Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ತೆಂಡೂಲ್ಕರ್ ಲವ್ಲೀ ಟ್ವೀಟ್‌ಗೆ ಕಿಚ್ಚ ಸುದೀಪ್‌ ಫೀದಾ!; ಇನ್ನೊಂದು ಸ್ಮರಣೀಯ ಕ್ಷಣ ಎಂದ ಮಾಣಿಕ್ಯ

ಕನ್ನಡ ಚಿತ್ರರಂಗದ (ಸ್ಯಾಂಡಲ್‌ವುಡ್) ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್ ಅವರಿಗೆ ಅಪಾರ ಸ್ನೇಹಿತರು ಮತ್ತು ಅಭಿಮಾನಿಗಳಿದ್ದಾರೆ.

ಕೇವಲ ಸಿನಿಮಾ ಕ್ಷೇತ್ರ ಮಾತ್ರವಲ್ಲದೆ ಕಿಚ್ಚ ಸುದೀಪ್ ಅವರಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣ್ಯಾತಿಗಣ್ಯರು ಪರಿಚಿತರಾಗಿದ್ದಾರೆ. ಅದರಲ್ಲಿ ಕ್ರೀಡಾ ಕ್ಷೇತ್ರವೂ ಒಂದು.

Sachin Tendulkar Replies to Sudeeps Photos on Twitter; Sudeep Expresses Gratitude to God of Cricket

ಅದರಲ್ಲೂ ಕ್ರಿಕೆಟ್‌ನಲ್ಲಿ ಕರ್ನಾಟಕದ ಆಟಗಾರರಿಂದ ಹಿಡಿದು, ಭಾರತದ ಸುರೇಶ್ ರೈನಾ, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಸೇರಿದಂತೆ ದೂರದ ಇಂಗ್ಲೆಂಡ್‌ನ ಜೋಸ್ ಬಟ್ಲರ್, ದಕ್ಷಿಣ ಅಫ್ರಿಕಾದ ಹರ್ಷಲ್ ಗಿಬ್ಸ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ವರೆಗೂ ಸ್ನೇಹಿತರಿದ್ದಾರೆ.

ಇದೀಗ ಅನಿರೀಕ್ಷಿತ ಬೆಳವಣಿಗೆ ಮತ್ತು ಆಶ್ಚರ್ಯಕರ ರೀತಿಯಲ್ಲಿ ಕಿಚ್ಚ ಸುದೀಪ್ ಅವರ ಟ್ವೀಟ್‌ಗೆ ಭಾರತದ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಸಚಿನ್ ತೆಂಡುಲ್ಕರ್ ನಡುವಿನ ಟ್ವೀಟ್ ಸಂಭಾಷಣೆ ಭಾರೀ ವೈರಲ್ ಆಗಿದೆ. ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳ ಇಬ್ಬರು ಸೆಲೆಬ್ರಿಟಿಗಳು ಒಂದು ಸುಂದರವಾದ ಟ್ವೀಟ್ ಸಂಭಾಷಣೆ ನಡೆಸಿದ್ದಾರೆ.

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ನಟ ಕಿಚ್ಚ ಸುದೀಪ್ ಜೊತೆಗಿನ ಫೋಟೋ ಒಂದನ್ನು ನೆನಪಿಸಿಕೊಂಡು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Sachin Tendulkar Replies to Sudeeps Photos on Twitter; Sudeep Expresses Gratitude to God of Cricket

"ನಿಮ್ಮನ್ನು ಭೇಟಿಯಾಗಿದ್ದು ಲವ್ಲೀಯಾಗಿತ್ತು. ಆ ದಿನ ಯಾರೋ ಒಬ್ಬರು ನಮ್ಮ ಈ ಫೋಟೋ ಎಷ್ಟು ಚೆನ್ನಾಗಿ ಕ್ಲಿಕ್ ಮಾಡಿದ್ದಾರೆ. ನಿಮಗೆ ಎಂದಿಗೂ ಜೀವನದಲ್ಲಿ ಉತ್ತಮ ಆರೋಗ್ಯ ಹಾಗೂ ಖುಷಿಯನ್ನೇ ಹಾರೈಸುತ್ತೇನೆ," ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಹೇಮಂತ್ ಶೈವ ಎಂಬ ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಯಾವುದೋ ಒಂದು ಸಮಾರಂಭದಲ್ಲಿ ಕ್ಲಿಕ್ಕಿಸಿದ ಸಚಿನ್ ತೆಂಡೂಲ್ಕರ್ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಅಣ್ಣಾ, ಈ ಫೋಟೋ ಬಗ್ಗೆ ಒಂದು ಪದದಲ್ಲಿ ಹೇಳಿ. ನೀವು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದಾಗ ನಿಮ್ಮ ಆಂತರಿಕ ಭಾವನೆ ಏನು? ಎಂದು #AskKichcha ದಲ್ಲಿ ಕೇಳಿದ್ದರು.

