ಸಚಿನ್‌ಗೆ ಬೌಲಿಂಗ್ ಮಾಡುವಾಗ ವಾರ್ನ್ ಪಡುತ್ತಿದ್ದ ಕಷ್ಟ ವಿವರಿಸಿದ ಬ್ರೇಟ್ ಲೀ

ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಶೇನ್ ವಾರ್ನ್ ಅವರ ಜೊತೆ 'ಬೆಕ್ಕು ಮತ್ತು ಇಲಿ'ಯ ಆಟವಾಡುತ್ತಿದ್ದರು ಎಂದು ಬ್ರೇಟ್ ಲೀ ಹೇಳಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ನಡುವಿನ ಕಾದಾಟ ಸಾಕಷ್ಟು ಖ್ಯಾತವಾಗಿದೆ. ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುತ್ತಿದ್ದ ದಿಗ್ಗಜ ಬೌಲರ್ ಶೇನ್ ವಾರ್ನ್ ಸಚಿನ್ ತೆಂಡೂಲ್ಕರ್ ಮುಂದೆ ಅಕ್ಷರಶಃ ಪರದಾಡುತ್ತಿದ್ದರು.
ಇಂತಾ ಸಂದರ್ಭದಲ್ಲಿ ಶೇನ್ ವಾರ್ನ್ ಮನಸ್ಥಿತಿ ಹೇಗಿತ್ತು? ಸಹ ಆಟಗಾರರೊಂದಿಗೆ ಏನೆಲ್ಲಾ ಚರ್ಚೆ ನಡೆಸುತ್ತಿದ್ದರು ಎಂಬುದನ್ನು ಆಸಿಸ್ ವೇಗಿ ಬ್ರೇಟ್ ಲೀ ಸಂಪೂರ್ಣವಾಗಿ ಬಿಚ್ಚಿಟ್ಟಿದ್ದಾರೆ.

ಆಟಿಕೆಯಂತೆ ಬಳಸಿಕೊಳ್ಳುತ್ತಿದ್ದರು
ಶೇನ್ ವಾರ್ನ್ ಬೌಲಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್ ಆರಾಮಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್‌ಅನ್ನು ಆಟಿಕೆಯಂತೆ ಬಳಸಿ ಆಡುವುದು ಅತ್ಯಂತ ಅಪರೂಪವಾಗಿತ್ತು ಎಂದು ಬ್ರೇಟ್ ಲೀ ಹೇಳಿದ್ದಾರೆ. ಶೇನ್ ವಾರ್ನ್ ಅಸ್ತ್ರಕ್ಕೆ ಬೇರೆ ಬೇರೆ ರೀತಿಯಾಗಿ ಪ್ರತ್ಯುತ್ತರವನ್ನು ಸಚಿನ್ ನೀಡುತ್ತಿದ್ದರು ಎಂದು ಬ್ರೇಟ್ ಲಿ ಹೇಳಿದ್ದಾರೆ.

ಬೆಕ್ಕು ಇಲಿಯ ಹೋರಾಟ
ಬೇರೆ ಯಾರಿಗೂ ಶೇನ್ ವಾರ್ನ್ ಬೌಲಿಂಗ್ ನಲ್ಲಿ ಆ ರೀತಿ ಆಡಲು ಸಾಧ್ಯವಿರುತ್ತಿರಲ್ಲ, ಯಾಕೆಂದರೆ ಆತನೋರ್ವ ಪ್ರತಿಭಾನ್ವಿತ. ಅದೊಂದು ರೀತಿ ಬೆಕ್ಕು ಮತ್ತು ಇಲಿ ಆಟದಂತೆ ಕಂಡುಬರುತ್ತಿತ್ತು ಎಂದು ಬ್ರೇಟ್ ಲೀ ದಿಗ್ಗಜರ ಹೋರಾಟವನ್ನು ಹೋಲಿಕೆ ಮಾಡಿದ್ದಾರೆ.

ಸಚಿನ್ ಬ್ಯಾಟಿಂಗನ್ನು ದ್ವೇಶಿಸುತ್ತಿದ್ದರು
ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆಯಲು ಸಾಧ್ಯವಾಗದಿದ್ದಾಗ ಶೇನ್ ವಾರ್ನ್ ಕೋಪಗೊಳ್ಳುತ್ತಿದ್ದರು ಎಂದು ಆಸ್ಟ್ರೇಲಿಯಾದ ವೇಗಿ ಹೇಳಿದ್ದಾರೆ. ಅವರು ಬ್ಯಾಟಿಂಗ್ ಮಾಡುತ್ತಿದ್ದ ರೀತಿಯನ್ನು ವಾರ್ನ್ ದ್ವೇಶಿಸುತ್ತಿದ್ದರು ಎಂಬ ಗುಟ್ಟನ್ನು ಬ್ರೇಟ್ ಲೀ ಬಿಚ್ಚಿಟ್ಟಿದ್ದಾರೆ.

ವಾರ್ನ್ ಕೈ ಚೆನ್ನಾಗಿ ಗಮನಿಸುತ್ತಿದ್ದ ಸಚಿನ್
ಶೇನ್ ವಾರ್ನ್ ಜಗತ್ತಿನ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನೂ ಕಣ್ಣಿಗೆ ಮಣ್ಣೆರಚಿ ಬಿಡುತ್ತಿದ್ದರು, ಆದರೆ ಸಚಿನ್ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದರು. ಶೇನ್ ವಾರ್ನ್ ಬೌಲಿಂಗ್ ಮಾಡುವಾಗ ಅವರ ಕೈಯನ್ನು ಸಚಿನ್ ಚೆನ್ನಾಗಿ ಗಮನಿಸುತ್ತಿದ್ದರು. ಎಲ್ಲಾ ಪ್ರಯತ್ನಗಳ ಬಳಿಕ ಬಂದು 'ಯಾವ ರೀತಿ ಬೌಲಿಂಗ್ ಮಾಡಿದರೂ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ' ಎನ್ನುತ್ತಿದ್ದರು ಎಂದು ಬ್ರೇಟ್ ಲೀ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications