For Quick Alerts
ALLOW NOTIFICATIONS  
For Daily Alerts
 

2011ರ ವಿಶ್ವಕಪ್ ಫೈನಲ್‌ನಲ್ಲಿ ಔಟ್ ಆದ ಕೂಡಲೇ ಬಂದ ಕೊಹ್ಲಿಗೆ ಏನು ಹೇಳಿದ್ದೆ ಎಂಬುದನ್ನು ಬಿಚ್ಚಿಟ್ಟ ಸಚಿನ್

Sachin Tendulkar revealed that what he was told to Virat Kohli after he dismissed in WC 2011 final

2011ರ ವಿಶ್ವಕಪ್ ಟೂರ್ನಿ ಎಂದ ಕೂಡಲೇ ಪ್ರತಿಯೊಬ್ಬ ಭಾರತ ಕ್ರಿಕೆಟ್ ಪ್ರೇಮಿಯ ಮುಖದಲ್ಲಿಯೂ ಸಹ ಸಂತಸ ಮೂಡುತ್ತದೆ. 2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಮಹೇಲಾ ಜಯವರ್ಧನೆ ಅಬ್ಬರದ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿ ಟೀಮ್ ಇಂಡಿಯಾಗೆ ಗೆಲ್ಲಲು 275 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ್ದ ಭಾರತದ ಪರ ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಕಣಕ್ಕಿಳಿದರು.

ಆದರೆ ಈ ಜೋಡಿ ಉತ್ತಮ ಪ್ರದರ್ಶನವನ್ನೇನೂ ನೀಡದೇ ನಿರಾಸೆ ಮೂಡಿಸಿತು. ವಿರೇಂದ್ರ ಸೆಹ್ವಾಗ್ ಡಕ್‌ಔಟ್ ಆದರೆ, ಸಚಿನ್ ತೆಂಡೂಲ್ಕರ್ 14 ಎಸೆತಗಳಲ್ಲಿ 18 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಟೀಮ್ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಬ್ಬರು ಪ್ರಮುಖ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿ ತಂಡ ಕೆಟ್ಟ ಆರಂಭವನ್ನು ಪಡೆದುಕೊಂಡಿತ್ತು.

ಸೆಹ್ವಾಗ್ ಔಟ್ ಆದ ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗೌತಮ್ ಗಂಭೀರ್ ಹಾಗೂ ಸಚಿನ್ ತೆಂಡೂಲ್ಕರ್ ಔಟ್ ಆದ ಬೆನ್ನಲ್ಲೇ ಕಣಕ್ಕಿಳಿದ ವಿರಾಟ್ ಕೊಹ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಟೀಮ್ ಇಂಡಿಯಾವನ್ನು ಒಳ್ಳೆಯ ಪ್ರದರ್ಶನ ನೀಡಿ ಉತ್ತಮ ಸ್ಥಿತಿ ತಲುಪಿಸಲೇಬೇಕಿತ್ತು. ಈ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಇಬ್ಬರೂ ಸಹ ಯಶಸ್ವಿಯಾಗಿದ್ದರು.

31 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಮೂರನೇ ವಿಕೆಟ್‌ನ ಆಟದಿಂದ ಉತ್ತಮ ಸ್ಥಿತಿಯನ್ನು ತಲುಪಿತ್ತು. ವೇಗವಾಗಿ ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಗಂಭೀರ್ ಹಾಗೂ ಕೊಹ್ಲಿ 83 ರನ್‌ಗಳ ಜತೆಯಾಟ ಉಸಿರನ್ನು ನೀಡಿದಂತಾಗಿತ್ತು.

ಇನ್ನು ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಔಟ್ ಆಗಿ ಹೊರ ಹೋಗುವಾಗ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಮೈದಾನ ಪ್ರವೇಶಿಸಿದ್ದರು. ವಿರಾಟ್ ಕೊಹ್ಲಿ ಮೈದಾನ ಪ್ರವೇಶಿಸುವಾಗ ಎದುರು ಸಿಕ್ಕಿದ್ದ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಗೆ ಏನನ್ನೋ ಹೇಳಿದ್ದರು. ಅದು ಕೆಲ ಸೆಕೆಂಡುಗಳ ಕಾಲದ ಮಾತಾದರೂ ಸಹ ಸಚಿನ್ ಅಂದು ಕೊಹ್ಲಿಗೆ ಏನು ಹೇಳಿದ್ರು ಎಂಬ ಪ್ರಶ್ನೆ ಹಾಗೂ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿತ್ತು.

tweet

ಹೌದು, ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಿನ್ನೆ ( ಏಪ್ರಿಲ್ 21 ) ತಮ್ಮ ಅನುಯಾಯಿಗಳ ಜತೆ ಟ್ವೀಟ್ ಮೂಲಕ ಮಾತನಾಡಿದ್ದಾರೆ. ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಸಚಿನ್ ತೆಂಡೂಲ್ಕರ್ ಉತ್ತರ ನೀಡಿದ್ದಾರೆ. ಈ ವೇಳೆ ಕ್ರಿಕೆಟ್ ಪ್ರೇಮಿಯೋರ್ವ ನೀವು 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಔಟ್ ಆಗಿ ಬರುತ್ತಿದ್ದಾಗ ಸಿಕ್ಕ ವಿರಾಟ್ ಕೊಹ್ಲಿಗೆ ಏನು ಹೇಳಿದ್ರಿ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ಸಚಿನ್ ತೆಂಡೂಲ್ಕರ್ "ಇನ್ನೂ ಸಹ ಬಾಲ್ ಸ್ವಿಂಗ್ ಆಗುತ್ತಿದೆ" ಎಂದು ಹೇಳಿದ್ದೆ ಎಂದರು. ಈ ಮೂಲಕ ಬಾಲ್ ಸ್ವಿಂಗ್ ಆಗುತ್ತಿದೆ, ನೋಡಿಕೊಂಡು ಆಡು ಎಂಬ ಸಂದೇಶವನ್ನು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿಗೆ ರವಾನಿಸಿದ್ದರು. ವಿರಾಟ್ ಕೊಹ್ಲಿ ಆ ಪಂದ್ಯದಲ್ಲಿ 49 ಎಸೆತಗಳಲ್ಲಿ 35 ರನ್ ಬಾರಿಸಿ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾದರು.

Story first published: Saturday, April 22, 2023, 17:11 [IST]
Other articles published on Apr 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+