For Quick Alerts
ALLOW NOTIFICATIONS  
For Daily Alerts
 

COVID-19 ಪರೀಕ್ಷೆ ವೇಳೆ ಸಚಿನ್ ತೆಂಡೂಲ್ಕರ್ ತರ್ಲೆಗೆ ಬೆಚ್ಚಿ ಬಿದ್ದ ವೈದ್ಯಕೀಯ ಸಿಬ್ಬಂದಿ : ವಿಡಿಯೋ

Sachin Tendulkar pranks medical staff during coronavirus Test

ದಿಗ್ಗಜ ಕ್ರಿಕೆಟಿಗ ಮಾಜಿ ಟೀಮ್ ಇಂಡಿಯಾ ಆಟಗಾರ ಸಚಿನ್ ತೆಂಡೂಲ್ಕರ್ ಈಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದಾರೆ. ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್‌ಗಾಗಿ ಭಾರತ ಲೆಜೆಂಡ್ ತಂಡವನ್ನು ಸಚಿನ್ ತೆಂಡೂಲ್ಕರ್ ಪ್ರತಿನಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಒಳಗಾದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ತರ್ಲೆ ಮಾಡಿ ವೈದ್ಯಕೀಯ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಜಾ ತೆಗೆದುಕೊಂಡಿದ್ದಾರೆ. ಈ ವಿಡಿಯೋಗೆ ದಿಗ್ಗಜ ಕ್ರಿಕೆಟಿಗ "ನೋವಿನಲ್ಲಿ ಚೀರಾಟ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಕೊರೊನಾ ವೈರಸ್ ಪರೀಕ್ಷೆಗಾಗಿ ಸಚಿನ್ ತೆಂಡೂಲ್ಕರ್ ಅವರ ಮೂಗಿನ ದ್ರವದ ಮಾದರಿಯನ್ನು ವೈದ್ಯಕೀಯ ಸಿಬ್ಬಂದಿ ಪಡೆದುಕೊಳ್ಳುತ್ತಿದ್ದರು. ಸ್ಯಾಂಪಲ್ ಪಡೆದುಕೊಂಡ ತಕ್ಷಣವೇ ಸಚಿನ್ ಮೂಗನ್ನು ಹಿಡಿದು ಚೀರಿದರು. ಒಂದು ಕ್ಷಣ ಅಲ್ಲಿದ್ದವರು ಗಾಬರಿಗೊಂಡರಾದರೂ ಸಚಿನ್ ತಮಾಷೆ ಮಾಡುತ್ತಿರುವುದು ತಕ್ಷಣವೇ ಅರಿವಿಗೆ ಬಂದು ಎಲ್ಲರ ನಗಲು ಆರಂಬಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ವೈದ್ಯಕೀಯ ಸಿಬ್ಬಂದಿಯ ಬಳಿ "ಆತಂಕ ನಿಮಗೋ ಅಥವಾ ನನಗೋ" ಎಂದು ತಮಾಷೆಯಾಗಿಯೇ ಪ್ರಶ್ನಿಸಿದ್ದಾರೆ.

ಇನ್ನು ಹೀಗೆ ಹಂಚಿಕೊಂಡಿರುವ ವಿಡಿಯೋಗೆ ತಮಾಷೆಯಾಗಿಯೇ ಬರಹವನ್ನೂ ನೀಡುವ ಜೊತೆಗೆ ಸಿಬ್ಬಂದಿಗಳ ಸೇವೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ಸಚಿನ್. "ನಾನು 200 ಟೆಸ್ಟ್ ಆಡಿದ್ದೇನೆ, 277 ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇನೆ. ಸಂದರ್ಭವನ್ನು ತಿಳಿಗೊಳಿಸಲು ಸಣ್ಣ ತರಲೆ. ವಿಶೇಷ ಕಾರಣಕ್ಕಾಗಿ ಆಡುತ್ತಿರುವ ನಮಗಾಗಿ ಸಹಾಯವನ್ನು ಮಾಡುವ ಸಿಬ್ಬಂದಿಗಳಿಗೆ ನಮ್ಮ ಶ್ಲಾಘನೆಗಳು" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

ಭಾರತ ಲೆಜೆಂಡ್ಸ್ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ಮಧ್ಯೆ ಮಂಗಳವಾರ ಪಂದ್ಯ ನಡೆಯಲಿದೆ. ಭಾರತ ತಂಡವನ್ನು ಈ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಮುನ್ನಡೆಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಜೊತೆಗೆ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್, ಮಾಂಟಿ ಪನೆಸರ್ ಅವರಂತಾ ದಿಗ್ಗಜ ಆಟಗಾರರು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

Story first published: Tuesday, March 9, 2021, 18:52 [IST]
Other articles published on Mar 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+