Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್‌ನ ಆಸಿಫ್‌ ಅಲಿಗೆ ನೆರವಿತ್ತು ಕ್ರೀಡಾಸ್ಫೂರ್ತಿ ಮೆರೆದ ಸಂದೀಪ್ ಲಮಿಚಾನೆ

Sandeep Lamichhane assists Pakistan’s Asif Ali with English translation

ಟ್ರನಿಡಾಡ್: ಪಾಕಿಸ್ತಾನದ ಬ್ಯಾಟ್ಸ್‌ಮನ್ ಆಸಿಫ್ ಅಲಿ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ 3ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಜಮೈಕಾ ತಲೈವಾಸ್ ತಂಡ 5 ವಿಕೆಟ್ ಗೆಲುವನ್ನಾಚರಿಸಿತು. ಆಕರ್ಷಕ ಆಟಕ್ಕಾಗಿ ಆಸಿಫ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲು ಹೋದ ಆಸಿಫ್‌ಗೆ ಇಂಗ್ಲಿಷ್ ಬರಬೇಕಲ್ಲ? ತನಗೆ ಇಂಗ್ಲಿಷ್ ಪೂರ್ತಿಯಾಗಿ ಬರಲ್ಲ, ತಾನು ಇಂಗ್ಲೀಷ್ ಕಲಿಯುವ ಪ್ರಯತ್ನದಲ್ಲಿದ್ದೇನೆ ಎಂದು ಆಸಿಫ್ ಹೇಳುವಷ್ಟರಲ್ಲೇ ನೇಪಾಳ ಕ್ರಿಕೆಟರ್ ಸಂದೀಪ್ ಲಮಿಚಾನೆ ತನ್ನ ತಂಡದ ಸಹ ಆಟಗಾರನ ನೆರವಿಗೆ ಧಾವಿಸುವ ಮೂಲಕ ಗಮನ ಸೆಳೆದರು.

ಆಸಿಫ್ ಹಿಂದಿಯಲ್ಲಿ ಹೇಳಿದ್ದನ್ನು ಲಮಿಚಾನೆ ಇಂಗ್ಲಿಷ್‌ಗೆ ಅನುವಾದಿಸಿ ಹೇಳಿದರು. ಪಂದ್ಯದಲ್ಲಿ ಆಸಿಫ್ 27 ಎಸೆತಗಳಲ್ಲಿ 47 ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾದರೆ, ತಲೈವಾಸ್ ಪರ 4 ಓವರ್ ಎಸೆದಿದ್ದ ಸಂದೀಪ್ ಲಮಿಚಾನೆ 23 ರನ್ ನೀಡಿ 1 ವಿಕೆಟ್ (ನಜೀಬುಲ್ಲ ಝದ್ರನ್) ಪಡೆದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸೇಂಟ್ ಲೂಸಿಯಾ ಝೌಕ್ಸ್ ತಂಡ, ರೋಸ್ಟನ್ ಚೇಸ್ 52 ರನ್ ನೆರವಿನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 158 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಜಮೈಕಾ ತಲೈವಾಸ್, ಗ್ಲೆನ್ ಫಿಲಿಪ್ಸ್ 44, ಆಸಿಫ್ ಅಲಿ ಅಜೇಯ 47 ರನ್‌ನೊಂದಿಗೆ 18.5 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 160 ರನ್ ಬಾರಿಸಿತು.

Story first published: Friday, August 21, 2020, 9:54 [IST]
Other articles published on Aug 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+