Gujarat Titans: ಆರ್‌ಸಿಬಿ ವಿರುದ್ಧ ಶತಕ ಬಾರಿಸಿದ ಸಾಯಿ ಸುದರ್ಶನ್: ಗಿಲ್ ದಾಖಲೆ ಉಡೀಸ್
ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ಭರವಸೆಯ ಆಟಗಾರ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಭರ್ಜರಿ ಲಯಕ್ಕೆ ಮರಳಿದ್ದಾರೆ. ಲೀಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಎಡಗೈ ಆಟಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಆಡಿದರು. ಪಿಚ್ ಮರ್ಮ್ ಅರಿತು ಬ್ಯಾಟ್ ಮಾಡಿದ ಸಾಯಿ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ ಸಾಧನೆ ತಮ್ಮದಾಗಿಸಿಕೊಂಡರು.
19ನೇ ಆವೃತ್ತಿಯ ಐಪಿಎಲ್‌ನ 34ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಆರಂಭ ಭರ್ಜರಿಯಾಗಿತ್ತು. ಪವರ್ ಪ್ಲೇನಲ್ಲಿ ಹೆಚ್ಚಿನ ಪಂದ್ಯಗಳನ್ನು ತಾವೇ ಆಡಿದ ಸಾಯಿ ಸುದರ್ಶನ್ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಈ ವೇಳೆ ಸಾಯಿ ಸುದರ್ಶನ್ 8ನೇ ಓವರ್‌ನ 2ನೇ ಎಸೆತದಲ್ಲಿ ಸ್ಕೂಪ್ ಶಾಟ್ ಬಾರಿಸಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ತಮ್ಮದಾಗಿಸಿಕೊಂಡರು. ಸಾಯಿ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

ಈ ಅಮೋಘ ಇನಿಂಗ್ಸ್ ಮೂಲಕ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಮತ್ತೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದರು. ಇವರು ಐಪಿಎಲ್‌ನ 47ನೇ ಇನಿಂಗ್ಸ್‌ನಲ್ಲಿ 2000ಕ್ಕೂ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಅಲ್ಲದೆ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 2000 ರನ್‌ಗಳ ಮಾರ್ಕ್‌ನ್ನು 48 ಇನಿಂಗ್ಸ್‌ಗಳಲ್ಲಿ ಮುಟ್ಟಿದ್ದರು.
ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಮೂರು ಶತಕ ಬಾರಿಸಿದ ದಾಖಲೆ ಬರೆದರು. ಅಲ್ಲದೆ ಈ ಐಪಿಎಲ್‌ನಲ್ಲಿ ಶತಕ ಬಾರಿಸಿದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲ ಎಸ್‌ಆರ್‌ಎಚ್ ತಂಡದ ಅಭಿಷೇಕ್ ಶರ್ಮಾ, ಮುಂಬೈನ ತಿಲಕ್ ವರ್ಮಾ, ಸಿಎಸ್‌ಕೆ ತಂಡದ ಸಂಜು ಸ್ಯಾಮ್ಸನ್ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ವೇಗವಾಗಿ 2000 ರನ್ ಬಾರಿಸಿದ ಬ್ಯಾಟರ್ಸ್
ಸಾಯಿ ಸುದರ್ಶನ್, 47 ಇನಿಂಗ್ಸ್
ಕ್ರಿಸ್ ಗೇಲ್, 48 ಇನಿಂಗ್ಸ್
ಶಾನ್ ಮಾರ್ಷ್, 52 ಇನಿಂಗ್ಸ್
ರುತುರಾಜ್ ಗಾಯಕ್ವಾಡ್, 57 ಇನಿಂಗ್ಸ್
ಕೆಎಲ್ ರಾಹುಲ್, 60 ಇನಿಂಗ್ಸ್
ಸಾಯಿ ಸುದರ್ಶನ್ 57 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ಸಹಾಯದಿಂದ 100 ರನ್ ಬಾರಿಸಿ ಅಬ್ಬರಿಸಿದರು. ಇವರು ತಮ್ಮ ಶತಕ ಮಾಡಿದ ಬಳಿಕ ಆರ್‌ಸಿಬಿ ತಂಡದ ವೇಗದ ಜೋಶ್ ಹ್ಯಾಜಲ್‌ವುಡ್ ಅವರ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿ ಪೇವಿಲಿಯನ್ ಸೇರಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications