Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ಟೆಸ್ಟ್ ದಾಖಲೆ ಮುರಿದ ಕುಮಾರ ಸಂಗಕ್ಕಾರ

ವೆಲ್ಲಿಂಗ್ಟನ್, ಜ. 3: ಕ್ರಿಕೆಟ್ ದೇವರು ಎನ್ನಿಸಿಕೊಂಡಿರುವ ಭಾರತದ ಜೀವಂತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಅಳಿಸಿಹೋಗಿದೆ.

ಅತ್ಯಂತ ವೇಗವಾಗಿ 12,000 ರನ್ ಗಡಿ ಮುಟ್ಟಿದ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ಪಾತ್ರರಾಗಿದ್ದಾರೆ. ಅವರು ಶನಿವಾರ ಪಂದ್ಯ ಆರಂಭಿಸಿದಾಗ ದಾಖಲೆಗೆ ಕೇವಲ 5 ರನ್‌ಗಳ ಅಗತ್ಯವಿತ್ತು.

ಸಂಗಕ್ಕಾರ ಅವರು 130 ಟೆಸ್ಟ್ ಪಂದ್ಯಗಳ 223 ಇನ್ನಿಂಗ್ಸ್‌ಗಳಲ್ಲಿ 12,000 ರನ್ ಗಡಿ ದಾಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟ್ರೆಂಟ್ ಬೋಲ್ಟ್ ಅವರ ಎಸೆತದಲ್ಲಿ ಸಂಗಕ್ಕಾರ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರು.

kumar

2008ರಿಂದಲೂ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. 152 ಟೆಸ್ಟ್ ಪಂದ್ಯಗಳ 247ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರು. 2010ರಲ್ಲಿ ರಿಕಿ ಪಾಂಟಿಂಗ್ ಕೂಡ 247ನೇ ಇನ್ನಿಂಗ್ಸ್‌ನಲ್ಲಿಯೇ 12 ಸಾವಿರ ರನ್ ಗಳಿಸಿ ಸಚಿನ್ ದಾಖಲೆ ಸರಿಗಟ್ಟಿದ್ದರು. ಆದರೆ 13 ಸಾವಿರ, 14 ಸಾವಿರ ಹಾಗೂ 15 ಸಾವಿರ ರನ್ ಗಡಿಯನ್ನು ಅತ್ಯಂತ ವೇಗವಾಗಿ ದಾಟಿದ ದಾಖಲೆ ಇನ್ನೂ ಸಚಿನ್ ಹೆಸರಿನಲ್ಲಿಯೇ ಇದೆ.

2000 ನೇ ಇಸ್ವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯ ಆಡಿದ್ದ ಸಂಗಕ್ಕಾರ, 12 ಸಾವಿರ ರನ್ ಗಡಿ ದಾಟಿದ ಜಗತ್ತಿನ 5ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು (ಟಾಪ್ 5)

1) 15,921 - ಸಚಿನ್ ತೆಂಡೂಲ್ಕರ್ (ಭಾರತ) 200 ಪಂದ್ಯಗಳು

2) 13,378 - ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 168

3) 13,289 - ಜಾಕಸ್ ಕಾಲಿಸ್ (ದಕ್ಷಿಣ ಆಫ್ರಿಕಾ) 166

4) 13,288 - ರಾಹುಲ್ ದ್ರಾವಿಡ್ (ಭಾರತ) 164

5) 12,028 - ಕುಮಾರ ಸಂಗಕ್ಕಾರ (ಶ್ರೀಲಂಕಾ) 130 (ಶನಿವಾರ 33 ರನ್ ಗಳಿಸಿ ಇನ್ನೂ ಆಡುತ್ತಿದ್ದಾಗಿನ ಅಂಕಿ ಅಂಶ)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+