ಶ್ರೀಲಂಕಾ ಪ್ರೀಮಿಯರ್ ಲೀಗ್: 'ಕ್ಯಾಂಡಿ' ಫ್ರಾಂಚೈಸಿ ಖರೀದಿಸಿದ ನಟ ಸಲ್ಮಾನ್ ಖಾನ್ ಕುಟುಂಬ

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಕುಟುಂಬವು, ಶ್ರೀಲಂಕಾ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿಗಳಲ್ಲಿ ಒಂದಾದ 'ಕ್ಯಾಂಡಿ ಟಸ್ಕರ್ಸ್' ಅನ್ನು ಖರೀದಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೈಲ್ ಮತ್ತು ತಂದೆ, ಪ್ರಸಿದ್ಧ ಚಿತ್ರಕಥೆಗಾರ ಸಲೀಮ್ ಖಾನ್ ಒಕ್ಕೂಟದ ಭಾಗವಾಗಿ ಸೊಹೈಲ್ ಖಾನ್ ಅಂತರರಾಷ್ಟ್ರೀಯ ಹೂಡಿಕೆ ಮಾಡಿದ್ದಾರೆ. ಮಂಗಳವಾರ ಖಾನ್ ಕುಟುಂಬವು ಈ ಕುರಿತು ಮಾಹಿತಿಯನ್ನು ದೃಢಪಡಿಸಿದೆ.
ನವೆಂಬರ್ 21ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಗೂ ಮುನ್ನ ಕಳೆದ ಎರಡು ದಿನಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಕ್ಯಾಂಡಿ ಟಸ್ಕರ್ಸ್ ತಂಡ ಕ್ರಿಸ್ ಗೇಲ್ ಮತ್ತು ಲಿಯಾಮ್ ಪ್ಲಂಕೆಟ್ ಅವರ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ತಂಡಕ್ಕೆ ತಿಲಕರತ್ನೆ ದಿಲ್ಶನ್ ಕೋಚ್ ಆಗಿರಲಿದ್ದಾರೆ.
ಶ್ರೀಲಂಕಾ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್, ಮಾಜಿ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವೆಸ್ಟ್ ಇಂಡೀಸ್ ಆಲ್ ರೌಂಡರ್, ಸುಮಾರು 300 ಟಿ20 ಪಂದ್ಯಗಳನ್ನಾಡಿರುವ ಆ್ಯಂಡ್ರೆ ರಸೆಲ್ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕೊಲಂಬೊ ಕಿಂಗ್ಸ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications