Saim Ayub: ಪಾಕಿಸ್ತಾನ ಪರ ಭರವಸೆ ಮೂಡಿಸಿದ ಯುವ ಆಟಗಾರ
ಪಾಕಿಸ್ತಾನ ಕ್ರಿಕೆಟ್ ತಂಡ ಈ ವರ್ಷ ಡಿಸೆಂಬರ್ 2023 ರಲ್ಲಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿತ್ತು. ಸರಣಿಯ ಕೊನೆಯ ಪಂದ್ಯ ಸಿಡ್ನಿಯಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 21 ವರ್ಷದ ಯುವಕನಿಗೆ ಸ್ಥಾನ ನೀಡಿತ್ತು. ಆತನ ಹೆಸರು ಸ್ಯಾಮ್ ಅಯೂಬ್.
ಮುಖದಲ್ಲಿ ಮುಗ್ಧತೆ ಮತ್ತು ಮಧುರವಾದ ಧ್ವನಿ ಹೊಂದಿರುವ ಈ ಹುಡುಗ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ, ಎಲ್ಲರೂ ಆತನತ್ತಲೇ ದೃಷ್ಟಿ ಹರಿಸಬೇಕು ಎನ್ನುವಷ್ಟು ಚೆಂದ ಬ್ಯಾಟಿಂಗ್. ಸಿಕ್ಕ ಅವಕಾಶದಲ್ಲಿ ಮೊದಲ ಟೆಸ್ಟ್‌ನಲ್ಲಿ ಸ್ಯಾಮ್ ಅಯೂಬ್‌ಗೆ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ರನ್ ಕಲೆ ಹಾಕುವಲ್ಲಿ ವಿಫಲವಾಗಿದ್ದು ಹೇಗೆ ತಮಗೆ ಪಾಠ ಕಲಿಸಿದೆ ಎಂದು ಅಯೂಬ್ ಹೇಳಿದ್ದಾರೆ.

ಸ್ಯಾಮ್ ಅಯೂಬ್ ಬಾಂಗ್ಲಾದೇಶದ ಢಾಕಾದಲ್ಲಿದ್ದಾರೆ. ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ 2024 ರಲ್ಲಿ ಡುರಾಂಟೊ ಢಾಕಾ ಪರ ಆಡುತ್ತಿದ್ದಾರೆ. ಅಯೂಬ್ ಇತ್ತೀಚೆಗೆ ಕ್ರಿಕ್‌ಇನ್ಫೋಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಅವರು ತಮ್ಮ ವೃತ್ತಿಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸೋಲಿನಿಂದ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಅಯೂಬ್ ಹೇಳಿದ್ದಾರೆ. ನೀವು ಯಶಸ್ಸಿನಿಂದ ಕಲಿಯುವುದಕ್ಕಿಂತ ಸೋಲಿನಿಂದ ಹೆಚ್ಚು ಕಲಿಯುತ್ತೀರಿ ಎಂದು ಟಾಪ್ ಕ್ರಿಕೆಟಿಗರು ನನಗೆ ಹೇಳಿದ್ದಾರೆ. ಆರಂಭಿಕ ಹಂತದಲ್ಲಿ ವಿಫಲವಾಗಿರುವುದಕ್ಕೆ ನನಗೆ ಸಂತೋಷವಿದೆ. ಯಾವ ಮಟ್ಟದ ಕಠಿಣ ಪರಿಶ್ರಮ ಮತ್ತು ತಯಾರಿ ಅಗತ್ಯವಿದೆ ಎಂದು ನನಗೆ ಈಗ ತಿಳಿದಿದೆ. ನಾನು ಮೊದಲೇ ಯಶಸ್ವಿಯಾಗಿದ್ದರೆ, ನನ್ನ ನ್ಯೂನತೆಗಳ ಮೇಲೆ ಕೆಲಸ ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ.

ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸ್ಯಾಮ್ ಅಯೂಬ್ ಗೆ ಪಾಕಿಸ್ತಾನ ತಂಡದಲ್ಲಿ ಅವಕಾಶ ನೀಡಿತ್ತು. ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು ಶೂನ್ಯಕ್ಕೆ ಔಟಾದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಯೂಬ್ 53 ಎಸೆತಗಳನ್ನು ಎದುರಿಸಿ 33 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು.
ಪ್ರಥಮ ದರ್ಜೆಯಲ್ಲಿ ಸಾಧನೆ
ಸ್ಯಾಮ್ ಅಯೂಬ್ ಪಾಕಿಸ್ತಾನದ ಫ್ಯೂಚರ್ ಸೂಪರ್ ಸ್ಟಾರ್ ಆಗಬಹುದು. ದೇಶೀಯ ಕ್ರಿಕೆಟ್‌ನಲ್ಲಿ ಅವರ ದಾಖಲೆಯನ್ನು ನೋಡಿದರೆ, ಅದು ಅತ್ಯುತ್ತಮವಾಗಿದೆ. ಇದುವರೆಗೆ ಆಡಿರುವ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 1102 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 3 ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. ದ್ವಿಶತಕ ಸಹ ಬಾರಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಅಯೂಬ್ ಒಂದು ಪಂದ್ಯದಲ್ಲಿ 203 ರನ್ ಗಳಿಸಿದ್ದರು. ಅವರು 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications