ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಮತ್ತು ಸಾನಿಯಾ ನಿಶ್ಚಿತಾರ್ಥ: ಯಾರು ಹುಡುಗಿ?
ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ನಿಶ್ಚಿತಾರ್ಥ ನಡೆದಿದೆ ಎಂದು ತಿಳಿದು ಬಂದಿದೆ. 25 ವರ್ಷದ ಅರ್ಜುನ್ ತನ್ನ ಬಾಲ್ಯದ ಗೆಳತಿ ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ಕಾರ್ಯಕ್ರಮ ಬಹಳ ರಹಸ್ಯವಾಗಿ ನಡೆದಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ.
ನಿಶ್ಚಿತಾರ್ಥ ಸಮಾರಂಭವನ್ನು ಸರಳವಾಗಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಎರಡೂ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ್ ನೀಡಲಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ರವಿ ಘಾಯ್ ಸಹ ಉತ್ತಮ ಸ್ನೇಹಿತರು. ಇನ್ನು ಈ ಇಬ್ಬರ ನಿಶ್ಚಿತಾರ್ಥದ ಬಗ್ಗೆ ಎರಡೂ ಕುಟುಂಬಗಳಿಂದ ಇನ್ನು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಅಲ್ಲದೆ ಅರ್ಜುನ್ ತೆಂಡೂಲ್ಕರ್ ಸಹ ಈ ಬಗ್ಗೆ ತನ್ನ ಸಾಮಾಜಿಕ ತಾಣದಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ.

ಈಗಾಗಲೇ ಅರ್ಜುನ್ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿದ್ದಾರೆ. ಇವರು ಮುಂಬೈ ಇಂಡಿಯನ್ಸ್ ಪರ ಐದು ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು 3 ವಿಕೆಟ್ ಸಹ ಕಬಳಿಸಿದ್ದಾರೆ. ಒಮ್ಮೆ ಮಾತ್ರ ಐಪಿಎಲ್‌ನಲ್ಲಿ ಬ್ಯಾಟ್ ಮಾಡಿರುವ ಅರ್ಜುನ್ 13 ರನ್ ಸಿಡಿಸಿದ್ದಾರೆ. ಅರ್ಜುನ್ ಹೊಸ ಚೆಂಡಿನೊಂದಿಗೆ ಉತ್ತಮವಾಗಿ ಬೌಲಿಂಗ್ ಮಾಡುವ ಕಲೆಯನ್ನು ಹೊಂದಿದ್ದಾರೆ. ಇವರು 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. 18 ಲೀಸ್ಟ್ ಎ ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ. ಇನ್ನು 24 ಟಿ20 ಪಂದ್ಯಗಳಲ್ಲಿ 27 ವಿಕೆಟ್ ಕಬಳಿಸಿದ್ದಾರೆ.
ಸಾನಿಯಾ ಚಂದೋಕ್ ಯಾರು?
ಅರ್ಜುನ್ ಅವರ ಭಾವಿ ಪತ್ನಿ ಸಾನಿಯಾ ಚಂದೋಕ್ ಮುಂಬೈನ ದೊಡ್ಡ ಕುಟುಂಬಕ್ಕೆ ಸೇರಿದವರು. ಸಾನಿಯಾ ಹೈ ಪ್ರೋಫೈಲ್ ಕುಟುಂಬದವರಾದರೂ ಸಾಮಾನ್ಯ ಜನರಂತೆ ಇದ್ದಾರೆ. ಇವರು ಮುಂಬೈನ ಪ್ರಸಿದ್ಧ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಘಾಯ್ ಇಂಟರ್ ಕಾಂಟಿನೆಂಟಲ್ ಮೆರೈನ್ ಡ್ರೈವ್ ಹೋಟೆಲ್ ಮತ್ತು ಬ್ರೂಕ್ಲಿನ್ ಕ್ರೀಮರಿಗಳ ಮಾಲೀಕರು. ಇವರಿಬ್ಬರ ಮದುವೆ ಯಾವಾಗ ಆಗುತ್ತದೆ ಎಂಬ ಬಗ್ಗೆ ಇನ್ನು ಯಾವುದೇ ಮಾಹಿತಿ ಬಂದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications