ಸಚಿನ್ ದಾಖಲೆ: ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕಕ್ಕೆ ದಶಕದ ಸಂಭ್ರಮ

ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಏಕದಿನ ಕ್ರಿಕೆಟ್ ಹಿಂದೆಂದೂ ಕಾಣದ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಏಕದಿನ ಇತಿಹಾಸದಲ್ಲಿ ಹಿಂದೆಂದೂ ಸಾಧ್ಯವಾಗದ ದಾಖಲೆಯೊಂದನ್ನು ಟೀಮ್ ಇಂಡಿಯಾ ಪರವಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮಾಡಿದ್ದರು.
ಆ ದಾಖಲೆ ಬೇರೆ ಯಾವುದೂ ಅಲ್ಲ. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊದಲ ದ್ವಿಶತಕ. ಐವತ್ತು ಓವರ್‌ಗಳ ಸೀಮಿತ ಅವಧಿಯಲ್ಲಿ ದ್ವಿಶತಕವನ್ನು ಬಾರಿಸಬಹುದು ಎಂದು ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ತೋರಿಸಿಕೊಟ್ಟಿದ್ದರು.
ಸಚಿನ್ ತೆಂಡೂಲ್ಕರ್ ಈ ಅಪೂರ್ವ ಸಾಧನೆ ಪೂರೈಸಿ ಇಂದಿಗೆ ಸರಿಯಾಗಿ ಹತ್ತು ವರ್ಷಗಳು ಸಂದಿದೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು ಗ್ವಾಲಿಯರ್ ಮೈದಾನ
ಅದು 24/02/2010. ಗ್ವಾಲಿಯರ್ ಮೈದಾನ ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ಏಕದಿನ ಸರಣಿಗೆ ಸಾಕ್ಷಿಯಾಗಿತ್ತು. ಇದೇ ಪಂದ್ಯದಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಏಕದಿನ ಇತಿಹಾಸದ ಪ್ರಪ್ರಥಮ ದ್ವಿಶತಕವನ್ನು ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದರು.

ದ.ಆಫ್ರಿಕಾ ವಿರುದ್ಧದ ಎರಡನೇ ಒಡಿಐ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಸಾಧನೆಯನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ದ್ವಿಶತಕವನ್ನು ಬಾರಿಸಲು ಸಚಿನ್ ತೆಂಡೂಲ್ಕರ್ 147 ಎಸೆತಗಳನ್ನು ಎದುರಿಸಿದ್ದರು. ಇದು ಭರ್ಜರಿ 25 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಹತ್ತು ವರ್ಷದಲ್ಲಿ ಹತ್ತು ದ್ವಿಶತಕ
ಇದಾಗಿ ಹತ್ತು ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಹತ್ತು ದ್ವಿಶತಕಗಳನ್ನು ಕಂಡಿದೆ. ಇದರಲ್ಲಿ ನಾಲ್ಕು ದ್ವಿಶತಕಗಳನ್ನು ಭಾರತೀಯರೇ ಬಾರಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಸಚಿನ್ ತೆಂಡೂಲ್ಕರ್ ಜೊತೆಗೆ ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಕೂಡ ಈ ಸಾಧನೆಯನ್ನು ಮಾಡಿದ ಇತರ ಭಾರತೀಯ ಆಟಗಾರರು.

ರೋಹಿತ್ ಬಾರಿಸಿದ್ದು ಒಂದಲ್ಲ ಎರಡು ದ್ವಿಶತಕ
ಏಕದಿನ ಇತಿಹಾಸದಲ್ಲಿ ಮೊದಲ ದ್ವಿಶತಕವನ್ನು ಕಾಣಲು ನಾಲ್ಕು ದಶಕ ಬೇಕಾಗಿತ್ತು. ಆದರೆ ಟೀಮ್ ಇಂಡಿಯಾದ ಆಟಗಾರನೊಬ್ಬ ಒಂದೇ ವರ್ಷದ ಅಂತರದಲ್ಲಿ ಎರಡೆರಡು ದ್ವಿಶತಕವನ್ನು ಬಾರಿಸಿ ಅಚ್ಚರಿ ಮೂಡಿಸಿದರು. ಅದು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ರೋಹಿತ್ ಶರ್ಮಾ. ಶ್ರೀಲಂಕಾ ವಿರುದ್ಧ ಶರ್ಮಾ ಬಾರಿಸಿದ 264 ರನ್ ಏಕದಿನ ಇತಿಹಾಸದಲ್ಲಿ ಬಾರಿಸಿದ ಅತಿದೊಡ್ಡ ವೈಯಕ್ತಿಕ ಮೊತ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications