Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

3ನೇ ದಿನ ಮೈದಾನಕ್ಕೆ ಇಳಿಯದ ಭಾರತದ ಸ್ಟಾರ್ ಪ್ಲೇಯರ್: ಅಭಿಮಾನಿಗಳಿಗೆ ಟೆನ್ಷನ್

ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಣ ಎರಡನೇ ಟೆಸ್ಟ್‌ ಪಂದ್ಯ ನವದೆಹಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲೂ ಗೆಲುವ ದಾಖಲಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಈಗಾಗಲೇ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ, ಎರಡನೇ ಟೆಸ್ಟ್‌ ಪಂದ್ಯ ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತದ ಪರ ಶುಭಮನ್‌ ಗಿಲ್, ಯಶಸ್ವಿ ಜೈಸ್ವಾಲ್‌ ಶತಕ ಬಾರಿಸಿ ಮಿಂಚಿದರೆ, ಬೌಲಿಂಗ್‌ನಲ್ಲಿ ಸ್ಪಿನ್ ಬೌಲರ್‌ಗಳು ಕಮಾಲ್ ಪ್ರದರ್ಶನ ನೀಡಿದರು. ಇದೇ ವೇಳೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಿಂದ ಅಭಿಮಾನಿಗಳಿಗೆ ಬೇಸರ ತರಿಸುವ ಸುದ್ದಿಯೊಂದು ಬಂದಿದೆ.

ಟೀಮ್ ಇಂಡಿಯಾ ಮೂರನೇ ದಿನದಾಟಕ್ಕೆ ಮೈದಾನಕ್ಕೆ ಇಳಿದಾಗ ಎಲ್ಲ ಸ್ಟಾರ್ ಆಟಗಾರರು ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ ಆ ಒಬ್ಬ ಪ್ಲೇಯರ್ ಮಾತ್ರ ಕಾಣಿಸಿಕೊಳ್ಳಲಿಲ್ಲ. ಇವರು ಮೈದಾನಕ್ಕೆ ಇಳಿಯದೇ ಇರುವುದು ಅಭಿಮಾನಿಗಳಲ್ಲಿ ಚಿಂತೆಯನ್ನು ಮೂಡಿಸಿತು. ಅವರೇ ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಆಧಾರವಾದ ಸಾಯಿ ಸುದರ್ಶನ್‌.

Sai Sudharsan Injured During India vs West Indies 2nd Test Misses Fielding on Day 3

ಫೀಲ್ಡ್‌ಗೆ ಇಳಿಯದ ಸಾಯಿ

ಸಾಯಿ ಸುದರ್ಶನ್‌ ಟೀಮ್ ಇಂಡಿಯಾ ಮೂರನೇ ದಿನದಾಟದಲ್ಲಿ ಮೈದಾನಕ್ಕೆ ಇಳಿದಾಗ ಭೋಜನ ವಿರಾಮದ ವರೆಗೂ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಸಾಯಿ ಸುದರ್ಶನ್‌ ಶಾರ್ಟ್‌ ಲೆಗ್‌ನಲ್ಲಿ ಫೀಲ್ಡ್ ಮಾಡುವಾಗ ಹಿಡಿದ ಕ್ಯಾಚ್. ಸ್ಪಿನ್ ಬೌಲರ್‌ ರವೀಂದ್ರ ಜಡೇಜಾ ಅವರು ಎಸೆದ ಲೆಂತ್ ಬೌಲ್‌ನ್ನು ಜಾನ್ ಕ್ಯಾಂಪ್‌ಬೆಲ್ ಬಿಗ್‌ ಹಿಟ್ ಬಾರಿಸಲು ಮುಂದಾದರು. ಕ್ಯಾಂಪ್‌ಬೆಲ್‌ ಬಾರಿಸಿದ ಪ್ರಬಲ ಸ್ಟ್ರೋಕ್ ನೇರವಾಗಿ ಸುದರ್ಶನ್‌ ಕೈಗೆ ಬಡಿಯಿತು. ಆ ಬಳಿಕ ಚೆಂಡು ಎದೆಗೆ ಬಡಿಯಿತು. ಅಷ್ಟಾದ್ರೂ ಸಾಯಿ ಕ್ಯಾಚ್ ಬಿಡಲಿಲ್ಲ.

ಸಾಯಿ ಸುದರ್ಶನ್‌ ಕ್ಯಾಂಪ್‌ಬೆಲ್‌ ಅವರ ಕ್ಯಾಚ್ ಪಡೆಯುತ್ತಿದ್ದಂತೆ ಒದ್ದಾಡಿದದರು. ಇವರು ಸಂಭ್ರಮಾಚರಣೆಯಲ್ಲೂ ಹೆಚ್ಚಾಗಿ ಭಾಗವಹಿಸಲಿಲ್ಲ. ಇವರು ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಂದು ಫೀಲ್ಡ್ ಮಾಡಲಿಲ್ಲ. ಕ್ರಿಕ್ ಬಜ್ ವರದಿಯ ಪ್ರಕಾರ ಸಾಯಿ ಅವರ ಗಾಯ ಗಂಭೀರವಾಗಿಲ್ಲ. ಇವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಇವರು ಮೊದಲ ಇನಿಂಗ್ಸ್‌ನಲ್ಲಿ 165 ಎಸೆತಗಳಲ್ಲಿ 12 ಬೌಂಡರಿಗಳನ್ನು ಒಳಗೊಂಡಂತೆ 87 ರನ್ ಗಳಿಸಿದರು. ಈ ಮೂಲಕ ಮೂರನೇ ಸ್ಥಾನ ತುಂಬವ ಕ್ಷಮತೆ ತಮ್ಮಲ್ಲಿ ಇದೆ ಎಂಬುದನ್ನು ಸಾರಿ ಹೇಳಿದರು.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ ಪರ ಬ್ಯಾಟ್ ಮಾಡಿದ್ದ ಸಾಯಿ ಸುದರ್ಶನ್‌ ಎಲ್ಲರ ಗಮನ ಸೆಳೆದಿದ್ದರು. ಇವರ ಸ್ಥಿರ ಪ್ರದರ್ಶನಕ್ಕೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಲಾಯಿತು. ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಇವರು ಈಗಾಗಲೇ ಭಾರತದ ಪರ 3 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 140 ರನ್‌ ಸಿಡಿಸಿದ್ದರು. ಹೀಗಾಗಿ ಇವರಿಗೆ ತವರಿನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್ ವಿರುದ್ಧ ಟೆಸ್ಟ್‌ ಸರಣಿಗೆ ಅವಕಾಶ ನೀಡಲಾಯಿತು.

Story first published: Sunday, October 12, 2025, 12:09 [IST]
Other articles published on Oct 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+