Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮ್ಮ ಸಮಗ್ರ ಮಾಹಿತಿಗೆ ಹೊಸ ಆ್ಯಪ್ ಬಿಡುಗಡೆಗೊಳಿಸಿದ ಸಚಿನ್

ಮುಂಬೈ, ಮಾರ್ಚ್ 31: ಸಂಸತ್ ಅಧಿವೇಶನಕ್ಕೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಏನು ಮಾಡ್ತಾ ಇದಾರೆ ಅನ್ನೋದಕ್ಕೆ ಉತ್ತರ ಸಿಕ್ಕಿದೆ.

ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಹಾಗೂ ತಮ್ಮ ಬಗ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ಒಂದೇ ಸೂರಿನಡಿ ತಮ್ಮ ಅಭಿಮಾನಿಗಳಿಗೆ ನೀಡಲೆಂದೇ, ಅವರೀಗ '100 MB'ಎಂಬ ಹೊಸತೊಂದು ಮೊಬೈಲ್ ಆ್ಯಪ್ ಬಿಡುಗಡೆಗೆ ಸಜ್ಜಾಗಿದ್ದಾರೆ.

Sachin Tendulkar unveils new fan engagement app, 100MB

ಇದನ್ನು ಖುದ್ದು ಸಚಿನ್ ಅವರೇ ಟ್ವೀಟರ್ ಮೂಲಕ ಜಗಜ್ಜಾಹೀರು ಮಾಡಿದ್ದಾರೆ. ಈ ಆ್ಯಪ್ ನಲ್ಲಿ, ಸಚಿನ್ ಬಗೆಗಿನ ಎಲ್ಲಾ ಮಾಹಿತಿಗಳೂ, ಸಾಮಾಜಿಕ ಜಾಲತಾಣಗಳಲ್ಲಿನ ಅವರ ಸಂದೇಶಗಳು, ಅವರು ಭಾಗವಹಿಸುವ ಸಭೆ, ಸಮಾರಂಭಗಳ ಫೋಟೋ ಸಹಿತ ವಿಸ್ಕೃತ ವರದಿ ಸೇರಿದಂತೆ ಸಚಿನ್ ಅವರ ಅನೇಕಾನೇಕ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಏಪ್ರಿಲ್ 2ರಂದು ಈ ಆ್ಯಪ್, ಜನ ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಆ್ಯಪ್ ಗಾಗಿಯೇ ಒಂದು ಧ್ಯೇಯ ಗೀತೆಯೊಂದನ್ನು ಸೃಷ್ಟಿಸಲಾಗಿದ್ದು, ಇದನ್ನು ಖುದ್ದು ಸಚಿನ್ ತೆಂಡೂಲ್ಕರ್ ಅವರು ಖ್ಯಾತ ಗಾಯಕ ಸೋನು ನಿಗಂ ಜತೆ ಹಾಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+