Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಐಸಿಸಿ ಟ್ವೀಟ್‌ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ತೆಂಡೂಲ್ಕರ್

ICC World Cup 2019 : ರೋಹಿತ್, ಸಚಿನ್ ಇಬ್ಬರಲ್ಲಿ ಯಾರು ಬೆಸ್ಟ್ ಎಂದಿದ್ದಕ್ಕೆ ಸಚಿನ್ ಏನಂದ್ರು ಗೊತ್ತಾ..?
Sachin Tendulkars Hilarious Reply To ICCs Comparison With Rohit Sharmas Six

ಮುಂಬೈ, ಜೂನ್ 19: ಭಾರತದ ಈಗಿರುವ ಕ್ರಿಕೆಟ್ ಆಟಗಾರರಲ್ಲಿ ಸ್ಟೈಲಿಷ್ ಪ್ಲೇಯರ್ ಎಂದು ಹೆಚ್ಚಾಗಿ ಕರೆಸಿಕೊಂಡವರು ರೋಹಿತ್ ಶರ್ಮಾ. ಸದ್ಯ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ನಲ್ಲೂ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಬೌಂಡರಿಗಳಿಗಾಗಿ ಗಮನ ಸೆಳೆಯುತ್ತಿದ್ದಾರೆ ಕೂಡ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಜೂನ್ 16ರಂದು ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ 113 ಎಸೆತಗಳಿಗೆ ರೋಹಿತ್ 140 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಭಾರತದ 89 ರನ್ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗಳಿಸಿತ್ತು.

ಈ ಪಂದ್ಯದಲ್ಲಿ ರೋಹಿತ್ ಬ್ಯಾಟಿಂಗ್ ವೈಖರಿ, ಸಿಕ್ಸರ್ ಬಾರಿಸುತ್ತಿದ್ದ ಪರಿ ಥೇಟ್ ಸಚಿನ್ ತೆಂಡೂಲ್ಕರ್ ಅವರನ್ನೇ ಹೋಲುತ್ತಿತ್ತು. 2003ರಲ್ಲಿ ಪಾಕಿಸ್ತಾನ ವಿರುದ್ಧ ಸಚಿನ್ ಇದೇ ರೀತಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದನ್ನು ಗಮನಿಸಿದ ಐಸಿಸಿ, '2003ರ ಸಚಿನ್ ಅಥವಾ 2019ರ ರೋಹಿತ್ ಯಾರು ಉತ್ತಮ' ಎಂಬ ಸಾಲುಗಳೊಂದಿಗೆ ಟ್ವೀಟ್ ಮಾಡಿತ್ತು.

ಇದಕ್ಕೆ ಸಚಿನ್ ತೆಂಡೂಲ್ಕರ್ ತಮಾಷೆಯಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. 'ನಾವಿಬ್ಬರೂ ಭಾರತೀಯರೇ. ಜೊತೆಗೆ ಮುಂಬೈಯವರೂ ಕೂಡ. ಹೀಗಾಗಿ ಯಾರು ಉತ್ತಮ ಅಂತ ಟಾಸ್ ಮಾಡೋಣ. ಹೆಡ್ ಬಿದ್ದರೆ ನಾನು ಗೆಲ್ಲುತ್ತೇನೆ, ಟೈಲ್ ಬಿದ್ದರೆ ಅವರು ಸೋಲುತ್ತಾರೆ' ಎಂದು ಬರೆದುಕೊಂಡಿದ್ದಾರೆ.

Story first published: Wednesday, June 19, 2019, 11:33 [IST]
Other articles published on Jun 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+