ವಿಶ್ವದ ಮುಂಚೂಣಿ ಆಲ್ ರೌಂಡರ್ ಆಗಬಲ್ಲ ಆಟಗಾರನ ಹೆಸರಿಸಿದ ಸಚಿನ್ ತೆಂಡೂಲ್ಕರ್

ನವದೆಹಲಿ: ವಿಶ್ವದಲ್ಲಿ ಮುಂದೆ ಮುಂಚೂಣಿ ಆಲ್ ರೌಂಡರ್ ಎನಿಸಬಲ್ಲ ಆಟಗಾರನನ್ನು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ಬೌಲಿಂಗ್ ಆಲ್ ರೌಂಡರ್ ಕೈಲ್ ಜೇಮಿಸನ್ ಮುಂದೆ ವಿಶ್ವದ ಮುಂಚೂಣಿ ಆಲ್ ರೌಂಡರ್ ಆಗಬಲ್ಲರು ಎಂದು ಸಚಿನ್ ಹೇಳಿದ್ದಾರೆ.
ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿರುವ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಲ್ ರೌಂಡರ್ ಕೈಲ್ ಜೇಮಿಸನ್ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದರು. ಒಟ್ಟು ಪ್ರಮುಖ 7 ವಿಕೆಟ್ ಮುರಿದಿದ್ದರಲ್ಲದೆ, ಪ್ರಥಮ ಇನ್ನಿಂಗ್ಸ್‌ನಲ್ಲಿ ಪರಿಣಾಮಕಾರಿ 21ರನ್ ಕೊಡುಗೆ ನೀಡಿದ್ದರು.
2020ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ 26ರ ಹರೆಯದ ಕೈಲ್ ಜೇಮಿಸನ್ ಇಲ್ಲೀವರೆಗೆ ಒಟ್ಟು 8 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಈಗಾಗಲೇ ಐದು ಬಾರಿ ಐದು ವಿಕೆಟ್ ಸಾಧನೆ ತೋರಿದ್ದಾರೆ. WTC ಫೈನಲ್‌ನಲ್ಲೂ ಜೇಮಿಸನ್‌ಗೆ 5 ವಿಕೆಟ್‌ಗಳು ಲಭಿಸಿತ್ತು. ಪಂದ್ಯಶ್ರೇಷ್ಠ ಪ್ರಶಸ್ತಿಯೂ ಜೇಮಿಸನ್ ಪಾಲಾಗಿತ್ತು.
"ಜೇಮೀಸನ್ ಅದ್ಭುತ ಬೌಲರ್ ಮತ್ತು ನ್ಯೂಜಿಲೆಂಡ್ ತಂಡದಲ್ಲಿ ಯುಟಿಲಿಟಿ ಆಲ್ ರೌಂಡರ್. ವಿಶ್ವ ಕ್ರಿಕೆಟ್‌ನಲ್ಲಿ ಅವರು ಮುಂದೊಮ್ಮೆ ಮುಂಚೂಣಿ ಆಲ್ ರೌಂಡರ್ ಆಗಿ ಮಿನುಗುತ್ತಾರೆ. ಕಳೆದ ಬಾರಿ ನ್ಯೂಜಿಲೆಂಡ್ ತಂಡದಲ್ಲಿ ನೋಡಿದ್ದಾಗಲೇ ನನ್ನ ಮೇಲೆ ಜೇಮಿಸನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಭಾವ ಬೀರಿದ್ದರು," ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಚಿನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications