Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬೆಳ್ಳಿ ಪದಕಕ್ಕೆ ಆರ್ಹರು'; ವಿನೇಶ್ ಬೆಂಬಲಕ್ಕೆ ನಿಂತ ಕ್ರಿಕೆಟ್‌ ದೇವರು

ಆಗಸ್ಟ್ 9 ಶುಕ್ರವಾರ, ಭಾರತದ ವಿನೇಶ್ ಫೋಗಟ್ 100 ಗ್ರಾಮ್ ಅಧಿಕ ತೂಕದ ಕಾರಣ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ. ಫೈನಲ್ ತಲುಪಿದ್ದ ಈ ಕುಸ್ತಿಪಟುವಿನಿಂದ ಭಾರತ ಬಂಗಾರದ ಪದಕ ನಿರೀಕ್ಷೆ ಇಟ್ಟುಕೊಂಡಿತ್ತು.

ಒಲಿಂಪಿಕ್ಸ್‌ನಿಂದ ಆನರ್ಹಗೊಂಡ ಬಳಿಕ ಬೆಳ್ಳಿ ಪದಕಕ್ಕಾಗಿ ವಿನೇಶ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೆ, ಭಾರತದಲ್ಲೂ ಈ ಸಂಬಂಧ ತೀವ್ರ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಕೂಡ ವಿನೇಶ್ ಬೆಂಬಲಕ್ಕೆ ನಿಂತಿದ್ದಾರೆ.

Sachin Tendulkar supports Vinesh Phogat

ಕ್ರಿಕೆಟ್ ದೇವರ ಬೆಂಬಲ

ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣ ಟ್ವೀಟರ್ (ಎಕ್ಸ್)ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ 'ಪ್ರತಿ ಆಟಕ್ಕೂ ನಿಯಮಗಳಿವೆ ಮತ್ತು ಆ ನಿಯಮಗಳನ್ನು ಗಮನಿಸಬೇಕು. ಬಹುಶಃ ಕೆಲವೊಮ್ಮೆ ಮರುಪರಿಶೀಲಿಸಬಹುದು. ವಿನೇಶ್ ಫೋಗಟ್ ಫೈನಲ್ಸ್ ಫೇರ್ ಮತ್ತು ಸ್ಕ್ವೇರ್‌ಗೆ ಅರ್ಹತೆ ಪಡೆದಿದ್ದರು.

ತೂಕದ ಆಧಾರದ ಮೇಲೆ ವಿನೇಶ್ ಅನರ್ಹತೆಯು ಫೈನಲ್‌ಗೆ ಮುಂಚೆಯೇ ಅವರಿಂದ ಅರ್ಹವಾದ ಬೆಳ್ಳಿ ಪದಕವನ್ನು ಕಸಿದುಕೊಂಡಿರುವುದು ತರ್ಕ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ' ಎಂದು ಬರೆಯುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಬೆಳ್ಳಿ ಪದಕಕ್ಕೆ ಅರ್ಹರು

'ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಗಳನ್ನು ತೆಗೆದುಕೊಳ್ಳುವಂತಹ ನೈತಿಕ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದರೆ ಅದು ಅರ್ಥವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಯಾವುದೇ ಪದಕ ನೀಡದೇ ಕೊನೆಯ ಸ್ಥಾನದಲ್ಲಿ ನಿಲ್ಲುವುದು ಸೂಕ್ತವಾಗಿತ್ತು.

ಆದರೆ ವಿನೇಶ್ ತನ್ನ ಪ್ರತಿಸ್ಪರ್ಧಿಗಳನ್ನು ತಕ್ಕಮಟ್ಟಿಗೆ ಸೋಲಿಸಿ ಅಗ್ರ-2 ತಲುಪಿದರು. ಅವಳು ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹಳು. ಕ್ರೀಡೆಗಾಗಿ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ. ವಿನೇಶ್‌ಗೆ ಅರ್ಹವಾದದ್ದು ಸಿಗಲಿ ಎಂದು ಪ್ರಾರ್ಥಿಸೋಣ ಎಂದು ಸಚಿನ್ ಮತ್ತಷ್ಟು ಬರೆದಿರುವ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಶೀಘ್ರದಲ್ಲೇ ನಿರ್ಧಾರ

ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ನಿಂದ ಅನರ್ಹತೆಗೆ ಸಂಬಂಧಿಸಿದಂತೆ ವಿನೇಶ್ ಫೋಗಟ್ ಸಲ್ಲಿಸಿರುವ ಅರ್ಜಿಯ ನಿರ್ಧಾರವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಅಂತ್ಯದ ಮೊದಲು ಬರಲಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಇಂದು (ಆಗಸ್ಟ್ 9) ಹೇಳಿದೆ.

ವಿನೇಶ್ ಫೋಗಟ್ ಅವರ ಪ್ರಕರಣದಲ್ಲಿ ಖ್ಯಾತ ಭಾರತೀಯ ವಕೀಲ ಹರೀಶ್ ಸಾಳ್ವೆ ಅವರು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಪರ ವಾದ ಮಂಡಿಸಿದ್ದಾರೆ.

Story first published: Friday, August 9, 2024, 21:21 [IST]
Other articles published on Aug 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+