Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೊತೆಯಾಟಕ್ಕೆ ವಿಶ್ವದಾಖಲೆ ಬರೆದಿರೋ ಅಪರೂಪದ ಜೋಡಿ ಸಚಿನ್-ಗಂಗೂಲಿ

Sachin Tendulkars shares Throwback Picture With Sourav Ganguly

ನವದೆಹಲಿ, ಮೇ 14: ಅತ್ಯುತ್ತಮ ಜೊತೆಯಾಟಕ್ಕೆ ಹೆಸರಾಗಿದ್ದವರು ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ. ತಾವಿಬ್ಬರೂ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗಿನ ಹಳೆಯ ಚಿತ್ರವನ್ನು ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗುರುವಾರ (ಮೇ 14) ಇನ್‌ಸ್ಟಾಗ್ರಾಮ್‌ನಲ್ಲಿ ಹಳೆಯ ಚಿತ್ರ ಹಂಚಿಕೊಂಡಿದ್ದ ಸಚಿನ್, 'ದಾದಾ ಮನೆಯಲ್ಲಿ ಖುಷಿಯ ಸಂಜೆ ಕಳೆದ ಹಳೆಯ ಚಿತ್ರವಿದು. ಆಗ ಒಳ್ಳೆಯ ಊಟ ಮತ್ತು ಆದರದ ಆತಿಥ್ಯ ಲಭಿಸಿತ್ತು. ನಿಮ್ಮ ತಾಯಿ ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ. ಅವರಿಗೆ ಶುಭ ಹಾರೈಕೆಗಳು,' ಎಂದು ಸಾಲುಗಳನ್ನು ಬರೆದುಕೊಂಡಿದ್ದರು.

ಕುತೂಹಲಕಾರಿ ಸಂಗತಿಯೆಂದರೆ ಈಗ ವಿಶ್ವದ ಮುಂಚೂಣಿ ರನ್ ಸರದಾರನಾಗಿ ದಾಖಲೆ ಉಳಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಮತ್ತು ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಇಬ್ಬರೂ ಭಾರತದ ಹಿರಿಯರ ತಂಡದಲ್ಲಿ ಆಡುವುದಕ್ಕೂ ಮುನ್ನ ಅಂಡರ್ 15 ಕ್ರಿಕೆಟ್‌ನಲ್ಲೂ ಜೊತೆಯಾಗಿ ಆಡಿದ್ದರು.

Sachin Tendulkars shares Throwback Picture With Sourav Ganguly

176 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಜೊತೆಯಾಗಿ ಆಡಿರುವ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ, 47.55ರ ಸರಾಸರಿಯಲ್ಲಿ ಒಟ್ಟಾರೆ 8227 ರನ್ ಕಲೆ ಹಾಕಿದ್ದಾರೆ. ಇತ್ತೀಚೆಗೆ ಐಸಿಸಿ ಕೂಡ ಸಚಿನ್-ಗಂಗೂಲಿಯ ಜೊತೆಯಾಟ ಸ್ಮರಿಸಿ, 'ಸಚಿನ್-ಗಂಗೂಲಿ ಬಿಟ್ಟರೆ ಏಕದಿನದಲ್ಲಿ 6,000 ರನ್ ಕೂಡ ದಾಟಿದ ಜೊತೆ ಯಾವುದೂ ಇಲ್ಲ' ಎಂದು ಬರೆದುಕೊಂಡಿತ್ತು.

Story first published: Thursday, May 14, 2020, 23:49 [IST]
Other articles published on May 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+