ತಂಡದಿಂದ ಸಚಿನ್ ತೆಂಡೂಲ್ಕರ್ ಅವರನ್ನು ಕೈ ಬಿಡಲು ಬಿಸಿಸಿಐ ನಿರ್ಧರಿಸಿತ್ತು: ಸಂದೀಪ್ ಪಾಟೀಲ್ ಸ್ಫೋಟಕ ಹೇಳಿಕೆ
ಟೀಮ್ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ ಮಹಾನ್ ಆಟಗಾರ. ಇವರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳಿವೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. 2011ರ ಬಳಿಕ ಇವರ ಫಾರ್ಮ್ ಕುಸಿಯಿತು. ಇದರ ಹೊರತಾಗಿ ಇವರನ್ನು ಕೈ ಬಿಡುವ ಬಗ್ಗೆ ಯಾರೂ ಯೋಚಿಸಿರಲಿಲ್ಲ. ಆದರೆ ಈಗ ಒಂದು ಸುದ್ದಿ ಹೊರ ಬಂದಿದ್ದು, ಟೀಮ್ ಇಂಡಿಯಾದ ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಹೊಸ ಹೇಳಿಕೆ ನೀಡಿದ್ದಾರೆ.
2012 ರಲ್ಲಿ, ಸಚಿನ್ ತುಂಬಾ ಕಳಪೆ ಫಾರ್ಮ್‌ನಲ್ಲಿದ್ದಾಗ, ಬಿಸಿಸಿಐ ಅವರನ್ನು ಬದಲಾಯಿಸಲು ಪರಿಗಣಿಸುತ್ತಿತ್ತು ಎಂದು ಸಂದೀಪ್ ಪಾಟೀಲ್ ಬಹಿರಂಗಪಡಿಸಿದರು. ವಿಕ್ಕಿ ಲಾಲ್ವಾನಿ ಅವರ ಯೂಟ್ಯೂಬ್ ಶೋನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಆಯ್ಕೆ ಸಮಿತಿಯು ಅವರನ್ನು ತೆಗೆದುಹಾಕಲು ಯೋಜಿಸುತ್ತಿತ್ತು ಎಂದು ತಿಳಿಸಿದ್ದಾರೆ. ಮುಂದೆ ಮಾತನಾಡಿದ ಆಯ್ಕೆ ಸಮಿತಿಯು ಆಟಗಾರನನ್ನು ನಿವೃತ್ತಿ ಹೊಂದುವಂತೆ ಒತ್ತಾಯಿಸುವ ಅಧಿಕಾರ ಹೊಂದಿಲ್ಲ ಎಂದು ಪಾಟೀಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2012ರಲ್ಲಿ ಸಚಿನ್ ಕಳಪೆ ಪ್ರದರ್ಶನ
ತವರಿನಲ್ಲಿ ಟೀಮ್ ಇಂಡಿಯಾ 2011ರಲ್ಲಿ ವಿಶ್ವಕಪ್ ಗೆದ್ದಿತು. ಈ ವಿಶ್ವಕಪ್ ಗೆದ್ದ ಬಳಿಕ 2012ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಫಾರ್ಮ್ ಕಳಪೆಯಾಗಿತ್ತು. ಈ ವರ್ಷದಲ್ಲಿ ಆಡಿದ ಒಂಬತ್ತು ಟೆಸ್ಟ್‌ಗಳಲ್ಲಿ ಅವರು 23.80 ಸರಾಸರಿ ಹೊಂದಿದ್ದರು. ಅಲ್ಲದೆ 10 ಏಕದಿನ ಪಂದ್ಯಗಳಲ್ಲಿ ಅವರು ಕೇವಲ 31.50 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಅವಧಿಯಲ್ಲಿ, ಸಚಿನ್ ತೆಂಡೂಲ್ಕರ್ ಒಂದೇ ಒಂದು ಶತಕ ಗಳಿಸಲಿಲ್ಲ.
ಟೀಮ್ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ತಂಡದ ಸದಸ್ಯ ಸಂದೀಪ್ ಪಾಟೀಲ್ ಅವರ ಅಧಿಕಾರ ಅವಧಿಯಲ್ಲಿ ಹಲವು ಸ್ಟಾರ್ ಆಟಗಾರರನ್ನು ಕೈಬಿಟ್ಟರು. ಇದರಲ್ಲಿ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಸಹ ಸೇರಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಯುವರಾಜ್ ಅವರನ್ನು ತಂಡದಿಂದ ಕೈಬಿಡಲು ಯೋಚಿಸಿರಲಿಲ್ಲ ಎಂದು ಸಂದೀಪ್ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.
ಯೋಗರಾಜ್ ಸಿಂಗ್ ಧೋನಿ ಮೇಲೆ ಪದೇ ಪದೇ ಆರೋಪ ಮಾಡುವುದನ್ನು ಸಹ ಈ ವೇಳೆ ಉಲ್ಲೇಖಿಸಿದರು. ಅವರ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಅವರು ಹೇಳಿದರು. ಯೋಗರಾಜ್ ಅಂತಹ ಹೇಳಿಕೆಯನ್ನು ಹೇಗೆ ನೀಡಬಹುದು? ಎಂದು ಸಂದೀಪ್ ಪಾಟೀಲ್ ಪ್ರಶ್ನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications