Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Sai Sudarshan: ರಾಜಸ್ಥಾನ ವಿರುದ್ಧ ಅಬ್ಬರಿಸಿದ ಸುದರ್ಶನ್ ಇತಿಹಾಸ

ಭರ್ಜರಿ ಫಾರ್ಮ್‌ನಲ್ಲಿರುವ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಆರಂಭಿಕ ಆಟಗಾರ ತಮ್ಮ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಸಾಯಿ ಸುದರ್ಶನ್‌ ಮತ್ತೊಂದು ಕ್ಲಾಸಿಕ್ ಇನಿಂಗ್ಸ್ ಕಟ್ಟಿದರು. ಇವರ ಉತ್ತಮ ಆಟದ ಪ್ರಯತ್ನದಿಂದ ಗುಜರಾತ್ ಟೈಟನ್ಸ್‌ ಸವಾಲಿನ ಮೊತ್ತ ಕಲೆ ಹಾಕಲು ಕಾರಣವಾಯಿತು. ಈ ಇನಿಂಗ್ಸ್ ಬಲದಿಂದ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಇತಿಹಾಸ ಬರೆದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸಾಯಿ ಸುದರ್ಶನ್ ಅಬ್ಬರಿಸಿದರು. ಇವರು ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬೌಲರ್‌ಗಳನ್ನು ದಂಡಿಸಿದರು. ಕೆಟ್ಟ ಎಸೆತವನ್ನು ದಂಡಿಸುತ್ತಾ ಸಾಗಿದ ಎಡಗೈ ಬ್ಯಾಟರ್‌ ಸುದರ್ಶನ್‌, ಈ ಲೀಗ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿದರು. ಇವರು ರಾಜಸ್ಥಾನ ವಿರುದ್ಧ ಪಂದ್ಯದಲ್ಲಿ 53 ಎಸೆತವನ್ನು ಎದುರಿಸಿ 82 ರನ್‌ಗಳಿಗೆ ಔಟ್ ಆದರು. ಇವರ ಈ ಅಮೋಘ ಇನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ ಸಹ ಸೇರಿವೆ.

Sai Sudarshan Creates IPL History with Five Consecutive Fifties at Home

ನಾಯಕ ಶುಭಮನ್‌ ಗಿಲ್‌ ಔಟ್ ಆಗುತ್ತಿದ್ದಂತೆ ಇನಿಂಗ್ಸ್‌ ಭಾರ ಹೊತ್ತುಕೊಂಡ ಸಾಯಿ ಸುದರ್ಶನ್‌ ಆರ್ಭಟಿಸಿದರು. ಇವರ ಉತ್ತಮ ಆಟದ ನೆರವಿನಿಂದ ಗುಜರಾತ್‌ ಉತ್ತಮ ಮೊತ್ತ ಕಲೆ ಹಾಕಿತು. ಈ ಮೂಲಕ ಸಾಯಿ ಸುದರ್ಶನ್ ಒಂದೇ ಅಂಗಳದಲ್ಲಿ ಸತತ ಐದು ಅರ್ಧಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದರು. ಇದಕ್ಕಿಂತ ಮೊದಲು ಈ ಸಾಧನೆಯನ್ನು ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಮಾಡಿದ್ದರು.

Sai Sudarshan Creates IPL History with Five Consecutive Fifties at Home

ಸಾಯಿ ಸುದರ್ಶನ್‌ ಇತಿಹಾಸ

2024 ರಲ್ಲಿ ಅಹಮದಾಬಾದ್‌ನ ಇದೇ ಕ್ರೀಡಾಂಗಣದಲ್ಲಿ, ಸಾಯಿ ಸುದರ್ಶನ್ 50 ಕ್ಕೂ ಹೆಚ್ಚು ರನ್‌ಗಳ ಎರಡು ಬಾರಿಸಿ ಬಾರಿಸಿದ್ದರು. 18ನೇ ಆವೃತ್ತಿಯ ಐಪಿಎಲ್‌ನಲ್ಲಿಆಡಿದ ಮೂರು ತವರಿನ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಮೊದಲು ಈ ಸಾಧನೆಯನ್ನು 2018 ರಿಂದ 2019 ರವರೆಗೆ ಆರ್‌ಸಿಬಿ ಪರ ಆಡುವಾಗ ಎಬಿ ಡಿವಿಲಿಯರ್ಸ್ ಕೂಡ ಇದೇ ಸಾಧನೆ ಮಾಡಿದ್ದಾರೆ.

ಸಾಯಿ ಸುದರ್ಶನ್‌ ಅವರು ಆಡಿದ 5 ಪಂದ್ಯಗಳಲ್ಲಿ 273 ರನ್‌ ಸಿಡಿಸಿದ್ದಾರೆ. ಇವರು ಈ ವೇಳೆ 24 ಬೌಂಡರಿ, 12 ಸಿಕ್ಸರ್ ಸೇರಿವೆ. ಈ ಮೂಲಕ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Story first published: Wednesday, April 9, 2025, 22:39 [IST]
Other articles published on Apr 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+