Ind vs Pak : ಆತ ಬೇಗನೆ ಔಟಾದರೆ ಕೊಹ್ಲಿ ಮೇಲೆ ಒತ್ತಡ ಬೀಳಲಿದೆ: ಭಾರತ ತಂಡಕ್ಕೆ ಎಚ್ಚರಿಕೆ ಕೊಟ್ಟ ಪಾಕ್ ಮಾಜಿ ಕ್ರಿಕೆಟಿಗ!
ಏಷ್ಯಾಕಪ್ 2023ರ ಪಂದ್ಯಾವಳಿ ಆರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 30ರಂದು ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿವೆ.
ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2ರಂದು ನಡೆಯಲಿದೆ. ಶ್ರೀಲಂಕಾದ ಪಲ್ಲೆಕೆಲೆಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಪಾಕ್‌ನ ವೇಗಿಗಳನ್ನು ಎದುರಿಸಲು ಭಾರತ ಈಗಾಗಲೇ ತಯಾರಿ ನಡೆಸುತ್ತಿದೆ.

ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಭಾರತ ತಂಡಕ್ಕೆ ಎಚ್ಚರಿಕೆನ್ನು ನೀಡಿದ್ದಾರೆ. ಪಾಕಿಸ್ತಾನ ವೇಗದ ಬೌಲರ್ ಶಾಹೀನ್ ಅಫ್ರಿದಿಯನ್ನು ಎದುರಿಸುವುದು ಭಾರತದ ಬ್ಯಾಟರ್ ಗಳಿಗೆ ಸವಾಲಾಗಲಿದೆ ಎಂದು ಹೇಳಿದ್ದಾರೆ. ಅದರಲ್ಲೂ ಆರಂಭಿಕ ಓವರ್ ಗಳಲ್ಲಿ ಚೆಂಡು ಸ್ವಿಂಗ್ ಆಗುವಾದ ಶಾಹೀನ್ ಅಫ್ರಿದಿ ಮಾರಕವಾಗಬಲ್ಲರು ಎಂದು ಬಟ್ ಹೇಳಿದ್ದಾರೆ.
ರೋಹಿತ್ ಶರ್ಮಾ ಎಚ್ಚರಿಕೆಯಿಂದ ಇರಬೇಕು!
ಸಲ್ಮಾನ್ ಬಟ್ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿ, "ಶಾಹೀನ್ ಹೊಸ ಚೆಂಡನ್ನು ಸ್ವಿಂಗ್ ಮಾಡುತ್ತಾರೆ ಮತ್ತು ಎರಡು ಹೊಸ ಚೆಂಡುಗಳು ಇರುತ್ತವೆ. ರೋಹಿತ್ ಶಾಹೀನ್ ಅವರನ್ನು ಎದುರಿಸುವಾಗ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ರೋಹಿತ್ ಶರ್ಮಾ ಬೇಗನೆ ಔಟಾದರೆ ವಿರಾಟ್ ಕೊಹ್ಲಿ ಮೇಲೆ ಒತ್ತಡ ಬೀಳುತ್ತದೆ. ಈ ಇಬ್ಬರು ಪಾಕಿಸ್ತಾನದ ಬೌಲರ್‌ಗಳಿಗೆ ಪ್ರಮುಖ ವಿಕೆಟ್‌ಗಳು." ಎಂದು ಹೇಳಿದ್ದಾರೆ.
"ನೀವು ಎಷ್ಟೇ ಐಪಿಎಲ್ ಆಡಿದರೂ, ಭಾರತ-ಪಾಕಿಸ್ತಾನ ಸರಣಿಯ ಒತ್ತಡವು ವಿಭಿನ್ನವಾಗಿರುತ್ತದೆ. ಆದ್ದರಿಂದ ಅವರ ಅನುಭವವಿಲ್ಲದ ಆಟಗಾರರಿಗೆ ಅದು ಅಷ್ಟು ಸುಲಭವಲ್ಲ. ಆದರೆ ನೀವು ಭಾರತ ಪಾಕಿಸ್ತಾನ ನಡುವಿನ ದೊಡ್ಡ ಆಟದಲ್ಲಿ ಪ್ರದರ್ಶನ ನೀಡಿದರೆ ಅತ್ಯುತ್ತಮ ಹೆಸರು ಮಾಡಬಹುದು" ಎಂದು ಹೇಳಿದರು.
ಪಾಕಿಸ್ತಾನದ ಬ್ಯಾಟಿಂಗ್‌ಗೆ ಬಗ್ಗೆ ಬಟ್ ಹೇಳಿದ್ದೇನು?
ಭಾರತಕ್ಕಿಂತ ಪಾಕಿಸ್ತಾನದ ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡಬಲ್ಲರು ಎಂದು ಸಲ್ಮಾನ್ ಬಟ್ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಸರಣಿ ಗೆಲುವಿಗೆ ನಸೀಮ್ ಶಾ ಮತ್ತು ಇತರರು ಹೇಗೆ ಕೊಡುಗೆ ನೀಡಿದ್ದಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಭಾರತ ತಂಡದಲ್ಲಿ ಆ ರೀತಿ ಬ್ಯಾಟಿಂಗ್ ಡೆಪ್ತ್ ಹೊಂದಿಲ್ಲ ಎಂದು ಹೇಳಿದರು.
"ಪಾಕಿಸ್ತಾನವು ಭಾರತಕ್ಕಿಂತ ಉತ್ತಮ ಬ್ಯಾಟಿಂಗ್ ಆಳವನ್ನು ಹೊಂದಿದೆ. ಶಾಹೀನ್ ಮತ್ತು ನಸೀಮ್ ಅವರಂತಹವರು ಸಹ ಒಂದೆರಡು ಅತ್ಯುತ್ತಮ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಬಹುಶಃ ಬುಮ್ರಾ ಅವರನ್ನು ಹೊರತುಪಡಿಸಿ ಭಾರತೀಯ ವೇಗದ ಬೌಲರ್‌ಗಳಲ್ಲಿ ಬ್ಯಾಟಿಂಗ್ ಮಾಡುವವರು ಇಲ್ಲ. ಆದ್ದರಿಂದ ಪಾಕಿಸ್ತಾನ ತಂಡಕ್ಕೆ ಅನುಕೂಲವಿದೆ." ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications