Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಷ್ಟೇ ಎತ್ತರಕ್ಕೆ ಹೋದ್ರೂ ಆಟಿಟ್ಯೂಡ್ ಬದಲಾಗಲ್ಲ: ಅಂದು, ಎಂದು, ಎಂದೆಂದೂ ಸಚಿನ್‌ ಕ್ರೇಜ್‌ ಕಮ್ಮಿ ಆಗಲ್ಲ

ಸಚಿನ್ ತೆಂಡೂಲ್ಕರ್‌ ಮೈದಾನದಲ್ಲಿ ದಿಗ್ಗಜ ಬೌಲರ್‌ಗಳ ವಿರುದ್ಧ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್. ಎದುರಾಳಿ ಯಾರೇ ಇರಲಿ ಎಂದು ಎದೆ ಒಡ್ಡಿ ನಿಂತು ಆಡುವ ಛಲಗಾರ. ತಮ್ಮ ಮಾಂತ್ರಿಕ ಆಟದಿಂದಲೇ ಅಭಿಮಾನಿಗಳ ಮನ ಗೆದ್ದ ಮೋಡಿಗಾರ. ಹಲವಾರು ದಾಖಲೆಗಳ ಒಡೆಯ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ಎಂದರೆ ಈಗಲೂ ಅಭಿಮಾನಿಗಳಲ್ಲಿ ಅಷ್ಟೇ ಕ್ರೇಜ್ ಇದೆ. ಇದಕ್ಕೆ ಸಾಕ್ಷಿ ಸಚಿನ್ ಹಂಚಿಕೊಂಡಿರುವ ಆ ಒಂದು ಪೋಸ್ಟ್‌.

ಸಚಿನ್‌ ತೆಂಡೂಲ್ಕರ್ ಕ್ರಿಕೆಟ್ ಮೈದಾನದಿಂದ ದೂರ ಸರಿದು ದಶಕಗಳ ಮೇಲೆ ಕಳೆದಿದೆ. ಆದರೆ ಅವರಿಗೆ ಕ್ರೀಡೆಯ ಮೇಲೆ ಭಕ್ತಿ, ಶ್ರದ್ಧೆ ಇನ್ನೂ ಕಡಿಮೆಯಾಗಿಲ್ಲ. ಸಚಿನ್‌ ಈ ಹಿಂದೆ ಮೈದಾನದಲ್ಲಿ ಕ್ರಿಕೆಟ್ ಆಡಿ, ಶತಕ ಬಾರಿಸಿ ಸುದ್ದಿಯಾಗಿದ್ದರು. ಆದರೆ ಈಗ ಆಗಸದಲ್ಲಿ ಕ್ರಿಕೆಟ್ ಆಡಿ ಸಚಿನ್‌ ಭಾರೀ ವೈರಲ್ ಆಗಿದ್ದಾರೆ.

Sachin Tendulkar

ಸಚಿನ್ ತೆಂಡೂಲ್ಕರ್ ಆಗಾಗ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಸಚಿನ್ ತಮ್ಮ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ವಿಮಾನದಲ್ಲಿ ಬ್ಯಾಟಿಂಗ್ ಮಾಡಿ ವೈರಲ್ ಆಗಿದ್ದಾರೆ.

ಆಗಿದ್ದೇನು?

ಸಚಿನ್‌ ತೆಂಡೂಲ್ಕರ್‌ ತಮ್ಮ ಕುಟುಂಬಸ್ಥರ ಜೊತೆಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಈ ವೇಳೆ ಮಗಳು ಹಾಗೂ ಸೊಸೆ ಜೊತೆಗೆ ವಿಮಾನದಲ್ಲಿ ಕ್ರಿಕೆಟ್‌ ಆಡಿ ಗಮನ ಸೆಳೆದಿದ್ದಾರೆ. ಸೊಸೆ ಬೌಲಿಂಗ್ ಮಾಡಿದರೆ, ಸಚಿನ್ ಬ್ಯಾಟಿಂಗ್ ಮಾಡಿದರು. ಮಗಳು ಸೋಫಾ ಮೇಲೆ ಕುಳಿತು ಫೀಲ್ಡಿಂಗ್ ಮಾಡಿದ್ದಾರೆ. ಇದೇ ವೇಳೆ ಸಚಿನ್‌ ಎಲ್ಲೇ ಇದ್ದರೂ ಸಹ ಆ್ಯಟಿಟ್ಯೂಡ್ ಬದಲಾಗಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಇದೇ ವೇಳೆ ಸಚಿನ್ ಸೊಸೆಗೆ ನೀನು ನನಗೆ ಔಟ್ ಮಾಡಲು ಸಾಧ್ಯವೇ ಇಲ್ಲ. ಕಡಿಮೆ ಅವಕಾಶಗಳು ಇದ್ದರೆ ಅದು ನಾನು ಬ್ಯಾಟನ್ನು ಕೆಳಮುಖವಾಗಿ ಹಿಡಿದು ಆಡಿದಾಗ ಅಷ್ಟೇ ಎಂದು ತಿಳಿಸಿದ್ದಾರೆ.

ವಿಡಿಯೋದ ಕೊನೆಯಲ್ಲಿ, ಸಾರಾ ತೆಂಡೂಲ್ಕರ್ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಸಚಿನ್ ಔಟ್ ಆಗುತ್ತಾರೆ. ಮತ್ತು ಅಲ್ಲಿದ್ದ ಎಲ್ಲರೂ ನಗುತ್ತಾರೆ. ತಂದೆ ಮತ್ತು ಮಗಳು, ಸೊಸೆಯ ಈ ವಿಡಿಯೋ ಅಭಿಮಾನಿಗಳ ಮನ ಗೆದ್ದಿದೆ.

ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

Story first published: Saturday, June 13, 2026, 17:56 [IST]
Other articles published on Jun 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+