Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

40 ಶತಕ 15,000 ರನ್: 1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!

Sachin Tendulkar Reacts To Video Of Gavaskars Astonishing Prediction

ಸಚಿನ್ ತೆಂಡೂಲ್ಕರ್ ಅವರ ಆಟದ ರೀತಿಯನ್ನು ನೋಡಿ ಸಚಿನ್ ಕ್ರಿಕೆಟ್ ಕೆರಿಯರ್‌ರ ಆರಂಭದ ಸಮಯದಲ್ಲಿ ಸುನಿಲ್ ಗವಾಸ್ಕರ್ ಭವಿಷ್ಯ ನುಡಿಸಿದ್ದರು. ಟಿವಿ ಇಂಟರ್ವ್ಯೂ ಒಂದರಲ್ಲಿ ಸಚಿನ್ ಅವರನ್ನು ಕೂರಿಸಿಕೊಂಡು ಸಂದರ್ಶನ ನಡೆಸಿದ್ದ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಮೇಲಿರುವ ತನ್ನ ಭರವಸೆಯನ್ನು ವ್ಯಕ್ತಪಡಿಸಿದ್ದರು.

ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ಸ್ವತಃ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. ಸುಬು ಎಂಬವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಸಚಿನ್ ಆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಸಚಿನ್ ಪ್ರತಿಕ್ರಿಯೆ

'ಇದು ನನ್ನ ವೃತ್ತಿ ಜೀವನದ ಆರಂಭದ ದಿನಗಳು. ಶ್ರೇಷ್ಠ ವ್ಯಕ್ತಿಯಿಂದ ಬಂದಿರುವ ವಿಶೇಷ ಮಾತುಗಳು. ಅವರ ನಿರೀಕ್ಷೆಗೆ ತಕ್ಕಂತೆಯೇ ಕ್ರಿಕೆಟ್‌ನಲ್ಲಿ ಜೀವಿಸಿರಬಹುದೆಂದು ನನಗೆ ಸಂತಸವಾಗುತ್ತಿದೆ' ಎಂದು ಸಚಿನ್ ಈ ವಿಶೇಷ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಈ ವಿಡಿಯೋ ಹಂಚಿಕೊಂಡ ಸುಬು ಅವರಿಗೆ ಧನ್ಯವಾದವನ್ನು ಸಚಿನ್ ಸಲ್ಲಿಸಿದ್ದಾರೆ.

ನಿರಾಸೆ ಮಾಡಲಾರಿರಿ ಸಚಿನ್

ನಿರಾಸೆ ಮಾಡಲಾರಿರಿ ಸಚಿನ್

ಇನ್ನು ಈ ಸಂದರ್ಶನದಲ್ಲಿ ಸುನಿಲ್ ಗವಾಸ್ಕರ್ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತನಾಡುತ್ತಾ ಈತ ತನ್ನ ವೃತ್ತಿ ಜೀವನದ ಅಂತ್ಯದಲ್ಲಿ ಖಂಡಿತಾ ಕನಿಷ್ಠ 15,000 ರನ್‌ಗಳನ್ನು ಹೊಂದಿರುತ್ತಾರೆ. ಜೊತೆಗೆ 40 ಟೆಸ್ಟ್ ಶತಕಗಳನ್ನು ದಾಖಲಿಸಿರುತ್ತಾರೆ ಎಂದು ಹೇಳಿದ್ದರು. ಜೊತೆಗೆ 'ಸಚಿನ್ ನನಗೆ ಸಂಬಿಕೆಯಿದೆ, ನನ್ನ ಮಾತುಗಳಿಗೆ ನಿರಾಸೆ ಮಾಡಲಾರರಿ, ಭಾರತೀಯ ಕ್ರಿಕೆಟ್‌ಗೆ ನಿರಾಸೆ ಮಾಡಲಾರಿ ಎಂದು ಮಾತು ಮುಗಿಸಿದ್ದರು.

ಗವಾಸ್ಕರ್ ಭವಿಷ್ಯ ನಿಜವಾಗಿಸಿದ ಸಚಿನ್

ಗವಾಸ್ಕರ್ ಭವಿಷ್ಯ ನಿಜವಾಗಿಸಿದ ಸಚಿನ್

ಸುನಿಲ್ ಗವಾಸ್ಕರ್ ಆಡುತ್ತಿದ್ದ ಈ ಮಾತುಗಳಿಗೆ ಸಚಿನ್ ಮೇಲೆ ನೋಡುತ್ತಾ ಹೇಗೆ ಪ್ರತಿಕ್ರಿಯಿಸಿದರೆ ತಿಳಿಯದೆ ಮುಗ್ದವಾಗಿ ಕುಳಿತಿದ್ದರು. ಅಂತಿಮವಾಗಿ ಸಚಿನ್ ಖಂಡಿತಾ ನಾನು ನನ್ನ ಶ್ರೇಷ್ಠ ಪ್ರದರ್ಶನವನ್ನು ಇಡುತ್ತೇನೆ ಎಂದು ಹೇಳಿದ್ದರು. ಅಚ್ಚರಿಯೆಂದರೆ ಸಚಿನ್ ಸುನಿಲ್ ಗವಾಸ್ಕರ್ ಅಂದು ನಿರೀಕ್ಷಿಸಿದಕ್ಕಿಂತಲೂ ದೊಡ್ಡ ಸಾಧನೆಯನ್ನು ಸಚಿನ್ ಮಾಡಿದ್ದಾರೆ.

Story first published: Sunday, June 21, 2020, 11:45 [IST]
Other articles published on Jun 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+