5000 ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ ಸಚಿನ್ ತೆಂಡೂಲ್ಕರ್

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಅನೇಕ ಕ್ರೀಡಾಪಟುಗಳು ಸರ್ಕಾರದ ನೆರವಿಗೆ ನಿಂತಿದ್ದಾರೆ. ಟೀಮ್ ಇಂಡಿಯಾದ ಹಾಲಿ ಮಾಜಿ ಆಟಗಾರರು ಕೂಡ ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ತಮ್ಮ ನೆರವನ್ನು ನೀಡಿದ್ದಾರೆ. ಈ ಮಧ್ಯೆ ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹಸಿದವರ ನೆರವಿಗೆ ಬಂದಿದ್ದಾರೆ.
ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಪ್ರಧಾನ ಮಂತ್ರಿ ಕೇರ್ಸ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 25 ಲಕ್ಷ ರೂಪಾಯಿಯ ನೆರವನ್ನು ನೀಡಿದ್ದರು. ಇದೀಗ ಮತ್ತೆ 5000 ಕುಟುಂಬಕ್ಕೆ ದೈನಂದಿನ ಸಾಮಾಗ್ರಿಗಳನ್ನು ನೀಡಿ ಆ ಕುಟುಂಬಗಳಿಗೆ ನೆರವಾಗಿದ್ದಾರೆ.
ಮುಂಬೈನ ಶಿವಾಜಿ ನಗರ ಪ್ರದೇಶದ ಸುಮಾರು 5000 ಜನರಿಗೆ ಸಚಿನ್ ತೆಂಡೂಲ್ಕರ್ ನೆರವಿನ ಹಸ್ತವನ್ನು ಚಾಚಿದ್ದಾರೆ. ಅಪ್ನಾಲಯ ಎಂಬ ಎನ್‌ಜಿಒ ಮೂಲಕ ಈ ಕಾರ್ಯವನ್ನು ಸದ್ದಿಲ್ಲದೆ ಸಚಿನ್ ಮಾಡಿದ್ದಾರೆ. ಈ ವಿಚಾರವನ್ನು ಅಪ್ನಾಲಯ ಎನ್‌ಜಿಒ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿ ಸಚಿನ್ ತೆಂಡೂಲ್ಕರ್‌ಗೆ ಧನ್ಯವಾದ ಸಲ್ಲಿಸಿದೆ.
ಅಪ್ನಾಲಯ ಎನ್‌ಜಿಒ ಗೆ ಸಚಿನ್ ತೆಂಡೂಲ್ಕರ್ ಕೂಡ ಅಭಿನಂದನೆಯನ್ನು ಸಲ್ಲಿಸಿ ರಿಟ್ವೀಟ್ ಮಾಡಿದ್ದಾರೆ. ಅವಶ್ಯಕವಿರುವವರಿಗೆ ನಿಮ್ಮ ಈ ರೀತಿಯ ಕಾರ್ಯವನ್ನು ಮುಂದುವರಿಸಿ ಎಂದು ಕ್ರಿಕೆಟ್ ದಿಗ್ಗಜ ಶುಭಹಾರೈಸಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಸದ್ಯ ಭಾರತದಲ್ಲಿ 6400ಕ್ಕೂ ಅಧಿಕ ಕೊರೊನಾ ವೈರಸ್ ಪತ್ತೆಯಾಗಿದೆ. ಕೊರೊನಾ ವೈರಸ್‌ನ ಕಾರಣದಿಂದ ಐಪಿಎಲ್, ಒಲಿಂಪಿಕ್ಸ್‌ನಂತಾ ಖ್ಯಾತಾ ಕ್ರೀಡಾಕೂಟಗಳು ರದ್ದಾಗಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications