ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಮೊದಲ ಪ್ರೀತಿ'ಯ ವಿಡಿಯೋ ಶೇರ್ ಮಾಡಿದ ಸಚಿನ್ ತೆಂಡೂಲ್ಕರ್: ವಿಡಿಯೋ

Sachin Tendulkar Shares Video Of His ‘First Love’ On Valentine’s Day

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿವೃತ್ತಿಯ ಬಳಿಕವೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿಯೂ ನಾನಾ ರೀತಿಯಲ್ಲಿ ಅಭಿಮಾನಿಗಳ ಜೊತೆಗೆ ಸಂವಹನವನ್ನು ನಡೆಸುತ್ತಿದ್ದಾರೆ. ಪ್ರೇಮಿಗಳ ದಿನದಂದು ವಿಶೇಷವಾದ ವಿಡಿಯೋವೊಂದನ್ನು ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಪ್ರೇಮಿಗಳ ದಿನದ ಅಂಗವಾಗಿ ತನ್ನ ಮೊದಲ ಪ್ರೀತಿಯ ವಿಡಿಯೋವನ್ನು ಅಭಿಮಾನಿಗಳಿಗೆ ಹಂಚಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಶೇರ್ ಮಾಡಿರುವ ಸಚಿನ್ ತೆಂಡೂಲ್ಕರ್‌ ಬಗ್ಗೆ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿತ್ತಿದ್ದಾರೆ.

ಮತ್ತೆ ಅಂಗಳಕ್ಕಿಳಿಯಲಿದ್ದಾರೆ ಕ್ರಿಕೆಟ್ ದಿಗ್ಗಜರು, ಯಾವುದೀ ಟೂರ್ನಿ?!ಮತ್ತೆ ಅಂಗಳಕ್ಕಿಳಿಯಲಿದ್ದಾರೆ ಕ್ರಿಕೆಟ್ ದಿಗ್ಗಜರು, ಯಾವುದೀ ಟೂರ್ನಿ?!

ಸಚಿನ್ ತೆಂಡೂಲ್ಕರ್ ಇಂದು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಚಿನ್ ಸ್ಟ್ರೈಟ್‌ ಡ್ರೈವ್ ಬಾರಿಸುತ್ತಿದ್ದಾರೆ. ಈ ಮೂಲಕ ತನ್ನ ಮೊದಲ ಪ್ರೀತಿ ಏನಿದ್ದರೂ ಕ್ರಿಕೆಟ್ ಅನ್ನುವುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಭಿಮಾನಿಗಳು ಸಚಿನ್ ಪೋಸ್ಟ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

View this post on Instagram

My First Love! 😀

A post shared by Sachin Tendulkar (@sachintendulkar) on

ಸಚಿನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಬುಷ್‌ಫೈರ್‌ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ರಿಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿದ್ದ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಪೆರ್ರಿ ಹಾಕಿದ ಒಂದು ಚಾಲೆಂಜನ್ನು ಸ್ವೀಕರಿಸಿ ಒಂದು ಓವರ್‌ಗಳ ಕಾಲ ಬ್ಯಾಟಿಂಗ್ ಕೂಡ ಮಾಡಿದ್ದರು.

ಇದೀಗ ಮತ್ತೊಂದು ಕ್ರಿಕೆಟ್ ಟೂರ್ನಿಗೆ ಸಚಿನ್ ತೆಂಡೂಲ್ಕರ್ ಸಜ್ಜಾಗಿದ್ದಾರೆ. ಅನ್‌ಅಕಾಡೆಮಿಕ್ ರೋಡ್ ರೋಡ್‌ ಸೇಫ್ಟಿ ಟೂರ್ನಿ ಆಯೋಜನೆಯಾಗುತ್ತಿದ್ದು ತೆಂಡೂಲ್ಕರ್ ಸಹಿತ ಅನೇಕ ದಿಗ್ಗಜರು ಮತ್ತೆ ಅಂಗಳಕ್ಕಿಳಿದು ಕಾದಾಟವನ್ನು ನಡೆಸಲಿದ್ದಾರೆ.

Story first published: Friday, February 14, 2020, 21:00 [IST]
Other articles published on Feb 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X