹಜವಾಗಿಯೇ ಜನಪ್ರಿಯತೆ ಅಭಿಮಾನಿ ವರ್ಗದ ಜೊತೆಗೆ ಕೋಟ್ಯಂತರ ಸಂಪಾದನೆಯನ್ನು ಮಾಡಿ ತನಗೆ ಬೇಕೆನಿಸಿದನ್ನು ಕೊಂಡುಕೊಳ್ಳುವ ಶಕ್ತಿ ಹೊಂದಿದ್ದಾರೆ.
ಆದರೆ ಇಂತಾ ಸಚಿನ್ ಒಂದು ವಸ್ತುವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಅಭಿಮಾನಿಗಳ ಮೊರೆ ಹೋಗಿದ್ದಾರೆ. ನೀವೇ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಸಚಿನ್ ಅಭಿಮಾನಿಗಳ ಮೊರೆ ಹೋಗಿರುವುದು ಒಂದು ಕಾರನ್ನು ಕೊಂಡುಕೊಳ್ಳುವ ಬೇಡಿಕೆಯನ್ನು ಮುಂದಿಟ್ಟುಕೊಂಡು..
ಅರೆ.. ಬಿಎಂಡಬ್ಯುದಿಂದ ಫೆರಾರಿ ವರೆಗೆ ವಿಶ್ವದ ದುಬಾರಿ ಹಾಗೂ ಪ್ರತಿಷ್ಠಿತ ಕಂಪನಿಯ ಕಾರುಗಳು ಸಚಿನ್ ಗ್ಯಾರೇಜ್‌ನಲ್ಲಿದೆ. ಹಾಗಿದ್ದರೂ ಸಚಿನ್‌ಗೆ ಕೊಂಡು ಕೊಳ್ಳಲು ಕಷ್ಟವಾಗಿರುವ ಆ ಕಾರ್ ಯಾವುದು? ಅಂತದ್ದೇನಿದೆ ಆ ಕಾರ್‌ನಲ್ಲಿ? ಎಲ್ಲದಕ್ಕೂ ಉತ್ತರ ನೀಡುತ್ತೇವೆ ಮುಂದೆ ಓದಿ..

ಸಚಿನ್ ಹುಡುಕುತ್ತಿರುವ ಕಾರ್ ಯಾವುದು?
ಸಚಿನ್ ತೆಂಡೂಲ್ಕರ್ ಅಭಿಮಾನಿಗಳಲ್ಲಿ ಬೇಡಿಕೆಯಿಟ್ಟು ಕೇಳಿಕೊಂಡಿರುವ ಕಾರು ತಮ್ಮ ಮೊತ್ತ ಮೊದಲ ಮಾರುತಿ 800 ಕಾರನ್ನು. ಕೆಂಪು ಬಣ್ಣದ ಆ ಕಾರ್ ಮತ್ತೆ ಪಡೆಯ ಬೇಕೆಂಬ ಹಂಬಲವನ್ನು ಸಚಿನ್ ತೆಂಡೂಲ್ಕರ್ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅದಕ್ಕಾಗಿ ಅಭಿಮಾನಿಗಳ ಮೊರೆ ಹೋಗಿದ್ದಾರೆ.

ಮೊದಲ ಕಾರ್ ಜೊತೆಗೆ ಭಾವುಕ ನೆನಪುಗಳು
ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಕಾರು ಮಾರುತಿ 800 ಜೊತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಕೆಂಪು ಬಣ್ಣವನ್ನು ಹೊಂದಿದ್ದ ಆ ಕಾರನ್ನು ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಂಪಾದಿಸಿದ ತಮ್ಮ ಸ್ವಂತ ಹಣದಿಂದ ಪಡೆದುಕೊಂಡಿದ್ದರು. ಹೀಗಾಗಿ ಅದನ್ನು ಮರಳಿ ಪಡೆಯುವ ಆಸೆ ವ್ಯಕ್ತಪಡಿಸಿದ್ದಾರೆ.

ಸಚಿನ್ ಮಾಡಿದ ಮನವಿ
ಸಂವಾದ ಕಾರ್ಯಕ್ರಮವೊಂದರಲ್ಲಿ ಸಚಿನ್ ತೆಂಡುಲ್ಕರ್ ತಮ್ಮ ಮೊದಲ ಕಾರ್ ಬಗ್ಗೆ ಹೇಳಿಕೊಂಡಿದ್ದಾರೆ. "ನನ್ನ ಮೊದಲ ಕಾರು ಮಾರುತಿ 800. ದುರದೃಷ್ಟವಶಾತ್ ಈಗ ಅದು ನನ್ನ ಬಳಿಯಿಲ್ಲ. ಅದನ್ನು ನಾನು ಮರಳಿ ಪಡೆದುಕೊಳ್ಳಲು ಇಷ್ಟಪಡುತ್ತೇನೆ. ಇದನ್ನು ಕೇಳಿಸಿಕೊಳ್ಳುತ್ತಿರುವವರು ಮುಕ್ತವಾಗಿ ನನ್ನನ್ನು ಸಂಪರ್ಕಸಿ" ಎಂದು ಆ ಕಾರನ್ನು ಹೊಂದಿರುವವರ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ ಸಚಿನ್ ತೆಂಡೂಲ್ಕರ್.

ಬಾಲ್ಯದಿಂದಲೇ ಸಚಿನ್‌ಗೆ ಕಾರ್‌ಗಳೆಂದರೆ ಇಷ್ಟ
ಸಚಿನ್ ತೆಂಡೂಲ್ಕರ್‌ಗೆ ಕಾರುಗಳೆಂದರೆ ಬಾಲ್ಯದಂದಿಲೂ ಇಷ್ಟ. "ಬಾಲ್ಯದಲ್ಲಿ ಮುಂಬೈನ ಬಾಂದ್ರಾದಲ್ಲಿನ ಮನೆಯ ಪಕ್ಕದಲ್ಲಿ ಓಪನ್ ಡ್ರೈನ್ ಸಿನಿಮಾ ಹಾಲ್ ಇತ್ತು. ಅಲ್ಲಿ ಸಾಕಷ್ಟು ಕಾರ್‌ಗಳು ಬಮದು ನಿಲ್ಲುತ್ತಿತ್ತು. ತನ್ನ ಮನೆಯ ಬಾಲ್ಕನಿಯಲ್ಲಿ ಸಹೋದರನ ಜೊತೆಗೆ ಗಂಟೆಗಳ ಕಾಲ ನಿಂತು ಕೊಂಡು ಕಾರುಗಳನ್ನು ನೋಡುತ್ತಾ ಖುಷಿಪಡುತ್ತಿದ್ದೆ" ಎಂದು ಸಚಿನ್ ಇದೇ ಸಂದರ್ಭದಲ್ಲಿ ಕಾರ್‌ಗಳ ಬಗೆಗಿನ ತನ್ನ ಮೋಹವನ್ನು ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications