ರಹಾನೆ-ಕೊಹ್ಲಿ ನಾಯಕತ್ವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್

ಸೀಮಿತ ಓವರ್‌ಗಳಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವಿನ ನಾಯಕತ್ವ ಚರ್ಚೆಯ ಬಳಿಕ ಇದೀಗ ಟೆಸ್ಟ್ ನಾಯಕತ್ವದ ಬಗ್ಗೆಯೂ ಭಾರೀ ಚರ್ಚೆ ಆರಂಭವಾಗಿದೆ. ಎರಡನೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಮುನ್ನಡೆಸಿದ್ದ ಟೀಮ್ ಇಂಡಿಯಾ ಆಸಿಸ್ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಲು ಯಶಸ್ವಿಯಾಗಿತ್ತು. ಇದಾದ ಬಳಿಕ ಅಜಿಂಕ್ಯ ರಹಾನೆ ನಾಯಕತ್ವದ ಬಗ್ಗೆ ಭಾರೀ ಪ್ರಶಂಸೆಗಳು ವ್ಯಕ್ತವಾಗಿದ್ದು ಮಾತ್ರವಲ್ಲದೆ ಟೆಸ್ಟ್ ತಂಡವನ್ನು ರಹಾನೆ ಪೂರ್ಣ ಪ್ರಮಾಣದಲ್ಲಿ ಮುನ್ನಡೆಸುವಂತಾಗಬೇಕು ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗತೊಡಗಿದೆ.
ಈ ಚರ್ಚೆಗೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. "ಭಾರತ ದೇಶಕ್ಕಿಂತ ಯಾವುದೇ ವೈಯಕ್ತಿಕ ವಿಚಾರಗಳು ಮುಖ್ಯವಾಗುವುದಿಲ್ಲ" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ಜನರು ಅಜಿಂಕ್ಯ ರಹಾನೆಯನ್ನು ಹೋಲಿಕೆ ಮಾಡಬಾರದು ಎಂದು ತೆಂಡೂಲ್ಕರ್ ಹೇಳಿದ್ದಾರೆ.

ವಿಭಿನ್ನ ವ್ಯಕ್ತಿತ್ವ ಹೊಂದಿದವರು
"ಅಜಿಂಕ್ಯ ರಹಾನೆ ವಿಭಿನ್ನವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಆತನ ಉದ್ದೇಶ ಆಕ್ರಮಣಕಾರಿಯಾಗಿದೆ. ಈ ಸಂದರ್ಭದಲ್ಲಿ ಜನರಿಗೆ ನಾನು ಹೇಳುವುದೇನೆಂದರೆ ಈ ಇಬ್ಬರು ಆಟಗಾರರು ಕೂಡ ಭಾರತೀಯರು. ಇಬ್ಬರು ಕೂಡ ಭಾರತಕ್ಕಾಗಿ ಆಡುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಯಾರೂ ಕೂಡ ಭಾರತಕ್ಕಿಂತ ಮೇಲಲ್ಲ. ಎಲ್ಲರಿಗಿಂತ ಮೇಲಿನ ಸ್ಥಾನದಲ್ಲಿ ಭಾರತ ಇರುತ್ತದೆ" ಎಂದು ಹೇಳಿದ್ದಾರೆ.

ಕೊಹ್ಲಿ ನಾಯಕತ್ವ ಸಾಧನೆ
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗಿದ್ದು ಟೆಸ್ಟ್‌ನಲ್ಲಿ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಅತ್ಯುನ್ನತ ದಾಖಲೆಯನ್ನು ಹೊಂದಿದ್ದಾರೆ. 56 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಕೊಹ್ಲಿ ಮುನ್ನಡೆಸಿದ್ದು 33 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಶೇಕಡಾ 50 ರಷ್ಟು ಗೆಲುವಿನ ಸರಾಸರಿಯನ್ನು ಹೊಂದಿರುವುದು ಟೀಮ್ ಇಂಡಿಯಾ ನಾಯಕನಾಗಿ ಅತ್ಯುನ್ನತ ದಾಖಲೆಯಾಗಿದೆ.

ಕೊಹ್ಲಿಗೆ ಕೆಟ್ಟ ವರ್ಷ
ಆದರೆ ಕಳೆದೊಂದು ವರ್ಷದಲ್ಲಿ ಕೊಹ್ಲಿ ನಾಯಕನಾಗಿ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಲು ವಿಫಲರಾದರು. ವೈಯಕ್ತಿಕವಾಗಿಯೂ ಕೊಹ್ಲಿ ಒಂದು ಶತಕವನ್ನು ದಾಖಲಿಸಲು ಈ ವರ್ಷ ವಿಫಲರಾಗಿದ್ದು ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಹೀಗಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಮಹತ್ವದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications