For Quick Alerts
ALLOW NOTIFICATIONS  
For Daily Alerts
 

Saim Ayub: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕು ಮುನ್ನವೇ ಪಾಕ್‌ಗೆ ಪೆಟ್ಟು: ಸ್ಟಾರ್ ಬ್ಯಾಟರ್‍‌ ಔಟ್?

ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಆಶ್ರಯದಲ್ಲಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. ಈ ಟೂರ್ನಿಗೆ ಇನ್ನು ಹಲವು ತಂಡಗಳು ತಮ್ಮ ತಂಡವನ್ನು ಪ್ರಕಟಿಸಬೇಕಿದೆ. ಚಾಂಪಿಯನ್ಸ್‌ ಟ್ರೋಫಿಗೆ ತಂಡವನ್ನು ಪ್ರಕಟಿಸಲು ಇದೇ 12 ಕೊನೆಯ ದಿನವಾಗಿದೆ. ಟೀಮ್ ಇಂಡಿಯಾ ಸಹ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸಲಿದೆ. ಆದರೆ ಭಾರತದ ಪಂದ್ಯಗಳು ಮಾತ್ರ ತಟಸ್ಥ ಸ್ಥಳದಲ್ಲಿ ನಡೆಯಲಿದೆ. ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯವನ್ನು ನೀಡಲಿದೆ.

ಇನ್ನು ಬಹು ವರ್ಷಗಳ ಪಾಕಿಸ್ತಾನಕ್ಕೆ ಐಸಿಸಿ ಟೂರ್ನಿಯ ಆಯೋಜನೆಯ ಹಕ್ಕು ಸಿಕ್ಕಿದೆ.ಇದನ್ನು ಸರಿಯಾಗಿ ಬಳಸಿಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಪಾಕ್‌ ತಂಡದ್ದಾಗಿದೆ. ಆದರೆ ಪಾಕ್ ತಂಡಕ್ಕೆ ಚಾಂಪಿಯನ್ಸ್‌ ಟ್ರೋಫಿಯ ಟೂರ್ನಿ ಆರಂಭವಾಗವುದಕ್ಕೂ ಮುನ್ನವೇ ಪೆಟ್ಟು ಬಿದ್ದಿದೆ. ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟರ್ ಒಬ್ಬರು ಚಾಂಪಿಯನ್ಸ್ ಟ್ರೋಫಿಯಿಂದ ಮಿಸ್ ಆಗುವ ಸಾಧ್ಯತೆ ಇದೆ. ಆ ಆಟಗಾರ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

saim ayub s Injury Threatens His Participation in Champions Trophy 2025

ಫೀಲ್ಡ್ ಮಾಡುವಾಗ ಗಾಯ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಸ್ಯಾಮ್ ಅಯೂಬ್ ಗಾಯಗೊಂಡಿದ್ದರು. ಅವರು ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಅವರಿಗೆ ಕಾಲು ಊರಲು ಸಾಧ್ಯವೇ ಆಗಲಿಲ್ಲ. ಇವರು ಚಾಂಪಿಯನ್ಸ್ ಟ್ರೋಫಿಯ ವೇಳೆಗೆ ಫಿಟ್ ಆಗುತ್ತಾರಾ ಎಂಬ ಪ್ರಶ್ನೆ ನಿಶ್ಚಿತವಾಗಿ ಪಿಸಿಬಿಗೆ ಕಾಡುತ್ತಿದೆ. ಆದರೆ ಈಗ ಬರುತ್ತಿರುವ ವರದಿಯ ಪ್ರಕಾರ ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್‌ ಟ್ರೋಫಿಯ ಟೂರ್ನಿಯಲ್ಲಿ ಸ್ಯಾಮ್ ಅಯೂಬ್ ಭಾಗವಹಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಸ್ಯಾಮ್ ಅಯೂಬ್ ಅವರ ಪಾದಕ್ಕೆ ಆಗಿರುವ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸ್ಯಾಮ್‌ ಮೂಳೆ ತಜ್ಞರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯರು ಸ್ಯಾಮ್‌ಗೆ ಕ್ರಿಕೆಟ್‌ ಆಡಲು ಆತುರ ಪಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಇವರು ಆಡಲು ಅಂಗಳಕ್ಕೆ ಇಳಿದಿದ್ದೇ ಆದಲ್ಲಿ ಇವರ ಗಾಯ ಮತ್ತಷ್ಟು ಹದಗೆಡಬಹುದು. ಇವರು ತಂಡಕ್ಕೆ ಸೇರಿಕೊಳ್ಳುವ ಬಗ್ಗೆ ಪಿಸಿಬಿ ಆಯ್ಕೆ ಸಮಿತಿ ತನ್ನ ಅಂತಿಮ ನಿರ್ಧಾರವನ್ನು ಕೈ ಗೊಳ್ಳಲಿದೆ.

saim ayub s Injury Threatens His Participation in Champions Trophy 2025

ಸ್ಯಾಮ್‌ ಸ್ಥಾನ ತುಂಬುವುದು ಯಾರು?

ಸ್ಯಾಮ್‌ ಅಯೂಬ್‌ ಒಬ್ಬ ಉತ್ತಮ ಬ್ಯಾಟರ್. ಇವರು ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ವೃತ್ತಿ ಜೀವನವನ್ನು ಪಣಕ್ಕೆ ಇಡಲು ಬಯಸುವುದಿಲ್ಲ. ಒಂದು ವೇಳೆ ಇವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದಲ್ಲಿ ಫಖಾರ್ ಜಮಾನ್‌ ತಂಡ ಸೇರಬಹುದು. ಬಹು ದಿನಗಳ ಬಳಿಕ ಫಖಾರ್ ಪಾಕ್‌ ಪರ ಕಣಕ್ಕೆ ಇಳಿಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರ ಬ್ಯಾಟ್‌ ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿತ್ತು. ಹೀಗಾಗಿ ಇವರಿಗೆ ವಿಶ್ರಾಂತಿ ನೀಡಲಾಗಿತ್ತು.

Story first published: Friday, January 10, 2025, 23:52 [IST]
Other articles published on Jan 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+