For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌: ಸ್ಪಿನ್ನರ್‌ಗಳಲ್ಲಿ ಪಾಕ್‌ನ ಸನಾ ಅತ್ಯಧಿಕ ವಿಕೆಟ್ ಸಾಧಕಿ

Sana Mir becomes highest wicket-taking spinner in ODIs

ಬೆನೊನಿ, ಮೇ 13: ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಸನಾ ಮಿರ್ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಸ್ಪಿನ್ನರ್‌ಗಳಲ್ಲಿ ಅತ್ಯಧಿಕ ವಿಕೆಟ್ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸನಾ ಒಟ್ಟು 147 ವಿಕೆಟ್‌ಗಳೊಂದಿಗೆ ಸ್ಪಿನ್ನರ್‌ಗಳಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಏಕದಿನ ಅತ್ಯಧಿಕ ವಿಕೆಟ್ ದಾಖಲೆ ಭಾರತದ ವೇಗಿ ಜೂಲನ್ ಗೋಸ್ವಾಮಿ (218) ಹೆಸರಿನಲ್ಲಿದೆ.

ಐಸಿಸಿ ಚಾಂಪಿಯನ್‌ಷಿಪ್‌ಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡದ ಬೌಲರ್ ಸನಾ, ಮೇ 12ರಂದು ನಡೆದ ಪಂದ್ಯಕ್ಕೂ ಮೊದಲು 146 ವಿಕೆಟ್ ದಾಖಲೆ ಹೊಂದಿದ್ದರು. ಆದರೆ ಭಾನುವಾರದ (ಮೇ 12) ಪಂದ್ಯದಲ್ಲಿ ಸನಾ ಪಡೆದ ಏಕಮಾತ್ರ ವಿಕೆಟ್ ಅವರನ್ನು ವಿಶ್ವ ಶ್ರೇಷ್ಠ ಸ್ಪಿನ್ನರ್ ಸಾಲಿನಲ್ಲಿ ಗುರುತಿಸುವಂತೆ ಮಾಡಿದೆ.

ಬೆನೊನಿ ವಿಲ್ಲೋಮೊರೆ ಪಾರ್ಕ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ತನ್ನ 118ನೇ ಏಕದಿನ ಇನ್ನಿಂಗ್ಸ್‌ಗಾಗಿ ಮೈದಾನಕ್ಕಿಳಿದಿದ್ದ ಸನಾ, ಎದುರಾಳಿ ತಂಡದ ಲೂಯನ್ಸ್ ಸುನ್ (80 ರನ್, 59 ಎಸೆತ) ಅವರನ್ನು ಔಟ್ ಮಾಡುವ ಮೂಲಕ ಪಂದ್ಯದ ಫಲಿತಾಂಶವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತಂಡಗಳ ಈ ಪಂದ್ಯ 265 ರನ್‌ಗಳಿಂದ ಸಮಬಲಗೊಂಡಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ, ಲಿಝೆಲ್ ಲೀ 57, ಲಾರಾ ವೊಲ್ವಾರ್ಡ್ 56, ನಾಯಕಿ ಲೂಯನ್ಸ್ ಸುನ್ ಅರ್ಧ ಶತಕದೊಂದಿಗೆ 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 265 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಪಾಕ್, ಜಾವೆರಿಯಾ ಖಾನ್ 74, ಅಲಿಯಾ ರಿಯಾಝ್ 71 ರನ್‌ ಕೊಡುಗೆಯೊಂದಿಗೆ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಪೇರಿಸಿತು.

Story first published: Monday, May 13, 2019, 9:43 [IST]
Other articles published on May 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+