ಸಚಿನ್ ಸ್ಥಾಪಿಸಲಿದ್ದಾರೆ 'ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿ'

ಮುಂಬೈ, ಜುಲೈ 20: ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ 5 ವರ್ಷಕ್ಕೂ ಮೊದಲೇ ಸಚಿನ್ ತನ್ನದೊಂದು ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಕನಸು ಕಂಡಿದ್ದರು. ಅದರೆ ಸಚಿನ್ ಕನಸು ಈಗ ಈಡೇರುವುದರಲ್ಲಿದೆ. 'ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿ' (ಟಿಎಂಜಿಎ) ಹೆಸರಿನ ಒಂದು ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಸಚಿನ್ ತಿಳಿಸಿದ್ದಾರೆ.
ಇಂಗ್ಲೆಂಡ್ನ ಮಿಡ್ಲ್ಸೆಕ್ಸ್ ಕೌಂಟಿ ಟೀಮ್ ಜತೆಸೇರಿ ಸಚಿನ್, ಟಿಎಂಜಿಎ ಆರಂಭಿಸುವುದರಲ್ಲಿದ್ದು, 9 ರಿಂದ 14ರ ಹರೆಯದ ಬಾಲಕ-ಬಾಲಕಿಯರಿಗೆ ಅಕಾಡೆಮಿಯಲ್ಲಿ ಸ್ವತಃ ತೆಂಡುಲ್ಕರ್ ಮಾರ್ಗದರ್ಶನ ನೀಡಲಿದ್ದಾರೆ. ಇದಕ್ಕೆ ಇಂಗ್ಲೆಂಡ್ ನ ಮಿಡ್ಲ್ಸೆಕ್ಸ್ ಕ್ರಿಕೆಟ್ ಕ್ಲಬ್ ಕೈಜೋಡಿಸಲಿದೆ.
ಲಂಡನ್ ನ ನಾರ್ತ್ ವುಡ್ ನಲ್ಲಿರುವ ಮರ್ಚೆಂಟ್ ಟೇಲರ್ ಶಾಲೆಯಲ್ಲಿ ತೆಂಡೂಲ್ಕರ್ ಮಿಡ್ಲ್ ಸೆಕ್ಸ್ ಗ್ಲೋಬಲ್ ಅಕಾಡೆಮಿಯ ಮೊದಲ ಕ್ಯಾಂಪ್ ಆಗಸ್ಟ್ 6-9ರ ವರೆಗೆ ನಡೆಯಲಿದೆ. ಮುಂಬೈಯಲ್ಲಿ ನವೆಂಬರ್ ತಿಂಗಳಿನಿಂದ ಕ್ಯಾಂಪ್ ನಡೆಯಲಿದೆ.
ಈ ಬಗ್ಗೆ ಮಾತನಾಡುತ್ತ ಸಚಿನ್, ' ಇಂಥದ್ದೊಂದು ಅಕಾಡೆಮಿ ಸ್ಥಾಪಿಸುವ ಬಗ್ಗೆ ಸಾಕಷ್ಟು ಮಂದಿ ನನ್ನಲ್ಲಿ ತಿಳಿಸಿದ್ದರು. ಆದರೆ ನನಗೆ ಅವರೇನು ಬಯಸುತ್ತಿದ್ದಾರೆ ಅನ್ನೋದು ನನಗರ್ಥವಾಗಿರಲಿಲ್ಲ. ಯುವಕರನ್ನೇ ಬೆಂಬಲಿಸುತ್ತಿದ್ದರೆ ಬದಲಾವಣೆ ತರಲು ಸಾಧ್ಯವಿಲ್ಲ. ಬದಲಿಗೆ ಎಳವೆಯಿಂದಲೇ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ದೊರೆತರೆ ಇನ್ನೂ ಉತ್ತಮ. ಆ ನೆಲೆಯಲ್ಲಿಯೆ ಈ ಅಕಾಡೆಮಿ ಪ್ರಾರಂಭವಾಗುತ್ತಿದೆ' ಎಂದು ಸಚಿನ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications