Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ಷಮೆ ಕೇಳಿದ ಆಸಿಸ್ ಮೂಲದ ಕಂಪನಿ: ಮೊಕದ್ದಮೆ ಹಿಂಪಡೆಯಲು ಸಚಿನ್ ನಿರ್ಧಾರ

Sachin Tendulkar Settles Lawsuit Against Bat Manufacturers Spartan, Aussie Company Apologises

ಒಪ್ಪಂದವನ್ನು ಉಲ್ಲಂಘಿಸಿದ ಕಾರಣಕ್ಕೆ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ಮೂಲದ ಬ್ಯಾಟ್ ಕಂಪನಿ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದರು. ಆದರೆ ಈಗ ಆ ಕಂಪನಿ ಸಚಿನ್ ತೆಂಡೂಲ್ಕರ್ ಅವರ ಕ್ಷಮೆ ಕೇಳಿದೆ. ಹೀಗಾಗಿ ಪ್ರಕರಣವನ್ನು ಮುಂದುವರಿಸದಿರಲು ಸಚಿನ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಮೂಲದ ಸ್ಪಾರ್ಟನ್ ಕಂಪನಿಯ ಜೊತೆಗೆ ಸಚಿನ್ ತೆಂಡೂಲ್ಕರ್ 2016ರಲ್ಲಿ ಅದರ ಕ್ರೀಡಾ ಉತ್ಪನ್ನಗಳು ಮತ್ತು ಸ್ಪೋರ್ಟ್ಸ್ ಕಿಟ್‌ಗಳನ್ನು ಪ್ರಚಾರ ಮಾಡಲು ವಿಶೇಷ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು. ಆದರೆ ಒಪ್ಪಂದದ ಪ್ರಕಾರ ಆಸ್ಟ್ರೇಲಿಯಾ ಮೂಲದ ಕಂಪನಿ ಸಚಿನ್ ತೆಂಡೂಲ್ಕರ್‌ಗೆ ರಾಯಲ್ಟಿ ಮತ್ತು ಸಂಭಾವನೆಯನ್ನು ನೀಡುವಲ್ಲಿ ಕಂಪನಿ ವಿಫಲವಾಗಿತ್ತು.

ಇಷ್ಟು ಮಾತ್ರವಲ್ಲ ಒಪ್ಪಂದ ಮುಕ್ತಾಯದ ಬಳಿಕವೂ ಸಚಿನ್ ತೆಂಡೂಲ್ಕರ್ ಅವರ ಹೆಸರು ಮತ್ತು ಫೋಟೋಗಳನ್ನು ಬಳಸಿಕೊಂಡು ಪ್ರಚಾರವನ್ನು ನಡೆಸಿದ್ದ ಆರೋಪವೂ ಸ್ಪಾರ್ಟನ್ ಕಂಪನಿಯ ವಿರುದ್ಧ ಕೇಳಿ ಬಂದಿತ್ತು. ಹೀಗಾಗಿ ಸ್ಪಾರ್ಟನ್ ಕಂಪನಿ ಒಪ್ಪಂದದ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದು ಸಚಿನ್ ತೆಂಡೂಲ್ಕರ್ ನಿಯಮ ಉಲ್ಲಂಘನೆಯ ದಾವೆ ಹೂಡಿದ್ದರು.

ಇದಕ್ಕೆ ಸ್ಪಾರ್ಟನ್ ಕಂಪನಿಯ ಸಿಒಒ ಲೆಸ್ ಗಲ್ಬ್ರೇಟ್ "ಸ್ಪಾರ್ಟನ್ ಸಂಸ್ಥೆ ಸಚಿನ್ ತೆಂಡೂಲ್ಕರ್ ಅವರ ಕ್ಷಮೆ ಕೋರಿದೆ. ಪ್ರಾಯೋಜಕತ್ವ ಒಪ್ಪಂದದ ನಿಯಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದಕ್ಕೆ ವಿಷಾದಿಸುತ್ತೇವೆ. ಸಚಿನ್ ಅವರ ತಾಳ್ಮೆ ಮತ್ತು ಸಹಕಾರಕ್ಕೆ ನಾವು ಆಭಾರಿಯಾಗಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದರ ಜೊತೆಯಲ್ಲಿ ಸ್ಪಾರ್ಟನ್ ಸಂಸ್ಥೆ ಸಚಿನ್ ತೆಂಡೂಲ್ಕರ್ ಅವರು 2018ರ ಸೆಪ್ಟಂಬರ್ 17ರ ನಂತರ ಪ್ರಾಯೋಜಕತ್ವದ ಒಪ್ಪಂದಗಳನ್ನೂ ಅಂತ್ಯಗೊಳಿಸಿದ್ದಾರೆ. ಹೀಗಾಗಿ ಅದಾದ ನಂತರ ಯಾವುದೇ ಒಡಂಬಡಿಕೆಯೂ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಇಲ್ಲ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದೆ.

Story first published: Friday, May 15, 2020, 14:09 [IST]
Other articles published on May 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+