ಇದಕ್ಕೆ ನಟ ಕಿಚ್ಚ ಸುದೀಪ್ ಅವರು "ದಿಸ್ ಫೋಟೋ ಜಸ್ಟ್ ಲುಕ್ಕಿಂಗ್ ಲೈಕ್ ವ್ಹಾವ್... ಎಂದು ತೋರುತ್ತದೆ. ಒಂದು ಸವಿ ನೆನಪು ಗೆಳೆಯ," ಎಂದು ಪ್ರತಿಕ್ರಿಯಿಸಿದರು. ತಕ್ಷಣವೇ ಸಚಿನ್ ತೆಂಡೂಲ್ಕರ್ ನಿಮ್ಮನ್ನು ಭೇಟಿ ಮಾಡಿದ್ದು ಲವ್ಲೀಯಾಗಿತ್ತು ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಎಕ್ಸ್ (ಟ್ವಿಟ್ಟರ್‌)ನಲ್ಲಿ ಹಂಚಿಕೊಂಡರು.

ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಅವರು "ವ್ಹಾವ್... ಎಂದು ಎರಡು ರೆಡ್ ಹಾರ್ಟ್ ಎಮೋಜಿ ಬಳಸಿದರು. ಇದು ಅನಿರೀಕ್ಷಿತ, ನಾನು ಊಹಿಸಿರಲಿಲ್ಲ. ನೀವು ನನಗೆ ಇನ್ನೊಂದು ಸ್ಮರಣೀಯ ಕ್ಷಣವನ್ನು ನೀಡಿದ್ದೀರಿ. ಪ್ರೀತಿ ಮತ್ತು ಹಾರೈಕೆಗಳು ಸಚಿನ್ ತೆಂಡೂಲ್ಕರ್ ಸರ್," ಎಂದು ಬರೆದುಕೊಂಡಿದ್ದಾರೆ.

Sachin Tendulkar Replies to Sudeeps Photos on Twitter; Sudeep Expresses Gratitude to God of Cricket

ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ಬಿಗ್​ಬಾಸ್ ಸೀಸನ್ 10ರ ರಿಯಾಲಿಟಿ ಶೋ ಮುಗಿಸಿದ್ದಾರೆ. ಸಿನಿಮಾ ನಟನೆ ಮಾತ್ರವಲ್ಲದೆ, ಕನ್ನಡದ ಬಿಗ್​ಬಾಸ್ ರಿಯಾಲಿಟಿ ಶೋ ನಿರೂಪಕರಾಗಿ ಕೆಲಸ ಮಾಡುತ್ತಿರುವ ಕಿಚ್ಚ ಅವರ ನಿರೂಪಣೆ ರಾಜ್ಯಾದ್ಯಂತ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ಯಶಸ್ವಿಯಾಗಿ 10ನೇ ಬಿಗ್‌ಬಾಸ್ ಸೀಸನ್ ಕೂಡ ಮುಗಿಸಿರುವ ಕಿಚ್ಚ ಸುದೀಪ್ ಅವರು ಇನ್ಮುಂದೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 28 ವರ್ಷ ಕಳೆದ ಕುರಿತು ಟ್ವೀಟ್ ಮಾಡಿದ್ದರು.

ಸುಮಾರು 46 ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ಇನ್ನೂ ನಾಲ್ಕು ಸಿನಿಮಾಗಳು ಸದ್ಯ ಅವರ ಕೈಯಲ್ಲಿವೆ. ಅಲ್ಲಿಗೆ 28 ವರ್ಷಗಳಲ್ಲಿ ಸುದೀಪ್ 50 ಸಿನಿಮಾ ಮಾಡಿದಂತೆ ಆಗುತ್ತದೆ.

ತಮ್ಮ 28 ವರ್ಷದ ಸಿನಿ ಪಯಣದಲ್ಲಿ ಸಾಥ್ ಕೊಟ್ಟ ಪ್ರತಿಯೊಬ್ಬರಿಗೂ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಇಷ್ಟು ವರ್ಷ ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ಇಷ್ಟು ಬೇಗ 28 ವರ್ಷ ಆಯಿತು ನೋಡಿ ಎಂದು ಹೇಳಿಕೊಂಡಿದ್ದಾರೆ.

Story first published: Friday, February 2, 2024, 17:28 [IST]
Other articles published on Feb 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+