For Quick Alerts
ALLOW NOTIFICATIONS  
For Daily Alerts
 

2023ರ ವಿಶ್ವಕಪ್‌ ಸೆಮಿಫೈನಲ್ ತಲುಪುವ 4 ತಂಡಗಳನ್ನು ಹೆಸರಿಸಿದ ಸಚಿನ್ ತೆಂಡೂಲ್ಕರ್; ಪಾಕಿಸ್ತಾನಕ್ಕೆ ಸ್ಥಾನವಿಲ್ಲ!

ಹಲವು ದಿನಗಳ ಕಾಯುವಿಕೆ ನಂತರ, 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯು ಅಂತಿಮವಾಗಿ ಅಹಮದಾಬಾದ್‌ನಲ್ಲಿ ಗುರುವಾರ, ಅಕ್ಟೋಬರ್ 5ರಂದು ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸುವುದರೊಂದಿಗೆ ಚಾಲನೆ ಸಿಕ್ಕಿತು.

Sachin Tendulkars World Cup 2023 Semi-final Predictions: Pakistan Not in the Mix

ಇದೀಗ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 2023ರ ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ಕೊಂಡೊಯ್ದಿದ್ದು, ಐಸಿಸಿ ಟೂರ್ನಿಯನ್ನು ಪ್ರಾರಂಭಿಸಲು ಸೂಚಿಸಿದರು. ವಿಶ್ವಕಪ್ ಪಂದ್ಯಾವಳಿಯನ್ನು ಮೊದಲ ಬಾರಿಗೆ ಭಾರತವು ಸಂಪೂರ್ಣವಾಗಿ ಆಯೋಜಿಸುತ್ತಿದೆ.

ಅನುಭವವು ಅತಿವಾಸ್ತವಿಕವಾಗಿದೆ ಎಂದು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದರು ಮತ್ತು ಅಹಮದಾಬಾದ್‌ನಲ್ಲಿ ನಡೆದ 2011ರ ಏಕದಿನ ವಿಶ್ವಕಪ್‌ನ ಕ್ವಾರ್ಟರ್-ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ರೋಚಕ ಗೆಲುವನ್ನು ಸ್ಮರಿಸಿಕೊಂಡರು.

Sachin Tendulkars World Cup 2023 Semi-final Predictions: Pakistan Not in the Mix

"ಆ ಟ್ರೋಫಿಯನ್ನು ಮೈದಾನದಲ್ಲಿ ಒಯ್ಯುವುದು ಒಂದು ಅತಿವಾಸ್ತವಿಕ ಅನುಭವವಾಗಿತ್ತು. ನಾವು ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ವಾರ್ಟರ್-ಫೈನಲ್ ಪಂದ್ಯವನ್ನು ಗೆದ್ದಿದ್ದೇವೆ ಮತ್ತು ಆ ರಾತ್ರಿ ನಮಗೆ ವಿಶೇಷವಾಗಿತ್ತು. ಇದೀಗ 12 ವರ್ಷಗಳ ನಂತರ ಈ ಕ್ರೀಡಾಂಗಣಕ್ಕೆ ಹಿಂತಿರುಗಿದಾಗ ಸಂತೋಷವಾಗಿದೆ," ಎಂದರು.

"2011ರ ಮೊದಲು ಯಾವುದೇ ಆತಿಥೇಯ ರಾಷ್ಟ್ರವು ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದಿರಲಿಲ್ಲ. ಅದರ ನಂತರ, ಎಲ್ಲಾ ದೇಶಗಳು ಗೆದ್ದಿವೆ. ಇದೀಗ ಭಾರತವು ಮತ್ತೆ ಆತಿಥ್ಯ ವಹಿಸಿದೆ," ಎಂದು ಸಚಿನ್ ತೆಂಡೂಲ್ಕರ್ ಐಸಿಸಿಯ ಡಿಜಿಟಲ್ ಇನ್‌ಸೈಡರ್ ಸಂವಹನದಲ್ಲಿ ತಿಳಿಸಿದರು.

ಭಾರತ ತುಂಬಾ ಉತ್ತಮ, ಸಮತೋಲಿತ ತಂಡ: ಸಚಿನ್ ತೆಂಡೂಲ್ಕರ್

2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲಿಸ್ಟ್‌ಗಳಿಗೆ ಸಂಬಂಧಿಸಿದಂತೆ ಭವಿಷ್ಯ ನುಡಿಯುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅನೇಕ ತಜ್ಞರ ಸಾಲಿಗೆ ಸೇರಿಕೊಂಡರು.

ಆತಿಥೇಯ ಭಾರತ, ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಆವೃತ್ತಿಯ ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳನ್ನು ತಮ್ಮ ಆಯ್ಕೆಯ 2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲಿಸ್ಟ್ ತಂಡಗಳೆಂದು ಹೆಸರಿಸಿದರು.

ಅವರ ಆಯ್ಕೆಯ ಹಿಂದಿನ ಕಾರಣಗಳನ್ನು ವಿವರಿಸಿದ ಸಚಿನ್ ತೆಂಡೂಲ್ಕರ್, "ಯಾವುದೇ ಸಂದೇಹವಿಲ್ಲದೆ ಭಾರತ ತಂಡವಿರಲಿದೆ. ನಾವು ತುಂಬಾ ಉತ್ತಮ, ಸಮತೋಲಿತ ತಂಡವನ್ನು ಹೊಂದಿದ್ದೇವೆ. ಆಸ್ಟ್ರೇಲಿಯಾದ ವಿಷಯವೂ ಹಾಗೆಯೇ, ಅವರು ಸಮತೋಲಿತ ತಂಡವನ್ನು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ," ಎಂದು ಹೇಳಿದರು.

"ಮೂರನೆಯದು ಇಂಗ್ಲೆಂಡ್ ಎಂದು ನಾನು ಹೇಳುತ್ತೇನೆ. ಇಂಗ್ಲೆಂಡ್ ಅತ್ಯಂತ ಬಲಿಷ್ಠ ತಂಡವಾಗಿದೆ. ಅನುಭವ ಮತ್ತು ಕೆಲವು ಹೊಸ ಮುಖಗಳ ಸಂಯೋಜನೆಯಿಂದ ಕೂಡಿದೆ. ನನ್ನ ನಾಲ್ಕನೇ ತಂಡ ನ್ಯೂಜಿಲೆಂಡ್ ಆಗಿರುತ್ತದೆ. ಅವರು 2015 ಮತ್ತು 2019ರಲ್ಲಿ ಫೈನಲ್‌ ಹಂತವನ್ನು ತಲುಪಿದ್ದಾರೆ," ಎಂದರು.

"ನೀವು ನ್ಯೂಜಿಲೆಂಡ್ ತಂಡದ ದಾಖಲೆಯನ್ನು ನೋಡಿದರೆ, ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ನ್ಯೂಜಿಲೆಂಡ್ ಯಾವಾಗಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅವರು ಸೆಮಿಫೈನಲ್‌ಗೆ ಹೋಗುವುದನ್ನು ನಾನು ನೋಡುತ್ತೇನೆ," ಎಂದು 2023ರ ಏಕದಿನ ವಿಶ್ವಕಪ್‌ ಜಾಗತಿಕ ರಾಯಭಾರಿ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟರು.

Story first published: Friday, October 6, 2023, 12:22 [IST]
Other articles published on Oct 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+