ಐಪಿಎಲ್‌ನಿಂದ ನನ್ನ ಆಟ ಸುಧಾರಿಸಿದೆ ಮತ್ತೆ ಐಪಿಎಲ್ ಆಡುತ್ತೇನೆ ಎಂದ ಫೈನಲ್ ಪಂದ್ಯದ ಹೀರೋ

ಟಿ20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಜಯ ಸಾಧಿಸುವ ಮೂಲಕ, ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇಂಗ್ಲೆಂಡ್‌ನ ಬೌಲರ್ ಸ್ಯಾಮ್ ಕರನ್ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ 12 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ, ಪಾಕಿಸ್ತಾನವನ್ನು 137 ರನ್‌ಗಳಿಗೆ ನಿಯಂತ್ರಿಸಲು ಸಹಾಯ ಮಾಡಿದರು.
ಅವರು ಉತ್ತಮ ಪ್ರದರ್ಶನಕ್ಕೆ, ಅವರಿಗೆ ಪಂದ್ಯದ ಆಟಗಾರ ಪ್ರಶಸ್ತಿ ದೊರೆಯಿತು. ಮಾತ್ರವಲ್ಲದೆ ಟೂರ್ನಿಯ ಆಟಗಾರ ಪ್ರಶಸ್ತಿಯನ್ನು ಸ್ಯಾಮ್ ಕರನ್ ಪಡೆದುಕೊಂಡರು. ಪಂದ್ಯದ ನಂತರ ಮಾತನಾಡಿದ ಸ್ಯಾಮ್ ಕರನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ಪ್ರದರ್ಶನವನ್ನು ಉತ್ತಮಗೊಳಿಸಲು ಐಪಿಎಲ್ ನನಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಮಾತ್ರವಲ್ಲದೆ, ದೊಡ್ಡ ಪಂದ್ಯಗಳಲ್ಲಿ, ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಲು ಕೂಡ ಐಪಿಎಲ್‌ನಲ್ಲಿ ಆಡಿದ್ದು ಸಹಾಯಕ್ಕೆ ಬಂದಿತು ಎಂದು ಹೇಳಿದ್ದಾರೆ. ಸ್ಯಾಮ್ ಕರನ್ ಮತ್ತು ಬೆನ್ ಸ್ಟೋಕ್ಸ್ ಅವರ ಅತ್ಯುತ್ತಮ ಆಟದ ನೆರವಿನಿಂದ ಇಂಗ್ಲೆಂಡ್ ಸುಲಭವಾಗಿ ಜಯ ಸಾಧಿಸಿತು.

ಮತ್ತೆ ಐಪಿಎಲ್‌ನಲ್ಲಿ ಆಡುತ್ತೇನೆ ಎಂದ ಕರನ್
"ಐಪಿಎಲ್‌ನಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ದೊಡ್ಡ ಆಟಗಾರರ ಜೊತೆ ಆಡಿದ ಅನುಭವ ನನಗೆ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಯಿತು. ನಾನು ಯಾವಾಗಲೂ ಕಲಿಯಲು ಬಯಸುತ್ತೇನೆ. ನನ್ನ ಆಟವನ್ನು ಸುಧಾರಿಸಿಕೊಳ್ಳಲು ಬಯಸುತ್ತೇನೆ. ಮತ್ತೆ, ನಾನು ಐಪಿಎಲ್‌ಗೆ ಹಿಂತಿರುಗುತ್ತೇನೆ" ಎಂದು ಸ್ಯಾಮ್ ಕರನ್ ಹೇಳಿದ್ದಾರೆ.
ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು ನಂತರ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡರು. ಅಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿದ್ದರು. 2021ರಲ್ಲಿ ಗಾಯದ ಕಾರಣ ಸ್ಯಾಮ್ ಕರನ್ ಐಪಿಎಲ್‌ನಲ್ಲಿ ಆಡಲಿಲ್ಲ.
"ಇದು ಉತ್ತಮ ಪಿಚ್ ಆಗಿತ್ತು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸವಾಲಿತ್ತು. ಈ ಗೆಲುವಿನಿಂದ ನಾವು ಸಂತೋಷವಾಗಿದ್ದೇವೆ," ಎಂದು ಅವರು ಹೇಳಿದರು.
Pak vs Eng: ಪಾಕಿಸ್ತಾನದ ಆಟವನ್ನು ನಿರಾಶೆಯಿಂದ ನೋಡಿದ ಅಭಿಮಾನಿ ಚಿತ್ರ ವೈರಲ್

5 ವಿಕೆಟ್‌ಗಳ ಜಯ ಸಾಧಿಸಿದ ಇಂಗ್ಲೆಂಡ್
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಶಾನ್ ಮಸೂದ್ (38) ಮತ್ತು ನಾಯಕ ಬಾಬರ್ ಅಜಮ್ (32) ಮಾತ್ರ ರನ್ ಗಳಿಸಲು ಸಫಲರಾದರು. ಸ್ಯಾಮ್ ಕರನ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
138 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 5.3 ಓವರ್‌ಗಳಲ್ಲಿ 45 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ಬೆನ್ ಸ್ಟೋಕ್ಸ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅಜೇಯ 52 ರನ್ ಮತ್ತು ಮೊಯಿನ್ ಅಲಿ 13 ಎಸೆತಗಳಲ್ಲಿ 19 ರನ್ ಗಳಿಸುವ ಮೂಲ ಇಂಗ್ಲೆಂಡ್ ಗೆಲುವನ್ನು ಸುಲಭವಾಗಿಸಿದರು.

ಪಂದ್ಯಾವಳಿ ಆಟಗಾರ ಪ್ರಶಸ್ತಿ ಗೆದ್ದ ಕಿರಿಯ ಆಟಗಾರ
ಸ್ಯಾಮ್ ಕರಾನ್ ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಿಂದ 13 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 3.4 ಓವರ್ ಗಳಲ್ಲಿ 10 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ 3 ವಿಕೆಟ್ ಪಡೆದು ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದ್ದರು.
ಸ್ಯಾಮ್ ಕರನ್ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎನ್ನುವ ಕೀರ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications