ವಿಡಿಯೋ ವೈರಲ್: ಗಾಯಗೊಂಡ ಹದ್ದನ್ನು ಉಪಚರಿಸಿದ ಸಚಿನ್

ಮುಂಬೈ, ಜೂ. 13: ನಿವಾಸದ ಬಳಿ ಗಾಯಗೊಂಡು ಕುಳಿತಿದ್ದ ಹದ್ದನ್ನು ಉಪಚರಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾನವೀಯತೆ ಮೆರೆದಿದ್ದಾರೆ. ಸಚಿನ್ ಹದ್ದನ್ನು ಉಪಚರಿಸಿದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈಯ ಬಾಂದ್ರಾದಲ್ಲಿನ ತಮ್ಮ ನಿವಾಸದ ಬಳಿ ಹದ್ದೊಂದು ಗಾಯಗೊಂಡು ಕುಳಿತಿರುವುದನ್ನು ಸಚಿನ್ ಗಮನಿಸಿದರು. ಕ್ರಿಕೆಟ್ ಗೆ ಹೊರತಾಗಿ ಇನ್ನೊಂದಿಷ್ಟು ಒಳ್ಳೆಯತನಗಳಿಗೂ ಗುರುತಿಸಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್ ಸ್ವತಃ ತಾವೇ ಮುಂದಾಗಿ ಗಾಯಗೊಂಡಿದ್ದ ಹದ್ದಿಗೆ ನೀರು, ಆಹಾರ ನೀಡಿ ಉಪಚರಿಸಿದರು.
ಗಾಯಗೊಂಡು ನಿಶ್ಯಕ್ತಿಗೊಳಗಾಗಿದ್ದ ಹದ್ದು, ಮಾಜಿ ಕ್ರಿಕೆಟಿಗನ ಉಪಚಾರದಿಂದ ಬೇಗನೆ ಚೇತರಿಸಿಕೊಂಡಿತು. ತೆಂಡೂಲ್ಕರ್ ಅವರು ಹದ್ದಿಗೆ ಉಪಚರಿಸುವ ಈ ವಿಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗಾಯಗೊಂಡಿದ್ದರಿಂದ ಹಾರಲಾಗದೆ ಕುಳಿತಿದ್ದ ಹದ್ದಿಗೆ ಸಚಿನ್ ಕೋಳಿ ಮಾಂಸವನ್ನು ತಿನ್ನಿಸಲು ಯತ್ನಿಸಿದರು. ಹಸಿದಿದ್ದ ಹದ್ದು ಮಾಂಸವನ್ನು ತಿನ್ನುವಾಗ ಸಚಿನ್ ಅಚ್ಚರಿಯಿಂದ ಅದನ್ನು ದಿಟ್ಟಿಸಿದರು ಕೂಡ. ಸಚಿನ್ ಅವರ ಈ ಮಾನವೀಯ ಮುಖವನ್ನು ಯಾರೋ ಸೆರೆಹಿಡಿದು ಫೇಸ್ಬುಕ್ಕಿನಲ್ಲಿ ಹಾಕಿದ್ದಾರೆ. ಅದೀಗ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications