Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಶಕದ ನಂತರ ಸಚಿನ್ ನಿವೃತ್ತಿಯ ಬಗೆಗಿನ ರಹಸ್ಯವನ್ನು ಬಿಚ್ಚಿಟ್ಟ ಮಾಜಿ ಕೋಚ್

Sachin Wanted To Retire In 2007, Gary Kirsten Reveals Reason

ಕ್ರಿಕೆಟ್ ಲೋಕದಲ್ಲಿ ದೇವರು ಎಂದು ಕರೆಸಿಕೊಂಡ ಆಟಗಾರ ಸಚಿನ್ ತೆಂಡೂಲ್ಕರ್. ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಮತ್ತು ಅವರ ವ್ಯಕ್ತಿತ್ವ ಈ ವಿಶೇಷ ಸ್ಥಾನವನ್ನು ನೀಡಿದೆ. ಇಂತಾ ಸಚಿನ್ ತೆಂಡೂಲ್ಕರ್ 2013ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಈ ವಿದಾಯಕ್ಕೂ ಮುನ್ನ ಸಚಿನ್ 2011ರಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ತನ್ನ ಎರಡೂವರೆ ದಶಕಗಳ ಕ್ರಿಕೆಟ್‌ ಲೋಕದ ಅಭೂತಪೂರ್ವ ಸಾಧನೆಗೆ ವಿಶೇಷ ಗರಿಯನ್ನು ಧರಿಸಿಕೊಂಡರು. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕದ ಸಾಧನೆಯನ್ನೂ ಮಾಡಿದ್ದರು. ಆದರೆ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಸಚಿನ್ ವಿದಾಯದ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

2007ರಲ್ಲೇ ನಿವೃತ್ತಿಗೆ ಬಯಸಿದ್ದ ಸಚಿನ್

2007ರಲ್ಲೇ ನಿವೃತ್ತಿಗೆ ಬಯಸಿದ್ದ ಸಚಿನ್

ಕೆಲ ವಿಚಾರಗಳಿಂದಾ ಅಸಮಾಧಾನಗೊಂಡಿದ್ದ ಸಚಿನ್ ತೆಂಡೂಲ್ಕರ್ 2007ರಲ್ಲೇ ನಿವೃತ್ತಿಗೆ ಬಯಸಿದ್ದರು ಎಂಬುದನ್ನು ಗ್ಯಾರಿ ಕರ್ಸ್ಟನ್ ಹೇಳಿಕೊಂಡಿದ್ದಾರೆ. ಈ ವೇಲೆ ಸಚಿನ್ ಸ್ಪೂರ್ತಿಗಾಗಿ ಹಪಹಪಿಸುತ್ತಿದ್ದರು. ಆದರೆ ಅದು ಸಿಗದಿದ್ದಾಗ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದರು ಎಂದು ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ಕೋಚ್ ಗ್ಯಾರಿ ಕರ್ಸ್ಟನ್ ಹೇಳಿದ್ದಾರೆ.

ಬ್ಯಾಟಿಂಗ್‌ ಕ್ರಮಾಂಕದಿಂದ ಅಸಮಾಧಾನ

ಬ್ಯಾಟಿಂಗ್‌ ಕ್ರಮಾಂಕದಿಂದ ಅಸಮಾಧಾನ

'ಸಚಿನ್ ತೆಂಡೂಲ್ಕರ್ ಆ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದರು. ಇದು ಸಚಿನ್‌ಗೆ ಹಿತಕರವಾಗಿರಲಿಲ್ಲ. ಸಾಕಷ್ಟು ಪ್ರಯಾಸಪಡುತ್ತಿದ್ದರು. ತನ್ನ ಆಟವನ್ನು ಸಚಿನ್ ಆನಂದಿಸುತ್ತಿರಲಿಲ್ಲ. ಹೀಗಾಗಿ ನಿವೃತ್ತಿಯ ಬಗ್ಗೆ ಸಚಿನ್ ಚಿಂತಿಸಿದ್ದರು' ಎಂದು ಸಚಿನ್ ತೆಂಡೂಲ್ಕರ್ ನಿವೃತ್ತಿಯ ನಿರ್ಧಾರಕ್ಕೆ ಕಾರಣವನ್ನು ಹೇಳಿದ್ದಾರೆ ಗ್ಯಾರಿ ಕರ್ಸ್ಟನ್.

ಕೋಚ್ ಆಗಿ ಗ್ಯಾರಿ

ಕೋಚ್ ಆಗಿ ಗ್ಯಾರಿ

ಸಚಿನ್ ತೆಂಡೂಲ್ಕರ್ ಜೊತೆಗೆ ಉತ್ತಮ ಅನುಭವವನ್ನು ಹೊಂದಿದ್ದೇನೆ. ನಾನು ಅವರಿಗೆ ಹೊಸದಾಗಿ ಹೇಳಿರಲಿಲ್ಲ. ಅವರ ಆಟಕ್ಕೆ ಪೂರಕ ವಾತಾವರಣವನ್ನು ನೀಡಿದ್ದೆ. ಪ್ರತೊಯೊಬ್ಬರಿಗೂ ಅವರ ಆಟಕ್ಕೆ ಪೂರಕ ವಾತಾವರಣವನ್ನು ನೀಡಿದರೆ ಸಾಕು ಅತ್ಯುತ್ತಮ ಆಟ ಹೊರಬರುತ್ತದೆ. ಸಚಿನ್ ವಿಚಾರದಲ್ಲೂ ಅದೇ ಆಗಿತ್ತು ಎಂದು ಗ್ಯಾರಿ ಸ್ಮರಿಸಿಕೊಂಡಿದ್ದಾರೆ.

ಆಟೋಬಯೋಗ್ರಫಿಯಲ್ಲಿ ಉಲ್ಲೇಖ

ಆಟೋಬಯೋಗ್ರಫಿಯಲ್ಲಿ ಉಲ್ಲೇಖ

ಸಚಿನ್ ತೆಂಡೂಲ್ಕರ್ 2007ರಲ್ಲಿ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಚಿಂತಿಸಿದ್ದರ ಬಗ್ಗೆ ತಮ್ಮ ಆಟೋಬಯೋಗ್ರಫಿ 'ಪ್ಲೇಯಿಂಗ್ ಇಟ್ ಮೈ ವೇ'ಯಲ್ಲಿ ಸಚಿನ್ ಬರೆದುಕೊಂಡಿದ್ದರು. ಆ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ವೀವ್ ರಿಚರ್ಡ್ಸ್ ಜೊತೆ ಮಾತುಕತೆ ನಡೆಸಿದ್ದ ವಿಚಾರವನ್ನೂ ಸ್ಮರಿಸಿಕೊಂಡಿದ್ದರು. ಸಚಿನ್ ನಿವೃತ್ತಿಯ ನಿರ್ಧಾರ ಬದಲಾಗಲು ಗ್ಯಾರಿ ಕರ್ಸ್ಟನ್ ಕೋಚ್ ಆದ ಬಳಿಕ ಬದಲಾದ ವಾತಾವರಣವೂ ಕಾರಣವಾಯಿತು.

ಸಚಿನ್ ಭರ್ಜರಿ ಪ್ರದರ್ಶನ

ಸಚಿನ್ ಭರ್ಜರಿ ಪ್ರದರ್ಶನ

ಸಚಿನ್ ತೆಂಡೂಲ್ಕರ್ ನಿವೃತ್ತಿ ನಿರ್ಧಾರ ಬದಲಾದ ಬಳಿಕ ತಮ್ಮ ಅದ್ಭುತ ಒ್ರದರ್ಶನವನ್ನು ಮುಂದವರಿಸಿದ್ದರು. ಗ್ಯಾರಿ ಕರ್ಸ್ಟನ್ ತಂಡದ ಕೋಚ್ ಆದ ಬಳಿಕ ಸಚಿನ್ ಮುಂದಿನ ಆರು ವರ್ಷದಲ್ಲಿ 24 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಜೊತೆಗೆ 2011ರ ಭಾರತ ವಿಶ್ವಕಪ್‌ ವಿಜೇತ ಟೂರ್ನಿಯಲ್ಲಿ ಎರಡನೇ ಸರ್ವಾಧಿಕ ರನ್ ಗಳಿಸಿದ ಸಾಧನೆಯನ್ನೂ ಮಾಡಿದರು.

Story first published: Thursday, June 18, 2020, 9:47 [IST]
Other articles published on Jun 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+